Advertisement

ಬಡಪಾಯಿ ವಿರುದ್ಧ ಭಾರತಕ್ಕೆ 3-0 ಸಂಭ್ರಮ

06:00 AM Nov 12, 2018 | Team Udayavani |

ಚೆನ್ನೈ: ಪ್ರವಾಸಿ ವೆಸ್ಟ್‌ ಇಂಡೀಸ್‌ ವಿರುದ್ಧ 3ನೇ ಮತ್ತು ಅಂತಿಮ ಟಿ20 ಪಂದ್ಯವನ್ನೂ ಭರ್ಜರಿಯಾಗಿಯೇ ಗೆದ್ದ ಭಾರತ ತಂಡ 3-0ಯಿಂದ ಸರಣಿ ವಶಪಡಿಸಿಕೊಂಡಿದೆ. 

Advertisement

ಕಡೆಯ ಪಂದ್ಯದಲ್ಲಾದರೂ ಗೆಲ್ಲುವ ಆಸೆ ಹೊಂದಿದ್ದ ಪ್ರವಾಸಿಗಳು ಇಲ್ಲಿಯೂ ಭಗ್ನಗೊಂಡ ಮನಸ್ಸಿನಿಂದಲೇ ತಮ್ಮ ನಾಡಿಗೆ ಹೊರಡಲು ಸಿದ್ಧವಾಗಿದ್ದಾರೆ. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ವೆಸ್ಟ್‌ ಇಂಡೀಸ್‌ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 181 ರನ್‌ ಗಳಿಸಿತು. ಇದನ್ನು ಬೆನ್ನತ್ತಿದ ಭಾರತ -20 ಓವರ್‌ನಲ್ಲಿ 4 ವಿಕೆಟ್‌ ಕಳೆದುಕೊಂಡು 182 ರನ್‌ಗಳಿಸಿತು.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ವಿಂಡೀಸ್‌ ನಾಯಕನ ನಿರ್ಧಾರವನ್ನು ಬ್ಯಾಟ್ಸ್‌ಮನ್‌ಗಳು ಯಶಸ್ವಿಗೊಳಿಸಿದರು. ವಿಂಡೀಸ್‌ ಕ್ರಿಕೆಟ್‌ನಲ್ಲಿ ಹೊಸತಾಗಿ ಕೇಳಿ ಬರುತ್ತಿರುವ ಹೆಸರಾದ ನಿಕೋಲಸ್‌ ಪೂರನ್‌ ಹಾಗೂ ಹಳೆ ಹುಲಿ ಡ್ಯಾರೆನ್‌ ಬ್ರಾವೊ ಸೇರಿಕೊಂಡು ಭಾರತದ ಬೌಲರ್‌ಗಳ ದಿಕ್ಕುತಪ್ಪಿಸಿದರು.

ವಿಂಡೀಸ್‌ನ ಬೃಹತ್‌ ಮೊತ್ತದಲ್ಲಿ ಭಾರತೀಯರ ಕಳಪೆ ಬೌಲಿಂಗ್‌ ಪಾತ್ರವೂ ಬೃಹತ್ತಾಗಿದೆ. ಇತರೆ ರನ್‌ಗಳ ರೂಪದಲ್ಲಿ 20 ರನ್‌ ಸೋರಿ ಹೋಯಿತು. ಇದರಲ್ಲಿ 16 ವೈಡ್‌ ಎಸೆತಗಳಿದ್ದವು! ಉಳಿದ 4 ರನ್‌ ಲೆಗ್‌ಬೈ ರೂಪದಲ್ಲಿ ಬಂದಿತ್ತು. 21 ರನ್‌ ಖಲೀಲ್‌ ಅಹ್ಮದ್‌ ಪಾಲಾದ ಅಂತಿಮ ಓವರಿನಲ್ಲಿ ನೀಡಲ್ಪಟ್ಟಿತು. ಭಾರತದ ಬೌಲಿಂಗ್‌ ಸರದಿಯಲ್ಲಿ ಮಿಂಚಿದ್ದು ಲೆಗ್‌ಸ್ಪಿನ್ನರ್‌ ಯಜುವೇಂದ್ರ ಚಹಲ್‌ ಮಾತ್ರ. ಅವರು 26 ರನ್‌ ನೀಡಿ 2 ವಿಕೆಟ್‌ ಕಿತ್ತರು. ಉಳಿದೊಂದು ವಿಕೆಟ್‌ ವಾಷಿಂಗ್ಟನ್‌ ಸುಂದರ್‌ ಪಾಲಾಯಿತು.

ಶೈ ಹೋಪ್‌ (24) ಮತ್ತು ಶಿಮ್ರನ್‌ ಹೆಟ್‌ಮೈರ್‌ (26) ಮೊದಲ ವಿಕೆಟಿಗೆ 6.1 ಓವರ್‌ಗಳಿಂದ 51 ರನ್‌ ಪೇರಿಸಿ ಉತ್ತಮ ಅಡಿಪಾಯ ನಿರ್ಮಿಸಿದರು. ಒನ್‌ಡೌನ್‌ನಲ್ಲಿ ಬಂದ ಡ್ಯಾರೆನ್‌ ಬ್ರಾವೊ ಅಜೇಯ 43 ರನ್‌ ಬಾರಿಸಿ ತಂಡದ ಮೊತ್ತ ಬೆಳೆಸಿದರು (37 ಎಸೆತ, 2 ಬೌಂಡರಿ, 2 ಸಿಕ್ಸರ್‌).

Advertisement

ಪೂರನ್‌ ಪರಿಪೂರ್ಣ ಆಟ: 13ನೇ ಓವರಿನಲ್ಲಿ ಬ್ಯಾಟ್‌ ಹಿಡಿದು ಬಂದ ನಿಕೋಲಸ್‌ ಪೂರನ್‌ ಇವರೆಲ್ಲರಿಗಿಂತ ಹೆಚ್ಚು ಆಕ್ರಮಣಕಾರಿ ಹಾಗೂ ಪರಿಪೂರ್ಣ ಬ್ಯಾಟಿಂಗ್‌ ಪ್ರದರ್ಶಿಸುವುದರೊಂದಿಗೆ ವಿಂಡೀಸ್‌ ದೊಡ್ಡ ಸ್ಕೋರ್‌ ದಾಖಲಿಸಿತು. ಟ್ರಿನಿಡಾಡ್‌ನ‌ ಎಡಗೈ ಬ್ಯಾಟ್ಸ್‌ಮನ್‌ ಪೂರನ್‌ 25 ಎಸೆತಗಳಲ್ಲಿ ಅಜೇಯ 53 ರನ್‌ ಬಾರಿಸಿದರು. ಈ ಅವಧಿಯಲ್ಲಿ 4 ಸಿಕ್ಸರ್‌, 4 ಫೋರ್‌ ಸಿಡಿದವು.
ನಿವೃತ್ತಿಯ ಸನಿಹದಲ್ಲಿರುವ ಹಳೆಯ ಹುಲಿ ಡ್ಯಾರೆನ್‌ ಬ್ರಾವೊ, ಹೊಸಬ ನಿಕೋಲಸ್‌ ಪೂರನ್‌ ಜೊತೆಗೂಡಿ ಭಾರತವನ್ನು ಕಾಡಿದರು. ತಂಡದ ಮೊತ್ತವನ್ನು ಉಬ್ಬಿಸುತ್ತ ಸಾಗಿದರು. ಇಬ್ಬರ ಜೊತೆಯಾಟದಲ್ಲಿ 4ನೇ ವಿಕೆಟ್‌ಗೆ 87 ರನ್‌ ಬಂತು. ಇವರಿಬ್ಬರೂ ಅಜೇಯವಾಗುಳಿದು ತಂಡದ ರನ್‌ಗತಿ ಕುಸಿಯದಂತೆ ನೋಡಿಕೊಂಡರು.

ಸ್ಕೋರ್‌ಪಟ್ಟಿ
ವೆಸ್ಟ್‌ ಇಂಡೀಸ್‌
ಶೈ ಹೋಪ್‌    ಸಿ ಸುಂದರ್‌ ಬಿ ಚಾಹಲ್‌    24
ಶಿಮ್ರನ್‌ ಹೆಟ್‌ಮೈರ್‌    ಸಿ ಪಾಂಡ್ಯ ಬಿ ಚಾಹಲ್‌    26
ಡ್ಯಾರನ್‌ ಬ್ರಾವೊ    ಔಟಾಗದೆ    43
ದಿನೇಶ್‌ ರಾಮದಿನ್‌    ಬಿ ಸುಂದರ್‌    15
ನಿಕೋಲಸ್‌ ಪೂರಣ್‌    ಔಟಾಗದೆ    53
ಇತರ        20
ಒಟ್ಟು (20 ಓವರ್‌ಗಳಲ್ಲಿ 3 ವಿಕೆಟಿಗೆ)        181
ವಿಕೆಟ್‌ ಪತನ: 1-51, 2-62, 3-94.
ಬೌಲಿಂಗ್‌:
ಖಲೀಲ್‌ ಅಹ್ಮದ್‌        4-0-37-0
ವಾಷಿಂಗ್ಟನ್‌ ಸುಂದರ್‌        4-0-33-1
ಭುವನೇಶ್ವರ್‌ ಕುಮಾರ್‌        4-0-39-0
ಕೃಣಾಲ್‌ ಪಾಂಡ್ಯ        4-0-40-0
ಯಜುವೇಂದ್ರ ಚಾಹಲ್‌        4-0-28-2

ಭಾರತ
ಶಿಖರ್‌ ಧವನ್‌    ಸಿ ಪೊಲಾರ್ಡ್‌ ಬಿ ಅಲೆನ್‌    92
ರೋಹಿತ್‌ ಶರ್ಮ    ಸಿ ಬ್ರಾತ್‌ವೇಟ್‌ ಬಿ ಪೌಲ್‌    4
ಕೆ.ಎಲ್‌. ರಾಹುಲ್‌    ಸಿ ರಾಮಧಿನ್‌ ಬಿ ಥಾಮಸ್‌    17
ರಿಷಬ್‌ ಪಂತ್‌    ಬಿ ಪೌಲ್‌    58
ಮನೀಷ್‌ ಪಾಂಡೆ    ಔಟಾಗದೆ    4
ದಿನೇಶ್‌ ಕಾರ್ತಿಕ್‌    ಔಟಾಗದೆ    0
ಇತರ        7
ಒಟ್ಟು  (20 ಓವರ್‌ಗಳಲ್ಲಿ 4 ವಿಕೆಟಿಗೆ)        182
ವಿಕೆಟ್‌ ಪತನ: 1-13, 2-45, 3-175, 4-181.
ಬೌಲಿಂಗ್‌:
ಖಾರಿ ಪಿಯರೆ        2-0-13-0
ಒಶಾನೆ ಥಾಮಸ್‌        4-0-43-1
ಕೀಮೊ ಪೌಲ್‌        4-0-32-2
ಕಾರ್ಲೋಸ್‌ ಬ್ರಾತ್‌ವೇಟ್‌        4-0-41-0
ಕೈರನ್‌ ಪೊಲಾರ್ಡ್‌        3-0-29-0
ಫ್ಯಾಬಿಯನ್‌ ಅಲೆನ್‌        3-0-23-1

Advertisement

Udayavani is now on Telegram. Click here to join our channel and stay updated with the latest news.

Next