Advertisement

“ಇಂಡಿಯಾ ವಿನ್ಸ್‌ ಫ್ರೀಡಂ’ಚಿತ್ರಕಲಾ ಪ್ರದರ್ಶನ 

11:15 AM Aug 15, 2017 | Team Udayavani |

ಬೆಂಗಳೂರು: 70ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹರಿಟೇಜ್‌ ಫೌಂಡೇಷನ್‌ ಆಫ್ ಆರ್ಟ್‌ ಆ್ಯಂಡ್‌ ಕಲ್ಚರ್‌ ವತಿಯಿಂದ “ಇಂಡಿಯಾ ವಿನ್ಸ್‌ ಫ್ರೀಡಂ’ ಹೆಸರಿನ ಮಕ್ಕಳ ಚಿತ್ರಕಲಾ ಪ್ರದರ್ಶನ ಆ.17ರ ತನಕ ನಗರದ  ವೆಂಕಟಪ್ಪ ಆರ್ಟ್‌ ಗ್ಯಾಲರಿಯಲ್ಲಿ ನಡೆಯಲಿದೆ.

Advertisement

ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವಿವಿಧ ಶಾಲೆಯ ಮಕ್ಕಳು ಬಿಡಿಸಿರುವ 25ಕ್ಕೂ ಹೆಚ್ಚಿನ ಚಿತ್ರಗಳನ್ನು ಪ್ರದರ್ಶನಕ್ಕಿಡಲಾಗಿದೆ. ಸ್ವಾತಂತ್ರ್ಯದ ಹೋರಾಟ, ಚಳವಳಿ, ಬ್ರಿಟಿಷರ ಹಿಡಿತದಲ್ಲಿದ್ದ ಭಾರತಾಂಬೆಯ ಕುರಿತಾದ ಕಲ್ಪನೆ ಮಕ್ಕಳ ಕುಂಚದಿಂದ ಮೂಡಿಬಂದಿದೆ.

ಚಿತ್ರಕಲಾ ಪ್ರದರ್ಶನ ಕುರಿತು ಮಾತನಾಡಿದ ಫೌಂಡೇಷನ್‌ ಅಧ್ಯಕ್ಷೆ ಬಿ. ಚಂದ್ರಿಕಾ, ಮಕ್ಕಳಲ್ಲಿ ಸ್ವಾತಂತ್ರ್ಯ ಪೂರ್ವ ಇತಿಹಾಸದ ಕಲ್ಪನೆಯನ್ನು ತಂದು ಅದನ್ನು ವಿವಿಧ ಬಣ್ಣಗಳ ಮೂಲಕ ಹೊರತರುವ ಉದ್ದೇಶದಿಂದ ಈ ಚಿತ್ರಕಲಾ ಪ್ರದರ್ಶನವನ್ನು ಆಯೋಜಿಸಿದ್ದೇವೆ. ಅಲ್ಲದೇ ಇದರಿಂದ ಮಕ್ಕಳಲ್ಲಿ ಬ್ರಾತೃತ್ವ ಭಾವನೆ ಮತ್ತು ದೇಶಭಕ್ತಿ ಹೆಚ್ಚಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next