ಮೌಂಟ್ ಮೌಂಗನುಯಿ: ಮೊದಲ ಬಾರಿಗೆ ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿಯುವ ಬಹು ದೊಡ್ಡ ಗುರಿಯೊಂದಿಗೆ ಅಭಿಯಾನ ಆರಂಭಿಸಿದ ಮಿಥಾಲಿ ರಾಜ್ ನಾಯಕತ್ವದ ಭಾರತದ ವನಿತಾ ತಂಡ ಮೊದಲ ಪಂದ್ಯದಲ್ಲೇ ಬದ್ಧ ಎದುರಾಳಿ ಪಾಕಿಸ್ಥಾನವನ್ನು ಸೋಲಿಸಿದೆ. ಇದರೊಂದಿಗೆ ವಿಶ್ವಕಪ್ ನಲ್ಲಿ ಪಾಕ್ ವಿರುದ್ಧದ ಭಾರತದ ಅಜೇಯ ಯಾತ್ರೆ ಮುಂದುವರಿದಿದೆ.
ಇಲ್ಲಿನ ಬೇ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡ 50 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 244 ರನ್ ಗಳಿಸಿದರೆ, ಪಾಕಿಸ್ಥಾನ ತಂಡ ಕೇವಲ 137 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 107 ರನ್ ಅಂತರದ ಸೋಲನುಭವಿಸಿತು.
ರಾಣಾ-ಪೂಜಾ ಸಾಹಸ: ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ಮೊದಲ ಆರಂಭದಲ್ಲೇ ಖಾತೆ ತೆರಯದ ಶಫಾಲಿ ವಿಕೆಟ್ ಕಳೆದುಕೊಂಡಿತು. ಆದರೆ ನಂತರ ಸ್ಮೃತಿ ಮಂಧನಾ 52 ರನ್ ಮತ್ತು ದೀಪ್ತಿ ಶರ್ಮಾ 40 ರನ್ ಗಳಿಸಿ ತಂಡವನ್ನು ಆಧರಿಸಿದರು. ಆದರೆ ನಂತರ ಸತತ ವಿಕೆಟ್ ಕಳೆದುಕೊಂಡ ಭಾರತ 33 ಓವರ್ ಗಳಲ್ಲಿ 114 ರನ್ ಗೆ ಆರು ವಿಕೆಟ್ ಕಳೆದುಕೊಂಡಿತು.
ಇದನ್ನೂ ಓದಿ:ಬ್ಯಾಟಿಂಗ್ ನಂತರ ಬೌಲಿಂಗ್ ನಲ್ಲೂ ಜಡೇಜಾ ಮಿಂಚು; 400 ರನ್ ಹಿನ್ನಡೆ ಅನುಭವಿಸಿದ ಲಂಕಾ!
Related Articles
ಈ ವೇಳೆ ಜೊತೆಯಾದ ಸ್ನೇಹ್ ರಾಣಾ ಮತ್ತು ಪೂಜಾ ವಸ್ತ್ರಾಕರ್ ಶತಕದ ಜೊತೆಯಾಟವಾಡಿ ತಂಡವನ್ನು ಕುಸಿತದಿಂದ ಪಾರು ಮಾಡಿದರು. ಪೂಜಾ 67 ರನ್ ಗಳಿಸಿದರೆ, ಸ್ನೇಹ್ ರಾಣಾ 53 ಅಜೇಯ ರನ್ ಗಳಿಸಿದರು.
ಭಾರತ ನೀಡಿದ 245 ರನ್ ಬೆನ್ನತ್ತಿದ ಪಾಕ್ ಗೆ ಸಿದ್ರ ಅಮಿನ್ ಉತ್ತಮ ಆರಂಭ ಒದಗಿಸಿದರು. ಅವರು 30 ರನ್ ಗಳಿಸಿದ್ದೇ ಪಾಕ್ ಪರ ಗರಿಷ್ಠ ಮೊತ್ತು. ರಾಜೇಶ್ವರಿ ಗಾಯಕ್ವಾಡ್ ಸೇರಿದಂತೆ ಭಾರತದ ದಾಳಿಗೆ ಬೆಚ್ಚಿದ ಪಾಕ್ ಸತತ ವಿಕೆಟ್ ಕೈಚೆಲ್ಲಿತು. ಕೊನೆಯಲ್ಲಿ ಕೇವಲ 137 ರನ್ ಗಳಿಗೆ ಆಲೌಟಾಗಿ 107 ರನ್ ಅಂತರದ ಸೋಲನುಭವಿಸಿತು. ಇದರೊಂದಿಗೆ ಪಾಕ್ ವಿರುದ್ಧ ಭಾರತ ವನಿತೆಯರು ಆಡಿದ ಎಲ್ಲಾ 11 ಪಂದ್ಯಗಳಲ್ಲಿ ಗೆಲುವು ಸಾಧಿಸಿದಂತಾಯಿತು.
– Gaurav Kalra (@GK75) 6 Mar 2022