Advertisement

ವನಿತಾ ಏಕದಿನ ಸರಣಿ: ಕ್ವೀನ್‌ ಸ್ವೀಪ್‌ಗೆ ಭಾರತ ಸ್ಕೆಚ್‌

12:30 AM Feb 28, 2019 | Team Udayavani |

ಮುಂಬಯಿ: ಈಗಾಗಲೇ ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿ ಕೈವಶ ಮಾಡಿಕೊಂಡ ಸಂಭ್ರಮದಲ್ಲಿರುವ ಭಾರತದ ವನಿತಾ ತಂಡ, ಕ್ವೀನ್‌ ಸ್ವೀಪ್‌ ಗುರಿಯೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ.

Advertisement

ಗುರುವಾರ ಇಲ್ಲಿನ “ವಾಂಖೇಡೆ ಸ್ಟೇಡಿಯಂ’ನಲ್ಲಿ ಸರಣಿಯ ಅಂತಿಮ ಪಂದ್ಯ ನಡೆಯಲಿದೆ. ಮಿಥಾಲಿ ಪಡೆಯ ಹ್ಯಾಟ್ರಿಕ್‌ ಸಾಧನೆಗೆ ಸ್ಕೆಚ್‌ ಹಾಕಿದರೆ, ಇಂಗ್ಲೆಂಡ್‌ ವೈಟ್‌ವಾಶ್‌ ತಪ್ಪಿಸಿಕೊಂಡು ಅಷ್ಟರ ಮಟ್ಟಿಗೆ ಪ್ರತಿಷ್ಠೆ ಕಾಯ್ದುಕೊಳ್ಳುವ ಯೋಜನೆಯಲ್ಲಿದೆ.

ಮೊದಲ ಪಂದ್ಯದಲ್ಲಿ 66 ರನ್‌ಗಳ ಜಯ ದಾಖಲಿಸಿದ ಭಾರತ, ದ್ವಿತೀಯ ಪಂದ್ಯವನ್ನು 7 ವಿಕೆಟ್‌ಗಳಿಂದ ಗೆದ್ದು ಸರಣಿ ಮೇಲೆ ಹಕ್ಕು ಚಲಾಯಿಸಿದೆ. ಜತೆಗೆ 2021ರ ವಿಶ್ವಕಪ್‌ ಕೂಟದ ನೇರ ಪ್ರವೇಶಕ್ಕೆ ಅಗತ್ಯವಾಗಿರುವ ಐಸಿಸಿ ವನಿತಾ ಚಾಂಪಿಯನ್‌ಶಿಪ್‌ನ 4 ನಿರ್ಣಾಯಕ ಅಂಕಗಳನ್ನು ಬಾಚಿಕೊಂಡಿದೆ. ಭಾರತಕ್ಕೆ ಇನ್ನೂ 2 ಅಂಕಗಳನ್ನು ಗೆಲ್ಲುವ ಅವಕಾಶವಿದೆ.

ವಿಶ್ವಕಪ್‌ ಸೇಡು
2017ರ ವನಿತಾ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಕೇವಲ 9 ರನ್‌ಗಳಿಂದ ಸೋತು ಪ್ರಶಸ್ತಿ ತಪ್ಪಿಸಿಕೊಂಡ ಭಾರತಕ್ಕೆ, ಈ ಸೇಡನ್ನು ಕ್ವೀನ್‌ ಸ್ವೀಪ್‌ ಮೂಲಕ ತೀರಿಸಿಕೊಳ್ಳುವ ಅವಕಾಶ ಎದುರಾಗಿದೆ. ಆರಂಭಿಕ ಆಟಗಾರ್ತಿ ಸ್ವƒತಿ ಮಂಧನಾ ಅವರ ಅಮೋಘ ಫಾರ್ಮ್, ಜೆಮಿಮಾ ರೋಡ್ರಿಗಸ್‌ ಅವರ ಭರವಸೆಯ ಬ್ಯಾಟಿಂಗ್‌, ನಾಯಕಿ ಮಿಥಾಲಿ ರಾಜ್‌ ಅವರ ತಾಳ್ಮೆಯ ಆಟವೆಲ್ಲ ಭಾರತದ ಬ್ಯಾಟಿಂಗ್‌ ಬಲವಾಗಿದೆ. ವೇಗಿಗಳಾದ ಜೂಲನ್‌ ಗೋಸ್ವಾಮಿ, ಶಿಖಾ ಪಾಂಡೆ ಅವರ ಬೌಲಿಂಗ್‌ ದಾಳಿ ಮತ್ತೆ ಲಾಭ ತಂದೀತೆಂಬ ನಿರೀಕ್ಷೆ ಇರಿಸಿಕೊಳ್ಳಲಾಗಿದೆ.

ಗೆಲುವಿಗೆ ಕಾದಿದೆ ಇಂಗ್ಲೆಂಡ್‌
ಇತ್ತ ಆಲ್‌ರೌಂಡರ್‌ ಸೋಫಿ ಎಕ್‌Éಸ್ಟೋನ್‌ ಅವರ ನಿರ್ಗಮನದಿಂದ ಇಂಗ್ಲೆಂಡ್‌ ತಂಡ ಕಂಗೆಟ್ಟಿದೆ. ಐಸಿಸಿ ಚಾಂಪಿಯನ್‌ಶಿಪ್‌ನ 2 ನಿರ್ಣಾಯಕ ಅಂಕಗಳನ್ನು ಗೆಲ್ಲಬೇಕಾದ ಒತ್ತಡವೂ ಆಂಗ್ಲ ಪಡೆ ಮೇಲಿದೆ. ಆದರೆ ಅಲ್‌ರೌಂಡರ್‌ ನಥಾಲಿ ಸಿವರ್‌, ನಾಯಕಿ ಹೀತರ್‌ ನೈಟ್‌ ಅವರನ್ನು ಹೊರತುಪಡಿಸಿ ಉಳಿದವರ್ಯಾರೂ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಬೌಲಿಂಗ್‌ನಲ್ಲಿ ಅನ್ಯಾ ಶ್ರಬೊÕàಲ್‌, ಜಾರ್ಜಿಯಾ ಎಲ್ವಿಸ್‌ ಮತ್ತು ಕ್ಯಾಥರಿನ್‌ ಬ್ರಂಟ್‌ ಕ್ಲಿಕ್‌ ಆದರಷ್ಟೇ ಇಂಗ್ಲೆಂಡ್‌ ಮೇಲುಗೈ ಸಾಧಿಸೀತು.

Advertisement
Advertisement

Udayavani is now on Telegram. Click here to join our channel and stay updated with the latest news.

Next