Advertisement

ತರೆಗೆಲೆಯಂತೆ ಉರುಳಿದ ವಿಕೆಟ್: ಗೆಲ್ಲುವ ಪಂದ್ಯ ಸೋತ ಮಹಿಳೆಯರು

06:54 AM Feb 06, 2019 | Team Udayavani |

ವೆಲ್ಲಿಂಗ್ಟನ್ : ಉತ್ತಮ ಆರಂಭದ ಹೊರತಾಗಿಯೂ ಮಧ್ಯಮ ಕ್ರಮಾಂಕದ ಆಟಗಾರರು ಪೆವಿಲಿಯನ್ ಪರೇಡ್ ನಡೆಸಿದ ಕಾರಣ ಭಾರತೀಯ ಮಹಿಳೆಯರ ತಂಡ ಆತಿಥೇಯ ಕಿವೀಸ್ ವಿರುದ್ಧ ಮೊದಲ ಟಿ-20 ಪಂದ್ಯದಲ್ಲಿ ಸೋಲನುಭವಿಸಿದೆ. 

Advertisement

ವೆಲ್ಲಿಂಗ್ಟನ್ ನ ವೆಸ್ಟ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಭಾರತೀಯ ಮಹಿಳೆಯರ ತಂಡ ಫೀಲ್ಡಿಂಗ್ ಆಯ್ಕೆ ಮಾಡಿತ್ತು. ಬ್ಯಾಟಿಂಗ್ ನಡೆಸಿದ ಕಿವೀಸ್ ನಿಗದಿತ 20 ಓವರ್ ನಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 159  ರನ್ ಗಳಿಸಿತು. ಸೋಫೀ ಡಿವೈನ್ 62 ರನ್ ಗಳಿಸಿದರೆ, ನಾಯಕಿ ಸ್ಯಾಟರ್ ವೈಟ್ 33 ರನ್ ಗಳಿಸಿದರು. 

160 ರನ್ ಗಳ ಗುರಿ ಪಡೆದ ಭಾರತ ಮೊದಲ ವಿಕೆಟ್ ಕೇವಲ ನಾಲ್ಕು ರನ್ ಗೆ ಕಳೆದುಕೊಂಡಿತು. ಮೊದಲ ಪಂದ್ಯ ಆಡಲಿಳಿದ ಪ್ರಿಯಾ ಪೂನಿಯಾ ನಾಲ್ಕು ರನ್ ಗೆ ವಿಕೆಟ್ ಒಪ್ಪಿಸಿದರು. ನಂತರ ಜೊತೆಗೂಡಿದ ಸ್ಮೃತಿ ಮಂದನಾ ಮತ್ತು ಜೆಮಿಮಾ ರೋಡ್ರಿಗಸ್ ಎರಡನೇ ವಿಕೆಟ್ ಗೆ 98 ರನ್ ಗಳ ಜೊತೆಯಾಟ ನಡೆಸಿದರು. ಈ ಹಂತದಲ್ಲಿ ಭಾರತದ ಗೆಲುವು ಕಷ್ಟವೇನಿರಲಿಲ್ಲ. 


ಪೆವಿಲಿಯನ್ ಪರೇಡ್: ತಂಡದ ಮೋತ್ತ102 ರನ್ ಆಗುತ್ತಿದ್ದಂತೆ 58 ರನ್ ಗಳಿಸಿದ್ದ ಉಪನಾಯಕಿ ಸ್ಮೃತಿ ಔಟ್ ಆದರು. ಅವರ ಬೆನ್ನಲ್ಲೆ ಜೆಮಿಮಾ ಕೂಡಾ ಪೆವಿಲಿಯನ್ ಸೇರುತ್ತಿದ್ದಂತೆ ತಂಡದ ಪೆವಿಲಿಯನ್ ಪರೇಡ್ ಆರಂಭವಾಯಿತು. ನಾಯಕಿ ಹರ್ಮನ್ ಪ್ರೀತ್ ಕೌರ್ 17 ರನ್ ಗಳಿಸಿದ್ದು ಬಿಟ್ಟರೆ ಬೇರಾವ ಆಟಗಾರ್ತಿಯರು ಕಿವೀಸ್ ಗೆ ಪ್ರತಿರೋಧ ತೋರಿಸುವ ಮನಸ್ಸು ಮಾಡಲಿಲ್ಲ. ಕೊನೆಗೆ 136 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 23  ರನ್ ಗಳ ಅಂತರದಿಂದ ಸೋಲನುಭವಿಸಿತು. ಪ್ರಮುಖ ಮೂರು ವಿಕೆಟ್ ಪಡೆದ ಲೀ ತಹುಹು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.   

Advertisement

Udayavani is now on Telegram. Click here to join our channel and stay updated with the latest news.

Next