Advertisement

ಆಸೀಸ್ ವಿರುದ್ಧ ಯಶಸ್ವಿ ಅಭ್ಯಾಸ: ಕೊಹ್ಲಿ ಫೀಲ್ಡಿಂಗ್- ಶಮಿ ಬೌಲಿಂಗ್ ಗೆ ಒಲಿದ ಜಯ

01:16 PM Oct 17, 2022 | Team Udayavani |

ಬ್ರಿಸ್ಬೇನ್: ಐಸಿಸಿ ಟಿ20 ವಿಶ್ವಕಪ್ ಕೂಟದ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ ಶುಭಾರಂಭ ಮಾಡಿದೆ. ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆದ ಪ್ರಾಕ್ಟೀಸ್ ಮ್ಯಾಚ್ ನಲ್ಲಿ ಟೀಂ ಇಂಡಿಯಾ ಆರು ರನ್ ಅಂತರದ ಜಯ ಸಾಧಿಸಿದೆ.

Advertisement

ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಏಳು ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿದರೆ, ಜವಾಬಿತ್ತ ಆಸೀಸ್ 180 ರನ್ ಗಳಿಗೆ ಆಲೌಟಾಯಿತು. ಕಳೆದ ವರ್ಷದ ಟಿ20 ವಿಶ್ವಕಪ್ ಬಳಿಕ ಮತ್ತೆ ಮೊದಲ ಬಾರಿಗೆ ಟೀಂ ಇಂಡಿಯಾ ಜೆರ್ಸಿಯಲ್ಲಿ ಟಿ20 ಪಂದ್ಯವಾಡಿದ ಮೊಹಮ್ಮದ್ ಶಮಿ ಅದ್ಭುತ ಬೌಲಿಂಗ್ ಮಾಡಿ ಗಮನ ಸೆಳೆದರು.

ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ ತಂಡಕ್ಕೆ ರಾಹುಲ್ ಉತ್ತಮ ಆರಂಭ ಒದಗಿಸಿದರು. 33 ಎಸೆತಗಳಿಂದ ರಾಹುಲ್ 57 ರನ್ ಮಾಡಿದರೆ, ಸೂರ್ಯಕುಮಾರ್ ಯಾದವ್ 50 ರನ್ ಗಳಿಸಿದರು. ದಿನೇಶ್ ಕಾರ್ತಿಕ್ 20 ರನ್, ವಿರಾಟ್ 19 ರನ್ ಮಾಡಿದರು. ಆಸೀಸ್ ಪರ ಕೇನ್ ರಿಚರ್ಡ್ ಸನ್ ನಾಲ್ಕು ವಿಕೆಟ್ ಕಿತ್ತರು.

ಇದನ್ನೂ ಓದಿ:ವಿಜಯಪುರ ಪಾಲಿಕೆ ಚುನಾವಣೆ: ಅಂತಿಮ ಕ್ಷಣದಲ್ಲಿ ಕಾಂಗ್ರೆಸ್ ಪಟ್ಟಿ ಬಿಡುಗಡೆ

ಗುರಿ ಬೆನ್ನತ್ತಿದ ಆಸೀಸ್ ಗೆ ನಾಯಕ ಫಿಂಚ್ ಮತ್ತು ಮಾರ್ಶ್ ಉತ್ತಮ ಆರಂಭ ಒದಗಿಸಿದರು. ಫಿಂಚ್ 76 ರನ್ ಮಾಡಿದರೆ ಮಾರ್ಶ್ 35 ರನ್ ಗಳಿಸಿದರು. ಮ್ಯಾಕ್ಸ್ ವೆಲ್ 23 ರನ್ ಗಳಿಸಿದರು.

Advertisement

ಅಂತಿಮ ಓವರ್ ನಲ್ಲಿ ಆಸೀಸ್ ಗೆಲುವಿಗೆ 11 ರನ್ ಅಗತ್ಯವಿತ್ತು. ಈ ವೇಳೆ ನಾಯಕ ರೋಹಿತ್ ಶರ್ಮಾ ಚೆಂಡನ್ನು ಶಮಿಗೆ ನೀಡಿದರು. ಮೊದಲೆರಡು ಎಸೆತಗಳಲ್ಲಿ ತಲಾ ಎರಡು ರನ್ ಗಳು ಬಂತು. 19ನೇ ಓವರ್ ನಲ್ಲಿ ಅದ್ಭುತ ರನೌಟ್ ನಿಂದ ಗಮನ ಸೆಳೆದಿದ್ದ ಕೊಹ್ಲಿ ಮೂರನೇ ಎಸೆತದಲ್ಲಿ ಸೂಪರ್ ಕ್ಯಾಚ್ ಹಿಡಿದರು. ನಾಲ್ಕನೇ ಎಸೆತದಲ್ಲಿ ರನೌಟ್, ಉಳಿದ ಎರಡು ಎಸೆತಗಳಲ್ಲಿ ಎರಡು ಬೌಲ್ಡ್. ಹೀಗೆ ಶಮಿ ಕೊನೆಯ ಓವರ್ ನಲ್ಲಿ ನಾಲ್ಕು ರನ್ ನೀಡಿ ಮೂರು ವಿಕೆಟ್ ಕಿತ್ತರು.

Advertisement

Udayavani is now on Telegram. Click here to join our channel and stay updated with the latest news.

Next