ಲಂಡನ್: ಅತ್ಯಂತ ಸಮತೋಲಿತ ತಂಡವನ್ನು ಹೊಂದಿರುವ ಭಾರತ ರವಿವಾರದ ಪಾಕಿಸ್ಥಾನ ವಿರುದ್ಧದ ಪಂದ್ಯದಲ್ಲಿ ಮೇಲುಗೈ ಸಾಧಿಸುವ ಅವಕಾಶ ಹೆಚ್ಚಿದೆ ಎಂದು ಪಾಕಿಸ್ಥಾನದ ಮಾಜಿ ಸವ್ಯಸಾಚಿ ಶಾಹಿದ್ ಅಫ್ರಿದಿ ಅಭಿಪ್ರಾಯಪಟ್ಟಿದ್ದಾರೆ.
“ನಾನು ಪಾಕಿಸ್ಥಾನದ ಕ್ರಿಕೆಟಿಗ. ಈ ದೇಶಕ್ಕೇ ನನ್ನ ಸಂಪೂರ್ಣ ಬೆಂಬಲ. ಪಾಕಿಸ್ಥಾನವೇ ಎಲ್ಲ ಪಂದ್ಯಗಳನ್ನು ಗೆಲ್ಲಬೇಕೆಂಬ ಸಹಜ ಆಕಾಂಕ್ಷೆ ನನ್ನದು. ಅದರಲ್ಲೂ ಭಾರತವ ವಿರುದ್ಧ ವಂತೂ ಗೆಲ್ಲಲೇಬೇಕು. ಆದರೆ ಇತ್ತೀಚಿನ ಇತಿಹಾಸ ಹಾಗೂ ತಂಡದ ಸಾಮರ್ಥ್ಯ ವನ್ನು ಅವಲೋಕಿಸಿದಾಗ ಭಾರತವೇ ಪಾಕಿಸ್ಥಾನದ ವಿರುದ್ಧ ಮೇಲುಗೈ ಸಾಧಿಸುವ ಲಕ್ಷಣ ಕಂಡುಬರುತ್ತದೆ…’ ಎಂದು ಅಫ್ರಿದಿ ಅಭಿಪ್ರಾಯಪಟ್ಟಿದ್ದಾರೆ.
“ವಿರಾಟ್ ಕೊಹ್ಲಿ ನಾಯಕತ್ವದ ಭಾರತದ ಬ್ಯಾಟಿಂಗ್ ಲೈನ್‌ಅಪ್ ಅತ್ಯಂತ ಬಲಿಷ್ಠ. ನಿರ್ದಿಷ್ಟ ದಿನದಂದು ಅದು ಯಾವುದೇ ಎದುರಾಳಿಯ ಬೌಲಿಂಗ್ ಆಕ್ರಮಣವನ್ನೂ ಧ್ವಂಸಗೊಳಿಸಬಲ್ಲದು. ಕೊಹ್ಲಿಗೆ ಬೌಲಿಂಗ್ ಮಾಡುವುದು ಯಾವತ್ತೂ ಒಂದು ಸವಾಲು. ಹೀಗಾಗಿ ಪಾಕಿಸ್ಥಾನಿ ಬೌಲರ್‌ಗಳು ಸಾಮರ್ಥ್ಯಕ್ಕೂ ಮಿಗಿಲಾದ ಪ್ರದರ್ಶನವೊಂದನ್ನು ನೀಡಬೇಕಿದೆ. ಕೊಹ್ಲಿ ಸಹಿತ ಅವರ ಆಟಗಾರ ರೆಲ್ಲ ಕ್ರೀಸಿಗೆ ಬಂದಿಳಿದ ಕ್ಷಣದಿಂದಲೇ ಬೌಲಿಂಗ್ ಆಕ್ರಮಣ ನಡೆಸಬೇಕು.
ಕೊಹ್ಲಿ ಅಗ್ಗಕ್ಕೆ ಔಟಾದರೋ, ಆಗ ಭಾರತವನ್ನು ಸಣ್ಣ ಮೊತ್ತಕ್ಕೆ ಹಿಡಿದು ನಿಲ್ಲಿಸುವ ಎಲ್ಲ ಅವಕಾಶಗಳೂ ಮುಕ್ತವಾಗಿರುತ್ತವೆ’ ಎಂಬುದು ಅಫ್ರಿದಿ ಲೆಕ್ಕಾಚಾರ.
“ಭಾರತದ ಬೌಲಿಂಗ್ ಕೂಡ ಪ್ರಬಲ ವಾಗಿಯೇ ಇದೆ. ಸ್ಪಿನ್ನರ್ ಅಶ್ವಿನ್ ಹೆಚ್ಚು ಅಪಾಯಕಾರಿ ಆಗಬಲ್ಲರು. ಸೀಮ್ ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್, ಶಮಿ; ಪೇಸ್ ಹಾಗೂ ಡೆತ್ ಬೌಲಿಂಗ್ ವೇಳೆ ಬುಮ್ರಾ ಅಪಾಯಕಾರಿ ಆಗ ಬಲ್ಲರು. ಪರಿಪೂರ್ಣ ಯಾರ್ಕರ್ ಎಸೆಯುವ ಸಾಮರ್ಥ್ಯ ಅವರಲ್ಲಿದೆ’ ಎಂದರು.
ಪಾಕಿಸ್ಥಾನಿ ಬೌಲರ್‌ಗಳು ಸಾಮರ್ಥ್ಯಕ್ಕೂ ಮಿಗಿಲಾದ ಪ್ರದರ್ಶನವೊಂದನ್ನು ನೀಡಬೇಕಿದೆ. ಕೊಹ್ಲಿ ಸಹಿತ ಅವರ ಆಟಗಾರ ರೆಲ್ಲ ಕ್ರೀಸಿಗೆ ಬಂದಿಳಿದ ಕ್ಷಣದಿಂದಲೇ ಬೌಲಿಂಗ್ ಆಕ್ರಮಣ ನಡೆಸಬೇಕು. ಕೊಹ್ಲಿ ಅಗ್ಗಕ್ಕೆ ಔಟಾದರೋ, ಆಗ ಭಾರತವನ್ನು ಸಣ್ಣ ಮೊತ್ತಕ್ಕೆ ಹಿಡಿದು ನಿಲ್ಲಿಸುವ ಎಲ್ಲ ಅವಕಾಶಗಳೂ ಮುಕ್ತವಾಗಿರುತ್ತವೆ.