Advertisement

ಕೊರೊನಾ ಪೀಡಿತ ಇರಾನ್ ನಿಂದ 58 ಭಾರತೀಯರನ್ನು ಕರೆತಂದ IAF ಗ್ಲೋಬ್ ಮಾಸ್ಟರ್

11:51 PM Mar 20, 2020 | Hari Prasad |

ನವದೆಹಲಿ: ಕೊರೊನಾ ವೈರಸ್ ಪೀಡಿತ ಇರಾನ್ ನಿಂದ 58 ಯಾತ್ರಿಕರನ್ನು ಭಾರತಕ್ಕೆ ವಾಪಾಸು ಕರೆತರಲಾಗಿದೆ. ಭಾರತೀಯ ವಾಯುಸೇನೆಯ ಮಿಲಿಟರಿ ವಿಮಾನ ಸಿ-17 ಗ್ಲೋಬ್ ಮಾಸ್ಟರ್ ಇದೀಗ ಪ್ರಥಮ ಸುತ್ತಿನಲ್ಲಿ ಈ ಭಾರತೀಯ ಯಾತ್ರಿಕರನ್ನು ಕರೆತಂದಿದೆ. ಈ ಯಾತ್ರಿಕರನ್ನು ಹೊತ್ತ ಮಿಲಿಟರಿ ಮಿಮಾನ ಗಾಝಿಯಾಬಾದ್ ನಲ್ಲಿರುವ ಹಿಂಡೋನ್ ವಾಯುನೆಲೆಗೆ ಇಂದು ಬಂದಿಳಿದಿದೆ.

Advertisement

ಇರಾನ್ ನಲ್ಲಿ ಸಂಕಷ್ಟದಲ್ಲಿದ್ದ 58 ಭಾರತೀಯ ಯಾತ್ರಿಕರನ್ನು ಹೊತ್ತ ಈ ವಿಮಾನ ಉದ್ದೇಶಿತ ವಾಯುನೆಲೆಯಲ್ಲಿ ಯಶಸ್ವಿಯಾಗಿ ಬಂದಿಳಿಯುತ್ತಿದ್ದಂತೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ‘ಮಿಷನ್ ಕಂಪ್ಲೀಟೆಡ್‍’ ಎಂದು ಟ್ವೀಟ್ ಮಾಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next