Advertisement

ಓಮಿಕ್ರಾನ್ ನ ಬಿಎಫ್ 7 ಉಪತಳಿ ಬಗ್ಗೆ ತಪ್ಪು ಮಾಹಿತಿ ಹಬ್ಬಿಸಬೇಡಿ; ಚೀನ ಸ್ಥಿತಿ ಭಾರತಕ್ಕೆ ಎದುರಾಗಲ್ಲ…

12:22 PM Dec 24, 2022 | Team Udayavani |

ನವದೆಹಲಿ: ಚೀನಾ ಜನರನ್ನು ತತ್ತರಿಸುವಂತೆ ಮಾಡಿರುವ ಬಿಎಫ್ 7 ಕೋವಿಡ್ ಉಪತಳಿಯು ಓಮಿಕ್ರಾನ್ ಇತರ ತಳಿಯಂತೆಯೇ ಅಷ್ಟೇ. ಬಿಎಫ್ 7 ವೇಗವಾಗಿ ಹರಡಬಲ್ಲದು, ಆದರೆ ಇದು ತೀವ್ರ ಸ್ವರೂಪದ ಪರಿಣಾಮ ಬೀರುವುದಿಲ್ಲ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್)ನ ಮಾಜಿ ವಿಜ್ಞಾನಿ ನ್ಯೂಸ್ 18 ಡಾಟ್ ಕಾಮ್ ಗೆ ತಿಳಿಸಿರುವುದಾಗಿ ವರದಿಯಾಗಿದೆ.

Advertisement

ಇದನ್ನೂ ಓದಿ:ದುಬಾರಿ ಓಲಾ ಸ್ಕೂಟರ್‌ ಬಳಸಿಕೊಂಡು ಕ್ರಿಕೆಟ್‌ ಕಾಮೆಂಟ್ರಿ ಮಾಡಿದ ವ್ಯಕ್ತಿ.! ವಿಡಿಯೋ ವೈರಲ್

ಐಸಿಎಂಆರ್ ನ ಡಾ.ಸಮೀರನ್ ಪಾಂಡಾ ಅವರ ಪ್ರಕಾರ, ಬಿಎಫ್ 7 ಕೋವಿಡ್ ಉಪತಳಿಯ ಮಾರಕತೆಯ ಬಗ್ಗೆ ತಪ್ಪು ಮಾಹಿತಿ ಹರಡದಿರುವಂತೆ ಕೇಂದ್ರ ಸರ್ಕಾರ ಮುತುವರ್ಜಿ ವಹಿಸಬೇಕೆಂದು ತಿಳಿಸಿದ್ದಾರೆ.

ಆಸ್ಪತ್ರೆಯ ಹಾಸಿಗೆಗಳು, ಔಷಧ ಮತ್ತು ಬೂಸ್ಟರ್ ಡೋಸ್ ಬಗ್ಗೆ ಕೇಂದ್ರ ಸರ್ಕಾರ ಹೆಚ್ಚು ಗಮನಹರಿಸಬೇಕು ಎಂದಿರುವ ಡಾ.ಪಾಂಡಾ,  ಮುಖ್ಯವಾಗಿ ಸುಳ್ಳು ಮಾಹಿತಿ ಹರಡುವವರ ವಿರುದ್ಧ ನಿಗಾ ಇಡಬೇಕೆಂದು ಸಲಹೆ ನೀಡಿರುವುದಾಗಿ ವರದಿ ವಿವರಿಸಿದೆ.

ಬಿಎಫ್ 7 ಕೋವಿಡ್ ಉಪತಳಿಯ ಕುರಿತು ಸಾಮಾಜಿಕ ಜಾಲತಾಣ, ವಾಟ್ಸಪ್ ಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಮತ್ತು ಸಂದೇಶಗಳಿಂದ ಜನರು ಭೀತಿಗೆ ಒಳಗಾಗುವಂತಾಗಿದೆ ಎಂದು ಡಾ.ಪಾಂಡಾ ತಿಳಿಸಿದ್ದಾರೆ.

Advertisement

ಜನರಲ್ಲಿ ಅನಾವಶ್ಯಕವಾಗಿ ಗೊಂದಲ, ಭೀತಿ ಮೂಡಿಸುವ ಸುದ್ದಿಗಳ ಕುರಿತು ಫ್ಯಾಕ್ಟ್ ಚೆಕಿಂಗ್ ಸಂವಹನದ ಮೂಲಕ ಅನುಮಾನವನ್ನು ಹೋಗಲಾಡಿಸುವ ಕೆಲಸವನ್ನು ಕೇಂದ್ರ ಸರ್ಕಾರ ಕಾಳಜಿ ವಹಿಸಬೇಕಾಗಿದೆ ಎಂದು ಡಾ.ಪಾಂಡಾ ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next