Advertisement

3-0ಯಿಂದ ಸರಣಿ: ಭಾರತ ಮಹಿಳಾ ಕ್ರಿಕೆಟ್‌ ತಂಡದ ಐತಿಹಾಸಿಕ ಸಾಧನೆ

11:01 PM Sep 24, 2022 | Team Udayavani |

ಲಂಡನ್‌: ಹರ್ಮನ್‌ಪ್ರೀತ್‌ ಕೌರ್‌ ನೇತೃತ್ವದ ಭಾರತೀಯ ವನಿತಾ ತಂಡವು ಶನಿವಾರ ಲಾರ್ಡ್ಸ್‌ ನಲ್ಲಿ ಆತಿಥೇಯ ಇಂಗ್ಲೆಂಡ್‌ ವಿರುದ್ಧ ನಡೆದ ಏಕದಿನ ಸರಣಿಯ ಮೂರನೇ ಪಂದ್ಯವನ್ನು 16 ರನ್ನುಗಳಿಂದ ಗೆಲ್ಲುವ ಮೂಲಕ 3-0 ಅಂತರದಿಂದ ಕ್ಲೀನ್‌ ಸ್ವೀಪ್‌ ಸಾಧನೆ ಮಾಡಿದೆ.

Advertisement

ಈ ಸಾಧನೆಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಜೂಲನ್‌ ಗೋಸ್ವಾಮಿ ಅವರಿಗೆ ಅರ್ಪಿಸಿದೆ.

1999ರ ಬಳಿಕ ಇಂಗ್ಲೆಂಡ್‌ ನೆಲ ದಲ್ಲಿ ಭಾರತ ಏಕದಿನ ಸರಣಿ ಗೆಲ್ಲು ವುದು ಇದೇ ಮೊದಲ ಸಲವಾ ಗಿದೆ. ಈ ಸರಣಿ ಗೆಲುವಿನ ಸಂಭ್ರ ಮದ ಜತೆ ಆಟಗಾರ್ತಿಯರು ಜೂಲನ್‌ ಅವರಿಗೆ ಸ್ಮರಣೀಯ ವಿದಾಯ ಹೇಳಿದರು.

ಮೈದಾನದಲ್ಲಿ ಅವರನ್ನು ಎತ್ತಿಕೊಂಡು ಸಂಭ್ರಮಿಸಿದರು.

ಜೂಲನ್‌ ಪಾಲಿಗೆ ಮಹತ್ವದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಭಾರತವು 45.4 ಓವರ್‌ಗಳಲ್ಲಿ 169 ರನ್‌ ಗಳಿಸಿ ಆಲೌಟಾಯಿತು.

Advertisement

ಆರಂಭಿಕ ಆಟಗಾರ್ತಿ ಸ್ಮತಿ ಮಂದನಾ ಮತ್ತು ದೀಪ್ತಿ ಶರ್ಮಾ ಅರ್ಧಶತಕ ಸಿಡಿಸಿ ತಂಡವನ್ನು ಆಧರಿಸಿದರು. ಮಂದನಾ 50 ರನ್‌ ಗಳಿಸಿದ್ದರೆ ದೀಪ್ತಿ ಶರ್ಮಾ 68 ರನ್‌ ಗಳಿಸಿ ಅಜೇಯರಾಗಿ ಉಳಿದರು.

ಗೆಲ್ಲಲು 170 ರನ್‌ ಗಳಿಸುವ ಗುರಿ ಪಡೆದ ಇಂಗ್ಲೆಂಡ್‌ ತಂಡವು ರೇಣುಕಾ ಸಿಂಗ್‌ ಅವರ ದಾಳಿಗೆ ತತ್ತರಿಸಿತು. 65 ರನ್‌ ಗಳಿಸುವಷ್ಟರಲ್ಲಿ 7 ವಿಕೆಟ್‌ ಕಳೆದುಕೊಂಡು ಒದ್ದಾಡುತ್ತಿತ್ತು. ಈ ಹಂತದಲ್ಲಿ ಆಡಲು ಬಂದ ನಾಯಕಿ ಆ್ಯಮಿ ಜೋನ್ಸ್‌ ಮತ್ತು ಚಾರ್ಲಿ ಡೀನ್‌ ದಿಟ್ಟವಾಗಿ ಆಡಿ ತಂಡವನ್ನು ಆಧರಿಸಿದರು. 47 ರನ್‌ ಗಳಿಸಿದ ಡೀನ್‌ ರನೌಟ್‌ ಆಗುವ ಮೂಲಕ 43.3 ಓವರ್‌ಗಳಲ್ಲಿ 153 ರನ್ನಿಗೆ ಆಲೌಟಾಯಿತು.

ಸಂಕ್ಷಿಪ್ತ ಸ್ಕೋರು: ಭಾರತ 45.4 ಓವರ್‌ಗಳಲ್ಲಿ 169 (ಸ್ಮತಿ ಮಂದನಾ 50, ದೀಪ್ತಿ ಶರ್ಮಾ 68 ಔಟಾಗದೆ, ಕೇಟ್‌ ಕ್ರಾಸ್‌ 26ಕ್ಕೆ 4; ಇಂಗ್ಲೆಂಡ್‌ 43.3 ಓವರ್‌ಗಳಲ್ಲಿ 153 (ಆ್ಯಮಿ ಜೋನ್ಸ್‌ 28, ಚಾರ್ಲಿ ಡೀನ್‌ 47, ರೇಣುಕಾ ಸಿಂಗ್‌ 29ಕ್ಕೆ 4).

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next