Advertisement
13ನೇ ನಿಮಿಷದಲ್ಲಿ ಅಂಗದ್ ಬೀರ್ ಸಿಂಗ್, 20ನೇ ನಿಮಿಷ ದಲ್ಲಿ ಅರೈಜೀತ್ ಸಿಂಗ್ ಬಾರಿಸಿದ ಗೋಲು ಭಾರತದ ಪಾಲಿಗೆ ವರವಾಗಿ ಪರಣಮಿಸಿತು. ಹಾಗೆಯೇ ಪಾಕ್ ಅಕ್ರಮಣವನ್ನು ತಡೆದು ನಿಂತ ಗೋಲ್‌ಕೀಪರ್ ಶಶಿಕುಮಾರ್ ಮೋಹಿತ್ ಹೊನ್ನೇನಹಳ್ಳಿ ಕೂಡ ಪಂದ್ಯದ ಹೀರೋ ಎನಿಸಿದರು.
ಉತ್ತಮ್ ಸಿಂಗ್ ನಾಯಕತ್ವದ ಭಾರತ ಅಜೇಯವಾಗಿ ಈ ಕೂಟವನ್ನು ಮುಗಿ ಸಿತು. “ಪಾಕಿಸ್ಥಾನ ವಿರುದ್ಧದ ಲೀಗ್ ಪಂದ್ಯ 1-1ರಿಂದ ಡ್ರಾ ಆಗಿತ್ತು. ಅಲ್ಲಿನ ಕೊರತೆಗಳನ್ನು ಫೈನಲ್‌ನಲ್ಲಿ ನೀಗಿಸಿಕೊಳ್ಳುವುದು ನಮ್ಮ ಯೋಜನೆ ಆಗಿತ್ತು. ಇದು ಯಶಸ್ವಿಯಾಯಿತು’ ಎಂಬುದು ಉತ್ತಮ್ ಸಿಂಗ್ ಪ್ರತಿಕ್ರಿಯೆ.
ಇದೊಂದು ತಂಡ ಪ್ರಯತ್ನ ಎಂಬು ದಾಗಿ ಕೋಚ್ ಸಿ.ಆರ್. ಕುಮಾರ್ ಹೇಳಿದರು.
Related Articles
Advertisement
ವಿಶ್ವಕಪ್‌ಗೆ ಆಯ್ಕೆಈ ಸಾಧನೆಯಿಂದಾಗಿ ಭಾರತವೀಗ ಮಲೇಷ್ಯಾದಲ್ಲಿ ನಡೆಯುವ ಎಫ್‌ಐಎಚ್ ಜೂನಿಯರ್ ವಿಶ್ವಕಪ್ ಹಾಕಿ ಪಂದ್ಯಾವಳಿಗೆ ಆಯ್ಕೆಯಾಗಿದೆ. ಜತೆಗೆ ಭಾರತೀಯ ಹಾಕಿ ಫೆಡರೇಶನ್ ಪ್ರತೀ ಹಾಕಿ ಆಟಗಾರರಿಗೆ 2 ಲಕ್ಷ ರೂ. ಹಾಗೂ ಸಹಾಯಕ ಸಿಬಂದಿಗೆ ಒಂದು ಲಕ್ಷ ರೂ. ಬಹುಮಾನ ಘೋಷಿಸಿದೆ.
ಭಾರತೀಯ ಹಾಕಿ ಫೆಡರೇಶನ್ ಅಧ್ಯಕ್ಷ ದಿಲೀಪ್ ತಿರ್ಕಿ ಕಿರಿಯರ ಸಾಧನೆಯನ್ನು ಕೊಂಡಾಡಿದ್ದಾರೆ. “ಜೂನಿಯರ್ ಹಾಕಿಪಟುಗಳು ದೇಶ ವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ. ಸುಲ್ತಾನ್ ಆಫ್ ಜೊಹರ್ ಕಪ್ ಬಳಿಕ ತಂಡದಲ್ಲಿ ಹೊಸ ಜೋಶ್ ತುಂಬಿದೆ. ವಿಶ್ವಕಪ್‌ನಲ್ಲೂ ಚಾಂಪಿಯನ್ ಆಗುವ ನಂಬಿಕೆ ಇದೆ’ ಎಂದಿದ್ದಾರೆ.