Advertisement

ಉಬೆರ್‌ ಕಪ್‌ ಬ್ಯಾಡ್ಮಿಂಟನ್‌: ಭಾರತ ಕ್ವಾರ್ಟರ್‌ ಫೈನಲ್‌ಗೆ

10:43 PM Oct 12, 2021 | Team Udayavani |

ಆರುಸ್‌ (ಡೆನ್ಮಾರ್ಕ್‌): ಉಬೆರ್‌ ಕಪ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಭಾರತದ ವನಿತಾ ತಂಡ ಸ್ಕಾಡ್ಲೆಂಡ್‌ ತಂಡವನ್ನು 4-1 ಅಂತರದ ಮಣಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ.

Advertisement

ಇದು ಭಾರತಕ್ಕೆ ಒಲಿದ ಸತತ 2ನೇ ಜಯ. ಮೊದಲ ಸುತ್ತಿನಲ್ಲಿ ಸ್ಪೇನ್‌ ತಂಡಕ್ಕೆ 3-2 ಅಂತರದ ಸೋಲುಣಿಸಿತ್ತು.ಸ್ಕಾಟ್ಲೆಂಡ್‌ ವಿರುದ್ಧ ಭಾರತ ಸೋಲಿನ ಆರಂಭವನ್ನೇ ಪಡೆಯಿತಾದರೂ ಬಳಿಕ ನಾಲ್ಕೂ ಪಂದ್ಯಗಳಲ್ಲಿ ಪ್ರಭುತ್ವ ಸಾಧಿಸುವಲ್ಲಿ ಯಶಸ್ವಿಯಾಯಿತು.

ಮಾಳವಿಕಾ ಬನ್ಸೋಡ್‌ ಸೋಲನು ಭವಿಸಿದಾಗ ಡೆನ್ಮಾರ್ಕ್‌ 1-0 ಮುನ್ನಡೆಯ ಸಂಭ್ರಮವನ್ನಾಚರಿಸಿತು. ಆದರೆ ಅದಿತಿ ಭಟ್‌, ತಸ್ಮಿನ್‌ ಮಿರ್‌ ಸಿಂಗಲ್ಸ್‌ ಗೆದ್ದು ಮುನ್ನಡೆ ಕೊಡಿಸಿದರು. ಡಬಲ್ಸ್‌ನಲ್ಲಿ ತನಿಷಾ ಕ್ರಾಸ್ಟೊ-ರುತುಪರ್ಣಾ ಪಂಡಾ, ತ್ರಿಷಾ ಜಾಲಿ-ಗಾಯತ್ರಿ ಗೋಪಿಚಂದ್‌ ಜಯ ಸಾಧಿಸಿದರು.ಭಾರತ ಬುಧವಾರ ಬಲಿಷ್ಠ ಥಾಯ್ಲೆಂಡ್‌ ವಿರುದ್ಧ ಸೆಣಸಲಿದೆ.

ಇದನ್ನೂ ಓದಿ:ನಮ್ಮ ಕೆಲಸ ಗುರುತಿಸಿ ಜೆಡಿಎಸ್‌ಗೆ ಮತ ಹಾಕುತ್ತಾರೆ : ಮಾಜಿ ಪ್ರಧಾನಿ ದೇವೆಗೌಡ

 

Advertisement
Advertisement

Udayavani is now on Telegram. Click here to join our channel and stay updated with the latest news.

Next