Advertisement

ಪಾಕ್‌ ವಿರುದ್ಧ ಭಾರತ ಕಠಿನ ಕ್ರಮ ಸಾಧ್ಯತೆ 

12:30 AM Feb 24, 2019 | Team Udayavani |

ಪುಲ್ವಾಮಾ ದಾಳಿ ಅನಂತರದಲ್ಲಿ ಭಾರತ ಮತ್ತು ಪಾಕ್‌ ಮಧ್ಯೆ ಪರಿಸ್ಥಿತಿ ಉದ್ವಿಗ್ನಗೊಂಡಿದೆ ಎಂಬು ದನ್ನು ಸಮ್ಮತಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಭಾರತ ಕಠಿನ ಕ್ರಮ ಕೈಗೊಳ್ಳಲು ನಿರ್ಧರಿ ಸುತ್ತಿರುವಂತೆ ಕಾಣುತ್ತಿದೆ ಎಂದಿದ್ದಾರೆ.

Advertisement

ಭಾರತ 50 ಯೋಧರನ್ನು ಕಳೆದು ಕೊಂಡಿದೆ. ನನಗೆ ಭಾರತದ ನೋವು ಅರ್ಥ ಆಗುತ್ತದೆ. ಅಮೆರಿಕ, ಇತರ ದೇಶಗಳು ಭಾರತ ಮತ್ತು ಪಾಕ್‌ ಜತೆ ಮಾತುಕತೆ ನಡೆಸುತ್ತಿವೆ. ಆದರೆ ಇದು ಸೂಕ್ಷ್ಮ ಸನ್ನಿವೇಶ. ಈ ಘಟನೆಯ ನಂತರ ಭಾರತ, ಪಾಕ್‌ ಮಧ್ಯೆ ತುಂಬಾ ಸಮಸ್ಯೆಗಳು ಉದ್ಭವವಾಗಿವೆ. ಪುಲ್ವಾಮಾ ಘಟನೆಯ ನಂತರದ ಮಾತುಕತೆಯಲ್ಲಿ ನಾವು ಸಕ್ರಿಯವಾಗಿದ್ದೇವೆ. ಇದು ತುಂಬಾ ಅಪಾಯಕಾರಿ ಮತ್ತು ಕೆಟ್ಟ ಸ್ಥಿತಿ. ಇದು ಸಾಧ್ಯವಾದಷ್ಟು ಬೇಗ ನಿಲ್ಲಬೇಕು ಎಂದು ಬಯಸಿದ್ದೇವೆ ಎಂದೂ ಹೇಳಿದ್ದಾರೆ. 

ಪಾಕಿಸ್ಥಾನಕ್ಕೆ ನಾವು ನೀಡುತ್ತಿದ್ದ 1.3 ಬಿಲಿಯನ್‌ ಡಾಲರ್‌ ನೆರವು ನಿಲ್ಲಿಸಿದ್ದೇವೆ.  ಪಾಕ್‌ ಜತೆ ಮಾತು ಕತೆ ನಡೆಸುವ ಸಾಧ್ಯತೆಯೂ ಇದೆ. ಈ ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ಅಮೆರಿಕದಿಂದ ಪಾಕಿಸ್ಥಾನ ತುಂಬಾ ಲಾಭ ಪಡೆದಿದೆ. ಹಾಗಂತ, ಅವರಿಗೆ ಬೇಕಾದ ರೀತಿಯಲ್ಲಿ ನಾವು ಸಹಾಯ ಮಾಡ ಲಾಗದು ಎಂದಿದ್ದಾರೆ ಟ್ರಂಪ್‌. 

ಈಗಾಗಲೇ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್‌ ಬೋಲ್ಟನ್‌ ಜೊತೆಗೆ ಭಾರತದ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಮಾತ ನಾಡಿದ್ದು, ಭಾರತಕ್ಕೆ ಸ್ವಯಂ ರಕ್ಷಣೆ ಹಕ್ಕು ಇದೆ ಎಂದು ಬೋಲ್ಟನ್‌ ಹೇಳಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ಥಾನದ ವಿರುದ್ಧ ರಾಜತಾಂತ್ರಿಕ ಕ್ರಮಗಳನ್ನು ಭಾರತ ಕೈಗೊಳ್ಳುತ್ತಿದ್ದು, ಪಾಕಿಸ್ಥಾನವು ಉಗ್ರರನ್ನು ಪೋಷಿಸುತ್ತಿರುವ ಬಗ್ಗೆ ಇತರ ದೇಶಗಳಿಗೆ ಮನವರಿಕೆ ಮಾಡಿಕೊಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next