Advertisement
ಆದರೆ ಭರಾರಾ ಮಾತ್ರ ರಾಜಿನಾಮೆ ನೀಡಲು ನಿರಾಕರಿಸಿದ್ದರು. ಈ ಕಾರಣಕ್ಕಾಗಿ ಅವರನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ತಂಡ ವಜಾ ಮಾಡಿದೆ. ಭ್ರಷ್ಟಾಚಾರ ವಿರೋಧಿ ಆಂದೋಲನದಿಂದ ಅಮೆರಿಕದಲ್ಲಿ ಮನೆಮಾತಾಗಿರುವ 48 ವರ್ಷದ ಭರಾರಾ ಅವರ ವಿಚಾರದಲ್ಲಿ ಟ್ರಂಪ್ ಆಡಳಿತ ನಡೆದುಕೊಂಡಿರುವ ರೀತಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಟೀಕೆ ವ್ಯಕ್ತವಾಗತೊಡಗಿದೆ. ಎಲ್ಲರಿಗೂ ಆಶ್ಚರ್ಯ ಹುಟ್ಟಿಸಿರುವ ಅಂಶವೆಂದರೆ ನವೆಂಬರ್ ತಿಂಗಳಲ್ಲಿ , ಅಂದರೆ ಟ್ರಂಪ್ ವಿಜಯ ಸಾಧಿಸಿದಾಗ ಅವರಿಗೆ ಶುಭಾಶಯ ತಿಳಿಸಲು ಪ್ರೀತ್ ಭರಾರಾ ಟ್ರಂಪ್ ಟವರ್‌ಗೆ ಭೇಟಿ ಕೊಟ್ಟಿದ್ದರು. ಆಗ ನಡೆದ ಸಭೆಯಲ್ಲಿ “ನೀವು ನಮ್ಮ ಆಡಳಿತದ ಭಾಗವಾಗಿ ಉಳಿಯಬೇಕು’ ಎಂದು ಖುದ್ದು ಟ್ರಂಪ್ ಅವರೇ ಭರಾರಾಗೆ ಕೇಳಿಕೊಂಡಿದ್ದರಂತೆ!
ಇನ್ನೊಂದೆಡೆ, ಅಮೆರಿಕದಲ್ಲಿ ಭಾರತೀಯರ ಮೇಲಿನ ಜನಾಂಗೀಯ ದಾಳಿ ಮುಂದುವರಿದೆ. ಫ್ಲೋರಿಡಾದಲ್ಲಿ ಭಾರತೀಯ- ಅಮೆರಿಕನ್ ವ್ಯಕ್ತಿಯ ಮಳಿಗೆಗೆ 64 ವರ್ಷದ ರಿಚರ್ಡ್ ಎಂಬ ವ್ಯಕ್ತಿಯು ಶನಿವಾರ ಬೆಂಕಿ ಹಚ್ಚಿದ್ದಾನೆ. ಅಂಗಡಿಯ ಬಾಗಿಲು ಮುಚ್ಚಿದ್ದರಿಂದ ಹೆಚ್ಚಿನ ಹಾನಿ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.