Advertisement

ಭಾರತಕ್ಕೆ 1-0 ಸರಣಿ; ಲಂಕೆಯ ಹೋರಾಟದಲ್ಲಿ 3ನೇ ಟೆಸ್ಟ್‌ ಡ್ರಾ

04:23 PM Dec 06, 2017 | udayavani editorial |

ಹೊಸದಿಲ್ಲಿ : ಇಲ್ಲಿನ ಫಿರೋಜ್‌ ಶಾ ಕೋಟ್ಲಾ ಕ್ರಿಕೆಟ್‌ ಅಂಗಣದಲ್ಲಿ ನಡೆದ ಭಾರತ – ಶ್ರೀಲಂಕಾ ನಡುವಿನ ಮೂರನೇ ಟೆಸ್ಟ್‌ ಪಂದ್ಯ ನೀರಸ ಡ್ರಾ ಕಂಡಿದೆ. ಇದರೊಂದಿಗೆ ಮೂರು ಪಂದ್ಯಗಳ ಈ ಸರಣಿಯನ್ನು ಭಾರತ 1-0 ಅಂತರದಲ್ಲಿ ಜಯಿಸಿದಂತಾಗಿದೆ. 

Advertisement

“ಮಾಸ್ಕ್ ಆಫ್ ಶೇಮ್‌’ ಎಂದೇ ಕುಖ್ಯಾತಿಯನ್ನು ಪಡೆದ ಈ 3ನೇ ತಥಾ ಅಂತಿಮ ಟೆಸ್ಟ್‌ ಪಂದ್ಯದಲ್ಲಿ ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 536 ರನ್‌ಗಳ ಬೃಹತ್‌ ಮೊತ್ತ ಪೇರಿಸಿ 7 ವಿಕೆಟ್‌ ನಷ್ಟಕ್ಕೆ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿತ್ತು. ಎರಡನೇ ಇನ್ನಿಂಗ್ಸ್‌ ಆಟವನ್ನು ಕೂಡ ಭಾರತ 5 ವಿಕೆಟ್‌ ನಷ್ಟಕ್ಕೆ 246ರ ಮೊತ್ತದಲ್ಲಿ ಡಿಕ್ಲೇರ್‌ ಮಾಡಿತ್ತು.

ಮೊದಲ ಇನ್ನಿಂಗ್ಸ್‌ನಲ್ಲಿ ಲಂಕಾ 373 ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ದಿಟ್ಟ ಹೋರಾಟ ಸಾದರಪಡಿಸಿದ ಲಂಕಾ 5 ವಿಕೆಟ್‌ ನಷ್ಟಕ್ಕೆ 299 ರನ್‌ ಮಾಡಿ ಟೆಸ್ಟ್‌ ಪಂದ್ಯವನ್ನು ಇಂದಿನ ಅಂತಿಮ ದಿನದಾಟದಲ್ಲಿ  ಡ್ರಾನಲ್ಲಿ ಕೊನೆಗೊಳಿಸುವಲ್ಲಿ ಸಫ‌ಲವಾಯಿತು. 

ಈ ಟೆಸ್ಟ್‌ ಪಂದ್ಯ ಗೆಲ್ಲಲು 410 ರನ್‌ಗಳ ಗುರಿ ಪಡೆದ ಲಂಕೆಯ ಎರಡನೇ ಇನ್ನಿಂಗ್ಸ್‌ನ್ನು ಬಹುವಾಗಿ ಆಧರಿಸಿದವರು ಡಿಎಂ ಡಿ’ಸಿಲ್ವ (119 ರನ್‌, ಗಾಯಾಳುವಾಗಿ ನಿವೃತ್ತಿ), ಚಂಡಿಮಾಲ್‌ 36ರನ್‌.  ಎ ಆರ್‌ ಎಸ್‌ ಸಿಲ್ವ 74, ಡಿಕ್‌ವೆಲಾ 44 ರನ್‌. 

ರವೀಂದ್ರ ಜಡೇಜ 3 ವಿಕೆಟ್‌ ಪಡೆದರೆ ಮೊಹಮ್ಮದ್‌ ಶಮೀ 1, ಆರ್‌ ಅಶ್ವಿ‌ನ್‌ 1 ವಿಕೆಟ್‌ ಪಡೆದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next