ವಾಷಿಂಗ್ಟನ್: ಬಿಲಿಯನ್ ಡಾಲರ್ ಕಂಪೆನಿ “ಓನ್ಲಿ ಫ್ಯಾನ್ಸ್” ಸಿಇಒ ಆಗಿದ್ದ ಅಮ್ರಾಪಾಲಿ ಗ್ಯಾನ್ 18 ತಿಂಗಳ ಬಳಿಕ ಹುದ್ದೆಯಿಂದ ಕೆಳಗಿಳಿದ್ದಾರೆ.
ವಯಸ್ಕರಿಗೆ ಸಂಬಂಧಿಸಿದ ಕಂಟೆಂಟ್ ಗಳನ್ನು ಪ್ರಿಮಿಯಂ ಆಗಿ ನೀಡುವ “ಓನ್ಲಿ ಫ್ಯಾನ್ಸ್” ಬಿಲಿಯನ್ ಡಾಲರ್ ಗಳಿಸುವ ಕಂಪೆನಿಗಳಲ್ಲಿ ಒಂದಾಗಿದೆ. ಈ ಕಂಪೆನಿಗೆ ಇಂಡಿಯನ್ -ಅಮೆರಿಕನ್ ಮೂಲದ ಅಮ್ರಾಪಾಲಿ ಗ್ಯಾನ್ ಅವರು 2021 ರಲ್ಲಿ ಸಿಇಒ ಆಗಿ ನೇಮಕಗೊಂಡಿದ್ದರು. ಸಿಇಒ ಆಗುವ ಮೊದಲು ಅವರು ಅದೇ ಕಂಪೆನಿಯಲ್ಲಿ ಚೀಫ್ ಮಾರ್ಕೆಟಿಂಗ್ ಹಾಗೂ ಕಮ್ಯೂನಿಕೇಷನ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದರು. ಆ ಬಳಿಕ ಸಿಇಒ ಆಗಿದ್ದರು.ಇವರು ಸಿಇಒ ಆಗಿ ನೇಮಕಗೊಂಡಿದ್ದು ಒಂದಷ್ಟು ಸುದ್ದಿಯಾಗಿತ್ತು. ಇದೀಗ ಎರಡೂವರೆ ವರ್ಷದ ಬಳಿಕ ಸಿಇಒ ಹುದ್ದೆಯಿಂದೆ ಕೆಳಗಿಳಿದು ಹೊಸ ಯೋಜನೆಯನ್ನು ಆರಂಭಿಸುವುದರ ಬಗ್ಗೆ ಅಮ್ರಾಪಾಲಿ ಗ್ಯಾನ್ ಅವರು ಹೇಳಿದ್ದಾರೆ.
ಓನ್ಲಿ ಫ್ಯಾನ್ಸ್‌ನಲ್ಲಿ ನಲ್ಲಿ ಕೆಲಸ ಮಾಡುತ್ತಾ ಬಹುತೇಕ ಮೂರು ವರ್ಷಗಳು ಕಳೆದಿವೆ. ಈ ಅವಧಿಯಲ್ಲಿ ವ್ಯಾಪಾರಕ್ಕಾಗಿ ಮಹತ್ವದ ಗುರಿ ಸಾಧನೆಯನ್ನು ಮಾಡಿರುವುದು ಖುಷಿ ತಂದಿದೆ. ಈ ಉದ್ಯಮದ ಸುರಕ್ಷತೆಯ ಮೇಲೆ ಕೇಂದ್ರೀಕರಿಸುವುದು, ಸಂಸ್ಥೆಯನ್ನು ಜಾಗತಿಕವಾಗಿ ವಿಸ್ತರಿಸುವುದು ಮತ್ತು ರಚನೆಕಾರರು ಮತ್ತು ಅಭಿಮಾನಿಗಳ ವೈವಿಧ್ಯಮಯ ಸಮುದಾಯವನ್ನು ಬೆಳೆಸಿದರ ಬಗ್ಗೆ ಖುಷಿಯಿದೆ ಎಂದು ಅವರು ಹೇಳಿದ್ದಾರೆ.
ಅವರ ಜಾಗಕ್ಕೆ ಸಿಇಒ ಆಗಿ ಕೀಲಿ ಬ್ಲೇರ್ ಅವರು ಬರಲಿದ್ದಾರೆ ಎಂದು ಅವರು ಹೇಳಿದ್ದಾರೆ. ಹೊಸ ಉದ್ಯಮವನ್ನು ಪ್ರಾರಂಭಿಸುವುದು ಸೇರಿದಂತೆ ಹೊಸ ಅವಕಾಶಗಳನ್ನು ಮುಂದುವರಿಸುವ ಸಲುವಾಗಿ ಈ ಹುದ್ದೆಯನ್ನು ಬಿಡುವುದಾಗಿ ಗ್ಯಾನ್ ಟ್ವಿಟರ್ ನಲ್ಲಿ ಹೇಳಿದ್ದಾರೆ.