Advertisement

ವನಿತೆಯರಿಗೆ ಸರಣಿ ಗೆಲುವಿನ ನಿರೀಕ್ಷೆ

07:45 AM Feb 07, 2018 | Team Udayavani |

ಕಿಂಬರ್ಲಿ: ಮೊದಲ ಪಂದ್ಯದಲ್ಲಿ 88 ರನ್ನುಗಳ ಗೆಲುವು ದಾಖಲಿಸಿರುವ ಭಾರತೀಯ ವನಿತೆಯರು ಬುಧವಾರ ನಡೆಯುವ ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಪಂದ್ಯದಲ್ಲೂ ಜಯಭೇರಿ ಬಾರಿಸಿ ಸರಣಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. 

Advertisement

ವಿಶ್ವಕಪ್‌ನಲ್ಲಿ ಶ್ರೇಷ್ಠ ನಿರ್ವಹಣೆ ನೀಡಿದ ಏಳು ತಿಂಗಳ ಬಳಿಕ ಭಾರತೀಯ ವನಿತಾ ತಂಡವು ಇಲ್ಲಿ ಭರ್ಜರಿ ಆಟದ ಪ್ರದರ್ಶನ ನೀಡಿದೆ. ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಉತ್ತಮ ನಿರ್ವಹಣೆ ನೀಡಿದ ಭಾರತ ವನಿತೆಯರು 88 ರನ್ನುಗಳಿಂದ ಜಯ ಸಾಧಿಸಿ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದರು. ಬುಧವಾರದ ಪಂದ್ಯದಲ್ಲಿ ಜಯ ಸಾಧಿಸಿದರೆ ಭಾರತ ವನಿತೆಯರು ಸರಣಿ ತಮ್ಮದಾಗಿಸಿಕೊಳ್ಳಲಿದ್ದಾರೆ.

ಮೂರು ಪಂದ್ಯಗಳ ಈ ಸರಣಿಯು ಐಸಿಸಿ ವನಿತಾ ಚಾಂಪಿಯನ್‌ಶಿಪ್‌ನ ಮೊದಲ ಸುತ್ತಿನ ವೇಳಾಪಟ್ಟಿಯಾಗಿದೆ. ಇಲ್ಲಿ ಗೆದ್ದವರು 2021ರ ಐಸಿಸಿ ವನಿತಾ ವಿಶ್ವಕಪ್‌ಗೆ ನೇರವಾಗಿ ಅರ್ಹತೆ ಗಳಿಸಲಿದ್ದಾರೆ. ವಿಶ್ವಕಪ್‌ನಲ್ಲಿ ರನ್ನರ್‌ ಅಪ್‌ ಸ್ಥಾನ ಪಡೆದ ಬಳಿಕ ಮಿಥಾಲಿ ರಾಜ್‌ ಪಡೆ ಯಾವುದೇ ಅಂತಾರಾಷ್ಟ್ರೀಯ ಪಂದ್ಯವನ್ನಾಡಿಲ್ಲ. ಹಾಗಾಗಿ ಸದ್ಯ ಸಾಗುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಸರಣಿ ಭಾರತೀಯ ಪಾಲಿಗೆ ದೊಡ್ಡ ಸವಾಲು ಆಗಿದೆ. ಮೊದಲ ಏಕದಿನ ಪಂದ್ಯದಲ್ಲಿ ಭಾರತೀಯ ವನಿತೆಯರು ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಗಮನಾರ್ಹ ನಿರ್ವಹಣೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next