Advertisement
2016ರಲ್ಲಿ ಭಾರತವು 59 ಸಾವಿರ ಕೋಟಿ ರೂ. ವೆಚ್ಚದಲ್ಲಿ 35 ರಫೇಲ್ ಜೆಟ್ ಖರೀದಿಗೆ ಫ್ರಾನ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಈವರೆಗೆ 11 ವಿಮಾನಗಳು ಬಂದಿಳಿದಿದ್ದು, ಮಾರ್ಚ್ನಲ್ಲಿ 17 ಜೆಟ್‌ಗಳು ಹಸ್ತಾಂತರಗೊಳ್ಳಲಿವೆ. ಏಪ್ರಿಲ್ ವೇಳೆಗೆ ಉಳಿದ ವಿಮಾನಗಳೂ ನಮ್ಮ ಕೈಸೇರಲಿವೆ ಎಂದು ರಾಜ್ಯಸಭೆಗೆ ಸಿಂಗ್ ಮಾಹಿತಿ ನೀಡಿದ್ದಾರೆ.
ಗಡಿಯಲ್ಲಿ ಪಾಕ್ ಉಪಟಳ ಕುರಿತು ಪ್ರಸ್ತಾಪಿಸಿದ ರಾಜನಾಥ್ ಸಿಂಗ್, ಆ ದೇಶದ ದುಸ್ಸಾಹಸಕ್ಕೆ ನಮ್ಮ ಸೇನೆ ತಕ್ಕ ಪ್ರತ್ಯುತ್ತರ ನೀಡುತ್ತಿದ್ದು, ಪಾಕಿಸ್ತಾನದ ಎಲ್ಲ ದುರ್ವರ್ತನೆಗಳೂ ಗಡಿಗೇ ಸೀಮಿತವಾಗುವಂತೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಜತೆಗೆ, ಕಳೆದ ವರ್ಷ ಪಾಕಿಸ್ತಾನ ಸೇನೆ ನಡೆಸಿದ ಕದನ ವಿರಾಮ ಉಲ್ಲಂಘನೆಗೆ 46 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ ಎಂದೂ ಸಿಂಗ್ ಹೇಳಿದ್ದಾರೆ. ಇನ್ನು, ಪೂರ್ವ ಲಡಾಖ್‌ನಲ್ಲಿ ಚೀನಾ ಸೇನೆಯನ್ನು ಎದುರಿಸಲು ತುರ್ತು ಸೇನಾ ಸಲಕರಣೆಗಳು, ಶಸ್ತ್ರಾಸ್ತ್ರಗಳ ಖರೀದಿ ಪ್ರಕ್ರಿಯೆ ನಡೆಯುತ್ತಿದೆ ಎಂದೂ ಸರ್ಕಾರ ತಿಳಿಸಿದೆ. ಇದನ್ನೂ ಓದಿ:ಗೋಹತ್ಯೆ ನಿಷೇಧ ಅಂಗೀಕಾರದ ಕುರಿತು ಹರ್ಷ ವ್ಯಕ್ತಪಡಿಸಿದ ಸಚಿವ ಪ್ರಭು ಚವ್ಹಾಣ್
Related Articles
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಅಂಬಾಲಾ ವಾಯುನೆಲೆಯಲ್ಲಿ ಮೊದಲ 5 ರಫೇಲ್ ಯುದ್ಧವಿಮಾನವನ್ನು ವಾಯುಪಡೆಗೆ ಸೇರ್ಪಡೆ ಮಾಡುವ ಕಾರ್ಯಕ್ರಮಕ್ಕೆ 41 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಇದರಲ್ಲಿ 9.18 ಲಕ್ಷ ರೂ. ಜಿಎಸ್‌ಟಿ ಕೂಡ ಸೇರಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
Advertisement