Advertisement

ವನಿತಾ ಟಿ20: 4ನೇ ಪಂದ್ಯ ರದ್ದು

06:25 AM Feb 22, 2018 | Team Udayavani |

ಸೆಂಚುರಿಯನ್‌: ಭಾರೀ ಮಳೆಯಿಂದಾಗಿ ಭಾರತ-ದಕ್ಷಿಣ ಆಫ್ರಿಕಾ ವನಿತಾ ತಂಡಗಳ ನಡುವಿನ ಬುಧವಾರದ 4ನೇ ಟಿ20 ಪಂದ್ಯ ರದ್ದುಗೊಂಡಿತು. ಇದರಿಂದ ಹರ್ಮನ್‌ಪ್ರೀತ್‌ ಕೌರ್‌ ಪಡೆ 2-1 ಮುನ್ನಡೆಯನ್ನು ಉಳಿಸಿಕೊಂಡಿದೆ. ಫೆ. 24ರಂದು ಕೇಪ್‌ಟೌನ್‌ನಲ್ಲಿ ಅಂತಿಮ ಪಂದ್ಯ ನಡೆಯಲಿದ್ದು, ಸರಣಿ ಇತ್ಯರ್ಥದಲ್ಲಿ ಇದು ನಿರ್ಣಾಯಕವಾಗಲಿದೆ. ಸರಣಿಯನ್ನು ಸಮಬಲಕ್ಕೆ ತರಬೇಕಾದರೆ ದಕ್ಷಿಣ ಆಫ್ರಿಕಾ ಈ ಪಂದ್ಯವನ್ನು ಗೆಲ್ಲಲೇಬೇಕಿದೆ.

Advertisement

ಬುಧವಾರದ ಪಂದ್ಯ ಕೇವಲ 15.3 ಓವರ್‌ಗಳಿಗೆ ಸೀಮಿತಗೊಂಡಿತು. ಆಗ ಬ್ಯಾಟಿಂಗಿಗೆ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕಾ 3 ವಿಕೆಟಿಗೆ 130 ರನ್‌ ಬಾರಿಸಿತ್ತು. ಈ ಹಂತದಲ್ಲಿ ಆರಂಭಗೊಂಡ ಮಳೆ ತೀವ್ರಗೊಳ್ಳುತ್ತ ಹೋಯಿತು.

ದಕ್ಷಿಣ ಆಫ್ರಿಕಾಕ್ಕೆ ಲಿಜೆಲ್‌ ಲೀ ಮತ್ತು ಡೇನ್‌ ವಾನ್‌ ನೀಕರ್ಕ್‌ ಭರ್ಜರಿ ಆರಂಭ ನೀಡಿದರು. 12.3 ಓವರ್‌ಗಳಲ್ಲಿ 103 ರನ್‌ ಒಟ್ಟುಗೂಡಿಸಿದರು. ಇಬ್ಬರಿಂದಲೂ ಅರ್ಧ ಶತಕ ದಾಖಲಾಯಿತು. ನೀಕರ್ಕ್‌ 47 ಎಸೆತಗಳಿಂದ 55 ರನ್‌ ಬಾರಿಸಿದರು (6 ಬೌಂಡರಿ, 2 ಸಿಕ್ಸರ್‌). ಪಂದ್ಯ ನಿಲ್ಲುವ ವೇಳೆ ಲೀ ಅಜೇಯ 58 ರನ್‌ ಮಾಡಿದ್ದರು. 38 ಎಸೆತಗಳ ಈ ಸ್ಫೋಟಕ ಬ್ಯಾಟಿಂಗ್‌ ವೇಳೆ 2 ಬೌಂಡರಿ, 5 ಸಿಕ್ಸರ್‌ ಸಿಡಿಯಲ್ಪಟ್ಟಿತು. ಟ್ರಯಾನ್‌ (2) ಮತ್ತು ಲುಸ್‌ (5) ಬೇಗನೇ ನಿರ್ಗಮಿಸಿದರು. ಭಾರತದ ಪರ ದೀಪ್ತಿ ಶರ್ಮ 2, ಪೂನಂ ಯಾದವ್‌ ಒಂದು ವಿಕೆಟ್‌ ಉರುಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next