Advertisement
ಶುಕ್ರವಾರದ ಕೊನೆಯ ಮುಖಾಮುಖಿಯಲ್ಲಿಆರಂಭಿಕ ಕುಸಿತದಿಂದ ಚೇತರಿಸಿಕೊಂಡ ಭಾರತ 50 ಓವರ್‌ಗಳಲ್ಲಿ 265ಕ್ಕೆ ಆಲೌಟ್ ಆಯಿತು. ಇದು ಈ ಸರಣಿಯಲ್ಲಿ ದಾಖಲಾದ ಗರಿಷ್ಠ ಸ್ಕೋರ್. ಆದರೆ ವೆಸ್ಟ್ ಇಂಡೀಸ್ ಆರಂಭಿಕ ಆಘಾತದಿಂದ ಚೇತರಿಸಿಕೊಳ್ಳಲೇ ಇಲ್ಲ. ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿ 37.1 ಓವರ್‌ಗಳಲ್ಲಿ 169ಕ್ಕೆ ಆಲೌಟ್ ಆಗಿ 96 ರನ್ನುಗಳ ಸೋಲಿಗೆ ತುತ್ತಾಯಿತು.
ವೆಸ್ಟ್ ಇಂಡೀಸ್‌ನ 3 ವಿಕೆಟ್ 5 ಓವರ್ ಮುಗಿಯುವಷ್ಟರಲ್ಲಿ 25 ರನ್ನಿಗೆ ಉರುಳಿತು. ಹೋಪ್ ಅವರನ್ನು ಲೆಗ್ ಬಿಫೋರ್ ಬಲೆಗೆ ಕೆಡವಿದ ಸಿರಾಜ್ ಮೊದಲ ಯಶಸ್ಸು ತಂದಿತ್ತರು. ಕಿಂಗ್ ಮತ್ತು ಬ್ರೂಕ್ಸ್ ಅವರನ್ನು ಚಹರ್ ಒಂದೇ ಓವರ್‌ನಲ್ಲಿ ಕೆಡವಿದರು.
Related Articles
Advertisement
ಪ್ರಸಿದ್ಧ್ ಕೃಷ್ಣ ಮತ್ತು ಮೊಹಮ್ಮದ್ ಸಿರಾಜ್ ತಲಾ 3 ವಿಕೆಟ್; ದೀಪಕ್ ಚಹರ್, ಕುಲದೀಪ್ ಯಾದವ್ ತಲಾ 2 ವಿಕೆಟ್ ಕೆಡವಿದರು.