Advertisement

India 122 ವರ್ಷದಲ್ಲೇ ಅತ್ಯಂತ ಕಡಿಮೆ ಮಳೆ

11:45 PM Sep 01, 2023 | Team Udayavani |

ಹೊಸದಿಲ್ಲಿ: ದೇಶದಲ್ಲಿ 122 ವರ್ಷಗಳ ಬಳಿಕ ಆಗಸ್ಟ್‌ನಲ್ಲಿ ಇದೇ ಮೊದಲ ಬಾರಿಗೆ ಅತ್ಯಂತ ಕಡಿಮೆ ಮಳೆ ದಾಖಲಾಗಿದೆ ಎಂದು ಐಎಂಡಿ ತಿಳಿಸಿದೆ.

Advertisement

1901ರಲ್ಲಿ ಆಗಸ್ಟ್‌ ಮಾಸದ 20 ದಿನಗಳು ದೇಶಾದ್ಯಂತ ಮಳೆಯೇ ಇರಲಿಲ್ಲ! ಆ ಬಳಿಕ ಈಗ ಆಗಸ್ಟ್‌ ಮಾಸದಲ್ಲಿ ದೇಶಾದ್ಯಂತ ಕೇವಲ ಸರಾಸರಿ 161.7 ಮಿ.ಮೀಟರ್‌ನಷ್ಟು ಮಾತ್ರ ಮಳೆಯಾಗಿದೆ.

ಇದು ಸಾಮಾನ್ಯ ಮಳೆ ಪ್ರಮಾಣಕ್ಕಿಂತಲೂ ಶೆ.36ರಷ್ಟು ಕಡಿಮೆಯಾಗಿದೆ ಎಂದು ತಿಳಿಸಿದೆ.

ಇನ್ನು ಸೆಪ್ಟಂಬರ್‌ನಲ್ಲಿ ಮಳೆಯ ಪ್ರಮಾಣ ಸಾಮಾನ್ಯವಾಗಿರುವ ನಿರೀಕ್ಷೆ ಇದೆ ಎಂದೂ ಐಎಂಡಿ ಅಧಿಕಾರಿಗಳು ತಿಳಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next