Advertisement

ಧೋನಿ-ಭುವನೇಶ್ವರ್‌ ಸಾಹಸ ಬ್ಯಾಟಿಂಗ್‌ ಭಾರತಕ್ಕೆ 3 ವಿಕೆಟ್‌ ರೋಚಕ ಜಯ

08:10 AM Aug 25, 2017 | Team Udayavani |

ಪಲ್ಲೆಕಿಲೆ: ಧೋನಿ ಮತ್ತು ಭುವನೇಶ್ವರ್‌ ಅವರ ಸಾಹಸದ ಬ್ಯಾಟಿಂಗ್‌ನಿಂದಾಗಿ ಭಾರತ ತಂಡವು ಗುರುವಾರ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲೂ ಶ್ರೀಲಂಕಾ ತಂಡವನ್ನು 3 ವಿಕೆಟ್‌ ಅಂತರದಿಂದ ಸೋಲಿಸಲು ಯಶಸ್ವಿಯಾಗಿದೆ.

Advertisement

ಮಳೆಯಿಂದಾಗಿ 47 ಓವರ್‌ಗಳಲ್ಲಿ 231 ರನ್‌ ಗಳಿಸುವ ಸವಾಲು ಪಡೆದಿದ್ದ ಭಾರತ ತಂಡವು ಉತ್ತಮ ಆರಂಭ ಪಡೆದಿದ್ದರೂ ಅಖೀಲ ಧನಂಜಯ ಅವರ ಮಾರಕ ದಾಳಿಗೆ ತತ್ತರಿಸಿ 131 ರನ್‌ ಗಳಿಸುವಷ್ಟರಲ್ಲಿ 7 ವಿಕೆಟ್‌ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತ್ತು. ಧೋನಿ ಹೊರತುಪಡಿಸಿ ಉಳಿದ ಪ್ರಮುಖ ಆಟಗಾರರು ಪೆವಿಲಿಯನ್‌ ಸೇರಿಯಾಗಿತ್ತು. ಆರು ವಿಕಟ್‌ ಕಿತ್ತ ಧನಂಜಯ ಸಹಿತ ಶ್ರೀಲಂಕಾ ಆಟಗಾರರು ಗೆಲುವಿನ ಸಂಭ್ರಮಕ್ಕೆ ಕಾಯುತ್ತಿದ್ದರು.

ಆದರೆ ಧೋನಿ ಮತ್ತು ಭುವನೇಶ್ವರ್‌ ಅವರ ಸಾಹಸದ ಬ್ಯಾಟಿಂಗ್‌ನಿಂದ ಶ್ರೀಲಂಕಾ ಆಘಾತಕಾರಿ ಸೋಲನ್ನು ಕಂಡು ಮತ್ತೆ ನಿರಾಶೆ ಅನುಭವಿಸುವಂತಾಯಿತು. ಭಾರತ 44.2 ಓವರ್‌ಗಳಲ್ಲಿ 7 ವಿಕೆಟಿಗೆ 231 ರನ್‌ ಗಳಿಸಿ ರೋಚಕ ಗೆಲುವು ಸಾಧಿಸಿ ಸೋಲು ತಪ್ಪಿಸಿಕೊಂಡಿತು. ಈ ಗೆಲುವಿನಿಂದ ಭಾರತ ಐದು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತು.

ರೋಹಿತ್‌ ಮತ್ತು ಧವನ್‌ ಮೊದಲ ವಿಕೆಟಿಗೆ 109 ರನ್ನುಗಳ ಜತೆಯಾಟ ನಡೆಸಿ ಭಾರತಕ್ಕೆ ಉತ್ತಮ ಆರಂಭ ಒದಗಿಸಿದ್ದರು.ಆದರೆ ಈ ಜೋಡಿ ಮುರಿದ ಬಳಿಕ ಹಠಾತ್‌ ಕುಸಿತ ಕಂಡ ಭಾರತ 131 ರನ್‌ ತಲುಪುವಷ್ಟರಲ್ಲಿ 7 ವಿಕೆಟ್‌ ಕಳೆದುಕೊಂಡು ಒದ್ದಾಡುತ್ತಿತ್ತು. ಈ ಹಂತದಲ್ಲಿ ಧೋನಿ ಅವರನ್ನು ಸೇರಿಕೊಂಡ ಭುವನೇಶ್ವರ ಮುರಿಯದ 8ನೇ ವಿಕೆಟಿಗೆ ಸರಿಯಾಗಿ 100 ರನ್‌ ಪೇರಿಸಿ ತಂಡಕ್ಕೆ ರೋಚಕ ಜಯ ತಂದುಕೊಟ್ಟರು. ಭುವನೇಶ್ವರ 53 ಮತ್ತು ಧೋನಿ 45 ರನ್‌ ಗಳಿಸಿ ಅಜೇಯರಾಗಿ ಉಳಿದರು.

ಭಾರತ
ರೋಹಿತ್‌ ಶರ್ಮ    ಎಲ್‌ಬಿಡಬ್ಲ್ಯು ಬಿ ಧನಂಜಯ    54
ಶಿಖರ್‌ ಧವನ್‌    ಸಿ ಮ್ಯಾಥ್ಯೂಸ್‌ ಬಿ ಸಿರಿವರ್ಧನ    40
ಕೆಎಲ್‌ ರಾಹುಲ್‌    ಬಿ ಧನಂಜಯ    4
ಕೇದಾರ್‌ ಜಾಧವ್‌    ಬಿ ಧನಂಜಯ    1
ವಿರಾಟ್‌ ಕೊಹ್ಲಿ    ಬಿ ಧನಂಜಯ    4
ಎಂಎಸ್‌ ಧೋನಿ    ಔಟಾಗದೆ    45    
ಹಾರ್ದಿಕ್‌ ಪಾಂಡ್ಯ    ಸ್ಟಂಪ್ಡ್ ಡಿಕ್ವೆಲ್ಲ ಬಿ ಧನಂಜಯ    0
ಅಕ್ಷರ್‌ ಪಟೇಲ್‌    ಎಲ್‌ಬಿಡಬ್ಲ್ಯು ಬಿ ಧನಂಜಯ    6
ಭುವನೇಶ್ವರ ಕೆ.     ಔಟಾಗದೆ    53
ಇತರ:        15
ಒಟ್ಟು (44.2 ಓವರ್‌ಗಳಲ್ಲಿ 7 ವಿಕೆಟಿಗೆ)    231
ವಿಕೆಟ್‌ ಪತನ:
1-109, 2-113, 3-114, 4-118, 5-119, 6-121, 7-131
ಬೌಲಿಂಗ್‌:
ಲಸಿತ ಮಾಲಿಂಗ        8-0-49-0
ವಿಶ್ವ ಫೆರ್ನಾಂಡೊ        6.2-0-32-0
ಏಂಜೆಲೊ ಮ್ಯಾಥ್ಯೂಸ್‌        3-0-11-0
ದುಷ್ಮಂತ ಚಮೀರ        7-0-45-0
ಅಖೀಲ ಧನಂಜಯ        10-0-54-6
ಮಲಿಂದ ಸಿರಿವರ್ಧನ        10-0-39-1

Advertisement

ಪಂದ್ಯಶ್ರೇಷ್ಠ: ಭುವನೇಶ್ವರ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next