ವಾಷಿಂಗ್ಟನ್: ಭಾರತೀಯರ ಕುರಿತಾಗಿ ಅವಹೇಳನಕಾರಿಯಾಗಿ ಮಾತನಾಡಿದ್ದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ಏಮಿ ವ್ಯಾಕ್ಸ್ ವಿರುದ್ಧ ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ಛೀಮಾರಿ ಹಾಕಿದ್ದಾರೆ.
ಏಮಿ ವ್ಯಾಕ್ಸ್ ಬಗ್ಗೆ ಪ್ರತಿಕ್ರಿಯಿಸಿರುವ ಭಾರತ ಮೂಲದ ರಾಜಕೀಯ ನಾಯಕ ರಾಜಾ ಕೃಷ್ಣಮೂರ್ತಿ, “ಟ್ರಂಪ್ ಆಳ್ವಿಕೆಯ ಅನಂತರ ಬೇರೆಯವರನ್ನು “shithole’ ಎನ್ನುವವರು ಯಾರೂ ಇಲ್ಲ ಎಂದು ತಿಳಿದುಕೊಂಡಿದ್ದೆವು.
ಆದರೆ ಈಗ ಪ್ರಾಧ್ಯಾಪಕಿಯೇ ಈ ರೀತಿ ಹೇಳುತ್ತಿರುವುದು ಅಸಹ್ಯ ಹುಟ್ಟಿಸಿದೆ’ ಎಂದಿದ್ದಾರೆ.
ಇದನ್ನೂ ಓದಿ:ಕೇಬಲ್ ಕಾರ್ ಅಪಘಾತ: ಮೃತರಿಗೆ 25 ಲಕ್ಷ ರೂ. ಪರಿಹಾರ
ಇತ್ತೀಚೆಗೆ ಮಾಧ್ಯಮವೊಂದರ ಸಂದರ್ಶನದಲ್ಲಿ ಭಾಗವಹಿಸಿದ್ದ ಏಮಿ ಅವರು, “ಕರಿಯರು ಮತ್ತು ಪಾಶ್ಚಿಮಾತ್ಯ ದೇಶಗಳಿಗೆ ಸೇರದವರು, ಅಮೆರಿಕನ್ನರ ಅಥವಾ ಬಿಳಿಯರ ಸಾಧನೆ ಕಂಡು ಅಸಮಾಧಾನಗೊಂಡಿದ್ದಾರೆ. ಅವರು ಬ್ರಾಹ್ಮಣರಾಗಿರುವುದರಿಂದ ತಾವೇ ಶ್ರೇಷ್ಠರು ಎಂಬ ಭ್ರಮೆ ಅವರಲ್ಲಿದೆ” ಎಂದು ಭಾರತದ ಹೆಸರನ್ನು ನೇರವಾಗಿ ಎತ್ತದೆ ಟೀಕಿಸಿದ್ದರು.