Advertisement

ಚೆಸ್‌ ಒಲಿಂಪಿಯಾಡ್‌: ಭಾರತಕ್ಕೆ 3 ಪದಕ: ಪೋಲ್ಗರ್‌ ಭವಿಷ್ಯ

11:37 PM Jul 26, 2022 | Team Udayavani |

ಚೆನ್ನೈ: ಆತಿಥೇಯ ಭಾರತಕ್ಕೆ ಚೆಸ್‌ ಒಲಿಂಪಿಯಾಡ್‌ನ‌ಲ್ಲಿ 3 ಪದಕ ಗೆಲ್ಲುವ ಅವಕಾಶ ಇದೆ ಎಂಬುದಾಗಿ ಮಾಜಿ ವನಿತಾ ವಿಶ್ವ ಚಾಂಪಿಯನ್‌, ಅಮೆರಿಕ-ಹಂಗೇರಿಯನ್ನು ಪ್ರತಿನಿಧಿ ಸಿದ ಸುಸಾನ್‌ ಪೋಲ್ಗರ್‌ ಭವಿಷ್ಯ ನುಡಿದಿದ್ದಾರೆ.

Advertisement

ಭಾರತದ ಚೆಸ್‌ ಪ್ರಾಬಲ್ಯ ಹೆಚ್ಚುತ್ತಿರುವುದು ಹಾಗೂ ಈ ಬಾರಿ ಅತ್ಯಧಿಕ ಸಂಖ್ಯೆಯ ಸ್ಪರ್ಧಿಗಳು ಪಾಲ್ಗೊ ಳ್ಳುತ್ತಿರುವುದೇ ಇದಕ್ಕೆ ಕಾರಣ ಎಂಬುದು ಅವರ ಲೆಕ್ಕಾಚಾರ.

ಚೆನ್ನೈಯಲ್ಲಿ ಗುರುವಾರ ಆರಂಭ ಗೊಳ್ಳಲಿರುವ ಈ ಪಂದ್ಯಾವಳಿ ಆ. 10ರ ತನಕ ಸಾಗಲಿದೆ. ದಾಖಲೆಯ 187 ದೇಶಗಳ ಆಟಗಾರರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಓಪನ್‌ ವಿಭಾಗ ದಲ್ಲಿ 188 ತಂಡಗಳು ಹಾಗೂ ವನಿತಾ ವಿಭಾಗದಲ್ಲಿ 162 ತಂಡಗಳು ಪಾಲ್ಗೊಳ್ಳಲಿವೆ.

ಅಮೆರಿಕ ಫೇವರಿಟ್‌
“ಸ್ಟಾರ್‌ ಆಟಗಾರರನ್ನು ಒಳಗೊಂಡ ಅಮೆರಿಕ ಈ ಬಾರಿಯ ನೆಚ್ಚಿನ ತಂಡ ವಾಗಿದೆ. ರಷ್ಯಾ ಮತ್ತು ಚೈನೀಸ್‌ ತೈಪೆಯ ಆಟಗಾರ್ತಿಯರು ಇಲ್ಲದಿರುವುದರಿಂದ ವನಿತಾ ವಿಭಾಗದಲ್ಲಿ ಚಿನ್ನ ಗೆಲ್ಲುವ ಅವ ಕಾಶವೊಂದು ಭಾರತಕ್ಕಿದೆ’ ಎಂಬುದು ಒಲಿಂಪಿಯಾಡ್‌ನ‌ಲ್ಲಿ ದಾಖಲೆ ಸಂಖ್ಯೆಯ 12 ಪದಕ ಗೆದ್ದಿರುವ (5 ಚಿನ್ನ, 4 ಬೆಳ್ಳಿ, 3 ಕಂಚು) ಪೋಲ್ಗರ್‌ ಅಭಿಪ್ರಾಯಪಟ್ಟರು.

ಒಲಿದದ್ದು ಒಂದೇ ಕಂಚು
2014ರ ಟ್ರೋಮೊÕ ಕೂಟದಲ್ಲಿ ಕಂಚಿನ ಪದಕವೊಂದನ್ನಷ್ಟೇ ಜಯಿಸಿದ್ದು ಭಾರತದ ಚೆಸ್‌ ಒಲಿಂಪಿಯಾಡ್‌ ಸಾಧನೆಯಾಗಿದೆ. ಅಂದು ಪುರುಷರ ತಂಡ ಸ್ಪರ್ಧೆಯಲ್ಲಿ ಭಾರತಕ್ಕೆ ಈ ಪದಕ ಒಲಿದಿತ್ತು.

Advertisement

ಈ ಬಾರಿ ಭಾರತದ ಅತ್ಯಧಿಕ 30 ಆಟಗಾರರು ಪಾಲ್ಗೊಳ್ಳಲಿದ್ದಾರೆ. ಇದಕ್ಕೂ ಮೊದಲು 10 ಆಟಗಾರರು ಸ್ಪರ್ಧಿಸಿದ್ದೇ ದಾಖಲೆಯಾಗಿತ್ತು.

ಉತ್ತಮ ಅವಕಾಶ
ಚೆನ್ನೈ: ಮುಂಬರುವ ಚೆಸ್‌ ಒಲಿಂಪಿಯಾಡ್‌ನ‌ಲ್ಲಿ ಭಾರತಕ್ಕೆ ಪದಕ ಗೆಲ್ಲಲು ಉತ್ತಮ ಅವಕಾಶಗಳಿವೆ ಎಂದು ಹಾಲಿ ವಿಶ್ವ ಚಾಂಪಿಯನ್‌ ಮ್ಯಾಗ್ನಸ್‌ ಕಾರ್ಲ್ಸನ್‌ ಹೇಳಿದ್ದಾರೆ. ಭಾರತದ ಪುರುಷ ಮತ್ತು ವನಿತಾ ತಂಡಗಳು ಬಲಿಷ್ಠವಾಗಿವೆ ಮಾತ್ರವಲ್ಲದೇ ಎಲ್ಲ ಆಟಗಾರರು ಉತ್ತಮ ನಿರ್ವಹಣೆ ನೀಡುವ ಸಾಮರ್ಥ್ಯ ಹೊಂದಿದ್ದಾರೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next