ಬೆಂಗಳೂರು : ಐದು ದಿನಗಳ ಟೆಸ್ಟ್ ಪಂದ್ಯವನ್ನು ಕೇವಲ ಎರಡೇ ದಿನಗಳ ಆಟದಲ್ಲಿ ಇನ್ನಿಂಗ್ಸ್ ಹಾಗೂ 262 ರನ್‌ಗಳಿಂದ ಭರ್ಜರಿಯಾಗಿ ಜಯಿಸಿದ ಐತಿಹಾಸಿಕ ಚೊಚ್ಚಲ ಸಾಧನೆಯನ್ನು ಭಾರತ ಪ್ರವಾಸಿ ಅಫ್ಘಾನಿಸ್ಥಾನ ಕ್ರಿಕೆಟ್ ತಂಡದ ವಿರುದ್ಧ ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂ ನಡೆದ ಏಕೆಕ ಟೆಸ್ಟ್ ಪಂದ್ಯದ ಮೂಲಕ ದಾಖಲಿಸಿದೆ.
ಟಾಸ್ ಗೆದ್ದು ಮೊದಲು ಆಟವಾಡಿದ ಭಾರತ ತನ್ನ ಪ್ರಥಮ ಇನ್ನಿಂಗ್ಸ್‌ನಲ್ಲಿ 474 ರನ್‌ಗಳಿಗೆ ಇಂದಿನ ಎರಡನೇ ದಿನದ ಆಟದಲ್ಲಿ ಆಲೌಟಾಯಿತು.
ಇದಕ್ಕೆ ಉತ್ತರವಾಗಿ ದುರ್ಬಲ ಅಫ್ಘಾನಿಸ್ಥಾನ ತಂಡ ಕೇವಲ 109 ರನ್‌ಗಳಿಗೆ ಆಲೌಟಾಗಿ ಫಾಲೋ ಆನ್‌ಗೆ ಗುರಿಯಾಯಿತು.
ಎರಡನೇ ಇನ್ನಿಂಗ್ಸ್‌ನಲ್ಲಿ ಮತ್ತೆ ಭಾರತದ ಮಾರಕ ಸ್ಪಿನ್ ದಾಳಿಗೆ ಸರ್ವ ನಾಶವಾದ ಅಪಾ^ನಿಸ್ಥಾನ 103 ರನ್‌ಗಳಿಗೆ ಆಲೌಟಾಯಿತು. ಪರಿಣಾಮವಾಗಿ ಭಾರತಕ್ಕೆ 1 ಇನ್ನಿಂಗ್ಸ್ ಹಾಗೂ 262 ರನ್‌ಗಳ ಭರ್ಜರಿ ಐತಿಹಾಸಿಕ ಜಯ ಕೇವಲ ಎರಡೇ ದಿನಗಳ ಆಟದೊಳಗೆ ಒಲಿದುಬಂತು.
ಭಾರತದ ಸ್ಪಿನ್ನರ್‌ಗಳ ಪೈಕಿ ರವೀಂದ್ರ ಜಡೇಜಾ ಆರು ವಿಕೆಟ್, ಆರ್ ಅಶ್ವಿನ್ ಐದು ವಿಕೆಟ್, ಇಶಾಂತ್ ಶರ್ಮಾ ಮತ್ತು ಉಮೇಶ್ ಯಾದವ್ ತಲಾ 4 ವಿಕೆಟ್ ಕಿತ್ತರು.
ಕ್ರಿಕೆಟ್ ಇತಿಹಾಸದಲ್ಲಿ ಈ ವರೆಗೆ ಎರಡೇ ದಿನಗಳಲ್ಲಿ ಟೆಸ್ಟ್ ಪಂದ್ಯವನ್ನು ಗೆದ್ದಿರುವ ಇತರ ದೇಶಗಳೆಂದರೆ ಇಂಗ್ಲಂಡ್ (9 ಬಾರಿ), ಆಸ್ಟ್ರೇಲಿಯ (8 ಬಾರಿ) ದಕ್ಷಿಣ ಆಫ್ರಿಕ (2 ಬಾರಿ) ಮತ್ತು ನೂಜೀಲ್ಯಾಂಡ್ 1 ಬಾರಿ.