Advertisement

ಮತ್ತೊಮ್ಮೆ ಚೀತಾ ನೆಲೆಯಾಗಲಿದೆ ಭಾರತ, ಹೊಸ ಪ್ರಯತ್ನಕ್ಕೆ ಕೈಹಾಕಿದ ಪ್ರಧಾನಿ

11:26 AM Sep 16, 2022 | Team Udayavani |

ಹೊಸದಿಲ್ಲಿ: ಸೆಪ್ಟೆಂಬರ್ 17 ರಂದು, ಭಾರತವು ಮತ್ತೊಮ್ಮೆ ಚೀತಾ ನೆಲೆಯಾಗಲಿದೆ. ಹೌದು ಈ ವರ್ಷ, ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದು ಚೀತಾಗಳನ್ನು ಭಾರತಕ್ಕೆ ಮರು ಪರಿಚಯಿಸುವ ಗುರಿಯನ್ನು ಈಡೇರಿಸಲು ಸರ್ಕಾರ ಯೋಜಿಸಿದೆ.

Advertisement

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾ ಯೋಜನೆಯಡಿಯಲ್ಲಿ ಕಾಡು ಚೀತಾಗಳನ್ನು ಬಿಡುಗಡೆ ಮಾಡಲಿದ್ದಾರೆ.

ಇದು ವಿಶ್ವದ ಮೊದಲ ಅಂತರ್-ಖಂಡಾಂತರ ದೊಡ್ಡ ಕಾಡು ಮಾಂಸಾಹಾರಿ ಪ್ರಾಣಿಗಳ ಸ್ಥಳಾಂತರ ಯೋಜನೆಯಾಗಿದೆ. ಭಾರತದ ವನ್ಯಜೀವಿಗಳು ಮತ್ತು ಅದರ ಆವಾಸಸ್ಥಾನವನ್ನು ಪುನರುಜ್ಜೀವನಗೊಳಿಸುವ ಮತ್ತು ವೈವಿಧ್ಯಗೊಳಿಸುವ ನಿಟ್ಟಿನಲ್ಲಿ ಮೋದಿಯವರು ಕಾಡು ಚೀತಾಗಳ ಪರಿಚಯ ಮಾಡಿಕೊಡುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಇದನ್ನೂ ಓದಿ:ತನ್ನ ಪತಿ ಮೊದಲು ‘ಮಹಿಳೆ’ಯಾಗಿದ್ದ ಎಂದು ಪತ್ನಿಗೆ ತಿಳಿದಿದ್ದು ಎಂಟು ವರ್ಷಗಳ ಬಳಿಕ!

ಚೀತಾ 1952ರಲ್ಲಿ ಭಾರತದಲ್ಲಿ ಅಳಿವಿನ ಅಂಚಿನಲ್ಲಿದೆ ಎಂದು ಘೋಷಿಸಲಾಯಿತು. ಪರಿಚಯಿಸಲಿರುವ ಚೀತಾಗಳು ನಮೀಬಿಯಾದಿಂದ ಬಂದಿದ್ದು, ಈ ವರ್ಷದ ಆರಂಭದಲ್ಲಿ ಸಹಿ ಮಾಡಿದ ಎಂಒಯು ಅಡಿಯಲ್ಲಿ ಈ ಯೋಜನೆ ನಡೆದಿದೆ.

ಐದು ಹೆಣ್ಣು ಮತ್ತು ನಾಲ್ಕು ಗಂಡು ಚೀತಾಗಳನ್ನು ಒಟ್ಜಿವಾರೊಂಗೊದಲ್ಲಿನ ಸಿಸಿಎಫ್ ಕೇಂದ್ರದಲ್ಲಿ ಕ್ವಾರಂಟೈನ್ ಮಾಡಲಾಗಿದೆ. ವ್ಯಾಕ್ಸಿನೇಷನ್ ಮತ್ತು ಉಪಗ್ರಹ ಕಾಲರ್ ಗಳನ್ನು ನೀಡಲಾಗಿದೆ. ಚೀತಾಗಳನ್ನು ಅವುಗಳ ಆರೋಗ್ಯ, ಕಾಡು ಸ್ವಭಾವ, ಬೇಟೆಯ ಪರಾಕ್ರಮ ಮತ್ತು ಉತ್ತಮ ಸಂಸ್ಥಾಪಕ ಜನಸಂಖ್ಯೆಗೆ ಅನುವಂಶಿಕ ಕೊಡುಗೆ ನೀಡುವ ಸಾಮರ್ಥ್ಯವನ್ನು ಪರಿಗಣಿಸಿದ ನಂತರ ಈ ಚಿರತೆಗಳನ್ನು ಆಯ್ಕೆ ಮಾಡಲಾಗಿದೆ.

ಈ ಚೀತಾಗಳು ವಿಶೇಷವಾಗಿ ನಿರ್ಮಿಸಲಾದ 500 ಹೆಕ್ಟೇರ್ (5 ಚದರ ಕಿಲೋಮೀಟರ್) ಪಂಜರದಲ್ಲಿ ಎರಡರಿಂದ ಮೂರು ತಿಂಗಳುಗಳನ್ನು ಕಳೆಯುತ್ತವೆ, ಮೊದಲು ತಮ್ಮ ಹೊಸ ಪರಿಸರಕ್ಕೆ ಹೊಂದಿಕೊಂಡ ನಂತರ ತೆರೆದ ಪ್ರದೇಶಕ್ಕೆ ಬಿಡಲಾಗುತ್ತದೆ.

ಇನ್ನೊಂದು ವಿಶೇಷತೆಯೆಂದರೆ ಚೀತಾಗಳನ್ನು ಕರೆತರಲು ಭಾರತದಿಂದ ಚಿರತೆಗಳ ಸುಂದರ ವರ್ಣಚಿತ್ರಗಳನ್ನು ಬಿಡಿಸಿದ ವಿಶೇಷ ವಿಮಾನವೊಂದು ನಮೀಬಿಯಾಗೆ ತೆರಳಿದ್ದು, ಮೊದಲ ಬಾರಿಗೆ ವಿಮಾನದಲ್ಲಿ ಚೀತಾಗಳನ್ನು ಸ್ಥಳಾಂತರಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next