Advertisement

ಶಿಫಾಲಿ- ಮಂಧನಾ ಬ್ಯಾಟಿಂಗ್ ಸಾಹಸ: ಮೊದಲ ಟಿ ಟ್ವೆಂಟಿ ಗೆದ್ದ ಭಾರತ

09:39 AM Nov 11, 2019 | keerthan |

ಸೈಂಟ್ ಲೂಸಿಯಾ: ಆರಂಭಿಕ ಆಟಗಾರ್ತಿಯರಾದ ಶಿಫಾಲಿ ವರ್ಮ ಮತ್ತು ಸ್ಮೃತಿ ಮಂಧನಾ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಭಾರತದ ಮಹಿಳೆಯರ ತಂಡ ವಿಂಡೀಸ್ ವಿರುದ್ಧದ ಮೊದಲ ಟಿ ಟ್ವೆಂಟಿ ಪಂದ್ಯವನ್ನು ಗೆದ್ದುಕೊಂಡಿದೆ.

Advertisement

ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಮಹಿಳೆಯರು ನಾಲ್ಕು ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿತು. ಗುರಿ ಬೆನ್ನತ್ತಿದ ವಿಂಡೀಸ್ ಕೇವಲ 101 ರನ್ ಗಳಿಗೆ ಒಂಬತ್ತು ವಿಕೆಟ್ ಕಳೆದುಕೊಂಡು 84 ರನ್ ಅಂತರದಿಂದ ಸೋಲನುಭವಿಸಿತು.

ಶಿಫಾಲಿ ವರ್ಮಾ 49 ಎಸೆತಗಳಿಂದ 73 ರನ್ ಬಾರಿಸಿದರೆ, ಸ್ಮ್ರತಿ ಮಂಧನಾ 67 ರನ್ ಗಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next