Advertisement

6G ತಂತ್ರಜ್ಞಾನದಲ್ಲಿ ವಿಶ್ವವನ್ನು ಭಾರತ ಮುನ್ನಡೆಸಲಿದೆ: ಮೋದಿ

07:22 PM Oct 27, 2023 | Team Udayavani |

ನವದೆಹಲಿ: 6ಜಿ ತಂತ್ರಜ್ಞಾನದಲ್ಲಿ ವಿಶ್ವವನ್ನು ಭಾರತ ಮುನ್ನಡೆಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭವಿಷ್ಯ ನುಡಿದಿದ್ದಾರೆ.

Advertisement

7ನೇ ಆವೃತ್ತಿಯ ಭಾರತ ಮೊಬೈಲ್‌ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, “ದೇಶದಲ್ಲಿ 5ಜಿ ತಂತ್ರಜ್ಞಾನ ಅತಿ ವೇಗವಾಗಿ ವಿಸ್ತರಣೆಗೊಂಡಿತು. ಒಂದು ವರ್ಷದ ಅವಧಿಯಲ್ಲಿ ದೇಶದಲ್ಲಿ 4 ಲಕ್ಷ 5ಜಿ ಬೇಸ್‌ ಸ್ಟೇಷನ್‌ಗಳನ್ನು ಸ್ಥಾಪಿಸಲಾಯಿತು. ಈ ಹಿಂದೆ ಮೊಬೈಲ್‌ ಬ್ರಾಡ್‌ಬ್ಯಾಂಡ್‌ ವೇಗದಲ್ಲಿ 118 ರ್‍ಯಾಂಕ್‌ನಲ್ಲಿದ್ದ ಭಾರತ, ಈಗ 43ನೇ ರ್‍ಯಾಂಕ್‌ಗೆ ಲಗ್ಗೆ ಇಟ್ಟಿದೆ” ಎಂದರು.

“2014 ಕೇವಲ ಇಸವಿಯಲ್ಲ. ಅದು ಬದಲಾವಣೆಯ ಪರ್ವವಾಗಿದೆ. ಮೊಬೈಲ್‌ ಫೋನ್‌ಗಳ ಆಮದುದಾರ ದೇಶವಾಗಿದ್ದ ಭಾರತ, ರಫ್ತುದಾರನಾಗಿ ಬದಲಾಯಿತು. ಆ್ಯಪಲ್‌, ಗೂಗಲ್‌ನಂತಹ ದೊಡ್ಡ ಟೆಕ್‌ ಕಂಪನಿಗಳು ದೇಶದಲ್ಲಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಸಾಲುಗಟ್ಟಿ ನಿಂತಿವೆ” ಎಂದು ಪ್ರಧಾನಿ ಮೋದಿ ಹೇಳಿದರು.

ಇದೇ ವೇಳೆ ಶಿಕ್ಷಣ, ಕೃಷಿ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಅಫ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಲು 100 ಶಿಕ್ಷಣ ಸಂಸ್ಥೆಗಳಿಗಾಗಿ “5ಜಿ ಯೂಸ್‌ ಕೇಸ್‌ ಲ್ಯಾಬ್ಸ್”ಗೆ ಪ್ರಧಾನಿ ಮೋದಿ ಚಾಲನೆ ನೀಡಿದರು. ದೂರಸಂಪರ್ಕ ಇಲಾಖೆಯು ಈ ಪ್ರಯೋಗಾಲಯಗಳನ್ನು ನಿರ್ವಹಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next