Advertisement
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗಿಳಿದ ಭಾರತ 20 ಓವರ್‌ಗಳಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡು 179 ರನ್ನು ಗಳಿಸಿತು. ಇದನ್ನು ಬೆನ್ನತ್ತಿದ ದ.ಆಫ್ರಿಕಾ 19.1 ಓವರ್‌ಗಳಲ್ಲಿ 131 ರನ್‌ಗಳಿಗೆ ಆಲೌಟಾಯಿತು. ಭಾರತಕ್ಕೆ 48 ರನ್ ಜಯ ಲಭಿಸಿತು.
Related Articles
Advertisement
ಸರಣಿಯನ್ನು ಉಳಿಸಿಕೊಳ್ಳಲು ಗೆಲ್ಲಲೇಬೇಕಾದ ಅನಿವಾರ್ಯತೆ ಹೊಂದಿದ್ದ ಭಾರತ, ಅದಕ್ಕೆ ಪೂರಕವಾಗಿ ಆಟ ಆರಂಭಿಸಿತು. ಮೊದಲ ವಿಕೆಟ್‌ಗೆ ಗಾಯಕ್ವಾಡ್ ಮತ್ತು ಕಿಶನ್ 10 ಓವರ್‌ಗಳಲ್ಲಿ 97 ರನ್ ಕೂಡಿಸಿದರು. ದಕ್ಷಿಣ ಆಫ್ರಿಕಾ ದಾಳಿಯನ್ನು ಮೆಟ್ಟಿ ನಿಂತ ಇವರಿಬ್ಬರು ಬೌಂಡರಿ ಸಿಕ್ಸರ್ ಬಾರಿಸಿ ರಂಜಿಸಿದರು.
ಆರಂಭಿಕ ಜೋಡಿಯನ್ನು ಕೇಶವ ಮಹಾರಾಜ್ ಮುರಿಯಲು ಯಶಸ್ವಿಯಾದರು. 35 ಎಸೆತ ಎದುರಿಸಿದ ಋತುರಾಜ್ 7 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 57 ರನ್ ಗಳಿಸಿದರು. ಕಿಶನ್ ಮೂರನೆಯವಾಗಿ ಔಟಾಗುವಾಗ 54 ರನ್ ಗಳಿಸಿದ್ದರು. ಅವರೂ ಕೂಡ 35 ಎಸೆತ ಎದುರಿಸಿ, 5 ಬೌಂಡರಿ ಮತ್ತು 2 ಸಿಕ್ಸರ್ ಬಾರಿಸಿದ್ದರು.ದ.ಆಫ್ರಿಕಾ ಬೌಲರ್‌ಗಳು ಸಂಘಟಿತ ಯಶಸ್ಸು ಸಾಧಿಸಿದರು. ಡ್ವೇನ್ ಪ್ರಿಟೋರಿಯಸ್ 29 ರನ್ ನೀಡಿ 2 ವಿಕೆಟ್ ಗಳಿಸಿದರು. ಕ್ಯಾಗಿಸೊ ರಬಾಡ, ತಬ್ರೇಜ್ , ಕೇಶವ ಮಹಾರಾಜ್ ತಲಾ 1 ವಿಕೆಟ್ ಕಿತ್ತರು. ಸಂಕ್ಷಿಪ್ತ ಸ್ಕೋರು: ಭಾರತ 20 ಓವರ್, 179/5 (ಋತುರಾಜ್ ಗಾಯಕ್ವಾಡ್ 57, ಇಶಾನ್ ಕಿಶನ್ 54, ಡ್ವೇನ್ ಪ್ರಿಟೋರಿಯಸ್ 29ಕ್ಕೆ 2). ದ.ಆಫ್ರಿಕಾ 19.1 ಓವರ್ 131 (ಹೆನ್ರಿಚ್ ಕ್ಲಾಸೆನ್ 29, ಹರ್ಷಲ್ ಪಟೇಲ್ 25ಕ್ಕೆ 4, ಚಹಲ್ 20ಕ್ಕೆ 3).