Advertisement
ರಾಜ್‌ಕೋಟ್‌ನಲ್ಲಿ ಮೂರೇ ದಿನದಲ್ಲಿ ಮಂಡಿಯೂರಿದ ವೆಸ್ಟ್ ಇಂಡೀಸ್, ಹೈದರಾಬಾದ್‌ನಲ್ಲಿ ಸುಧಾರಿತ ಪ್ರದರ್ಶನ ನೀಡಿ ಕನಿಷ್ಠ ನಾಲ್ಕನೇ ದಿನದ ವರೆಗಾದರೂ ಪಂದ್ಯವನ್ನು ಎಳೆದು ತಂದೀತೆಂಬ ನಿರೀಕ್ಷೆ ರವಿವಾರ ಬೆಳಗ್ಗಿನ ತನಕ ಇತ್ತು. ಆದರೆ ಯಾವಾಗ ಭಾರತದ ಪ್ರಥಮ ಇನ್ನಿಂಗ್ಸ್ 367ಕ್ಕೆ ಮುಗಿದು, 56 ರನ್ನುಗಳ ಹಿನ್ನಡೆಯೊಂದಿಗೆ ವೆಸ್ಟ್ ಇಂಡೀಸ್ ದ್ವಿತೀಯ ಸರದಿಯನ್ನು ಆರಂಭಿಸಿತೋ ಅಲ್ಲಿಂದ ಪಂದ್ಯದ ಚಿತ್ರಣವೇ ಬದಲಾಗತೊಡಗಿತು. ಆತಿಥೇಯರ ಬೌಲಿಂಗ್ ದಾಳಿಗೆ ತತ್ತರಿಸಿ ನಿರಂತರವಾಗಿ ವಿಕೆಟ್ ಉರುಳಿಸಿಕೊಳ್ಳುತ್ತ ಹೋದ ಹೋಲ್ಡರ್ ಪಡೆ ಕೇವಲ 46.1 ಓವರ್‌ಗಳಲ್ಲಿ 127 ರನ್ನಿಗೆ ಗಂಟುಮೂಟೆ ಕಟ್ಟಿತು.
ಇಂಗ್ಲೆಂಡ್‌ನಲ್ಲಿ 4-1 ಅಂತರದಿಂದ ಸರಣಿ ಸೋತು ಬಂದಿದ್ದ ಭಾರತ, ತವರಿನಲ್ಲಿ ದುರ್ಬಲ ವೆಸ್ಟ್ ಇಂಡೀಸ್ ವಿರುದ್ಧ ಮೇಲುಗೈ ಸಾಧಿಸಿದ್ದು ನಿರೀಕ್ಷಿತವೇ ಆಗಿತ್ತು. ಇದು ತಾಯ್ನಾಡಿನಲ್ಲಿ ಭಾರತ ತಂಡಕ್ಕೆ ಒಲಿದ ಸತತ 10ನೇ ಟೆಸ್ಟ್ ಸರಣಿ ಗೆಲುವು ಹಾಗೂ ಜಂಟಿ ವಿಶ್ವದಾಖಲೆ ಎಂಬುದು ವಿಶೇಷ. 2012ರಲ್ಲಿ ಇಂಗ್ಲೆಂಡಿಗೆ ಸೋತ ಬಳಿಕ ಭಾರತ ತವರಿನಲ್ಲಿ ಟೆಸ್ಟ್ ಸರಣಿಯನ್ನು ಕಳೆದುಕೊಂಡದ್ದಿಲ್ಲ. ಭಾರತದ ಮುಂದಿನ್ನು ಆಸ್ಟ್ರೇಲಿಯ ವಿರುದ್ಧದ ಕಠಿನ ಸರಣಿಯ ಸವಾಲಿದೆ. ವರ್ಷಾಂತ್ಯದಲ್ಲಿ ಕಾಂಗರೂ ನಾಡಿನಲ್ಲಿ ಟೀಮ್ ಇಂಡಿಯಾಕ್ಕೆ ಅಗ್ನಿಪರೀಕ್ಷೆ ಎದುರಾಗಲಿದ್ದು, ಡಿ. 4ರಿಂದ ಅಡಿಲೇಡ್‌ನಲ್ಲಿ ಸರಣಿಯ ಮೊದಲ ಟೆಸ್ಟ್ ಆರಂಭವಾಗಲಿದೆ.
Related Articles
ತೃತೀಯ ದಿನದಾಟ ದಲ್ಲಿ ಭಾರತದ ಕ್ರಿಕೆಟ್ ಅಭಿಮಾನಿಗಳು ರಿಷಬ್ ಪಂತ್ ಮತ್ತು ಅಜಿಂಕ್ಯ ರಹಾನೆ ಅವರ ಶತಕದಾಟಕ್ಕೆ ಕಾತರಿಂದ ಕಾಯುತ್ತಿದ್ದರು. ಆದರೆ ಇಬ್ಬರಿಗೂ ಮೂರಂಕೆಯ ಗಡಿ ತಲುಪಲಾಗಲಿಲ್ಲ. ರಹಾನೆ 80 ರನ್ನಿಗೆ ಔಟಾದರೆ (183 ಎಸೆತ, 7 ಬೌಂಡರಿ), ಪಂತ್ ಮತ್ತೂಮ್ಮೆ 92 ರನ್ನಿಗೆ ವಿಕೆಟ್ ಒಪ್ಪಿಸಿದರು (134 ಎಸೆತ, 11 ಬೌಂಡರಿ, 2 ಸಿಕ್ಸರ್). ರಾಜ್‌ಕೋಟ್ ಟೆಸ್ಟ್‌ನಲ್ಲೂ ಪಂತ್ 92 ರನ್ ಮಾಡಿ ಔಟಾಗಿದ್ದರು. ಇದರಿಂದಾಗಿ ಅವರಿಗೆ ಸತತ 3 ಶತಕ ಬಾರಿಸುವ ಅವಕಾಶ ತಪ್ಪಿಹೋಯಿತು.
Advertisement
ರವಿವಾರ ಭಾರತದ ಆರಂಭ ಆಘಾತಕಾರಿ ಯಾಗಿತ್ತು. ನಾಯಕ ಜಾಸನ್ ಹೋಲ್ಡರ್ 3 ಎಸೆತಗಳ ಅಂತರದಲ್ಲಿ ರಹಾನೆ ಮತ್ತು ಜಡೇಜ ಅವರನ್ನು ಪೆವಿಲಿಯನ್ನಿಗೆ ಅಟ್ಟಿ ವಿಂಡೀಸಿಗೆ ಮೇಲುಗೈ ಒದಗಿಸಿದರು. ಆದರೆ ಇದನ್ನು ಉಳಿಸಿಕೊಳ್ಳುವಲ್ಲಿ ಅವರ ಬ್ಯಾಟ್ಸ್‌ಮನ್‌ಗಳಿಂದಾಗಲಿಲ್ಲ. ಓಪನರ್‌ಗಳಿಬ್ಬರೂ ಖಾತೆ ತೆರೆಯದೇ ಹೋಗುವುದರೊಂದಿಗೆ ಪ್ರವಾಸಿಗರ ಸ್ಥಿತಿ ಆರಂಭದಲ್ಲೇ ಬಿಗಡಾಯಿಸಿತು. 38 ರನ್ ಮಾಡಿದ ಆ್ಯಂಬ್ರಿಸ್ ಅವರದೇ ಹೆಚ್ಚಿನ ಗಳಿಕೆ ಎಂಬುದು ಕೆರಿಬಿಯನ್ ಬ್ಯಾಟಿಂಗಿನ ವೈಫಲ್ಯದ ಕತೆಯನ್ನು ಸಾರುತ್ತದೆ. ಉಮೇಶ್ ಯಾದವ್ 4, ರವೀಂದ್ರ ಜಡೇಜ 3, ಅಶ್ವಿನ್ 2 ಹಾಗೂ ಕುಲದೀಪ್ ಯಾದವ್ ಒಂದು ವಿಕೆಟ್ ಕಿತ್ತರು. ಗಾಯಾಳು ಶಾದೂìಲ್ ಠಾಕೂರ್ ಬೌಲಿಂಗ್ ನಡೆಸಲಿಲ್ಲ.
3ನೇ ಸಾಧಕಉಮೇಶ್ ಯಾದವ್ ತವರಿನ ಟೆಸ್ಟ್ ಒಂದರಲ್ಲಿ 10 ಪ್ಲಸ್ ವಿಕೆಟ್ ಕಿತ್ತ ಭಾರತದ 3ನೇ ಪೇಸ್ ಬೌಲರ್ ಎನಿಸಿದರು. ಉಳಿದಿಬ್ಬರೆಂದರೆ ಕಪಿಲ್‌ದೇವ್ ಮತ್ತು ಜಾವಗಲ್ ಶ್ರೀನಾಥ್. ಕಪಿಲ್‌ದೇವ್ 2 ಸಲ ಈ ಸಾಧನೆ ಮಾಡಿದ್ದಾರೆ. ಇದಕ್ಕೆ ದೃಷ್ಟಾಂತವಾಗಿರುವುದು ಪಾಕಿಸ್ಥಾನ ವಿರುದ್ಧದ 1980ರ ಚೆನ್ನೈ ಟೆಸ್ಟ್ ಹಾಗೂ ವೆಸ್ಟ್ ಇಂಡೀಸ್ ಎದುರಿನ 1983ರ ಅಹ್ಮದಾಬಾದ್ ಟೆಸ್ಟ್. ಶ್ರೀನಾಥ್ 1999ರ ಕೋಲ್ಕತಾ ಟೆಸ್ಟ್‌ನಲ್ಲಿ ಪಾಕಿಸ್ಥಾನದ ಎದುರು ಈ ಸಾಹಸಗೈದಿದ್ದರು. ಸ್ಕೋರ್‌ಪಟ್ಟಿ
ವೆಸ್ಟ್ ಇಂಡೀಸ್ ಪ್ರಥಮ ಇನ್ನಿಂಗ್ಸ್ 311
ಭಾರತ ಪ್ರಥಮ ಇನ್ನಿಂಗ್ಸ್
(ನಿನ್ನೆ 4 ವಿಕೆಟಿಗೆ) 308
ಅಜಿಂಕ್ಯ ರಹಾನೆ ಸಿ ಹೋಪ್ ಬಿ ಹೋಲ್ಡರ್ 80
ರಿಷಬ್ ಪಂತ್ ಸಿ ಹೆಟ್‌ಮೈರ್ ಬಿ ಗ್ಯಾಬ್ರಿಯಲ್ 92
ರವೀಂದ್ರ ಜಡೇಜ ಎಲ್‌ಬಿಡಬ್ಲ್ಯು ಹೋಲ್ಡರ್ 0
ಆರ್. ಅಶ್ವಿನ್ ಬಿ ಗ್ಯಾಬ್ರಿಯಲ್ 35
ಕುಲದೀಪ್ ಯಾದವ್ ಬಿ ಹೋಲ್ಡರ್ 6
ಉಮೇಶ್ ಯಾದವ್ ಹ್ಯಾಮಿಲ್ಟನ್ ಬಿ ವ್ಯಾರಿಕ್ಯಾನ್ 2
ಶಾದೂìಲ್ ಠಾಕೂರ್ ಔಟಾಗದೆ 4 ಇತರ 19
ಒಟ್ಟು (ಆಲೌಟ್) 367
ವಿಕೆಟ್ ಪತನ: 5-314, 6-314, 7-322, 8-334, 9-339. ಬೌಲಿಂಗ್:
ಶಾನನ್ ಗ್ಯಾಬ್ರಿಯಲ್ 20.4-1-107-3
ಜಾಸನ್ ಹೋಲ್ಡರ್ 23-5-56-5
ಜರ್ಮೈನ್ ವ್ಯಾರಿಕ್ಯಾನ್ 31-7-84-2
ರೋಸ್ಟನ್ ಚೇಸ್ 9-1-22-0
ದೇವೇಂದ್ರ ಬಿಶೂ 21-4-78-0
ಕ್ರೆಗ್ ಬ್ರಾತ್‌ವೇಟ್ 2-0-6-0 ವೆಸ್ಟ್ ಇಂಡೀಸ್ ದ್ವಿತೀಯ ಇನ್ನಿಂಗ್ಸ್
ಕ್ರೆಗ್ ಬ್ರಾತ್‌ವೇಟ್ ಸಿ ಪಂತ್ ಬಿ ಯಾದವ್ 0
ಕೈರನ್ ಪೊವೆಲ್ ಸಿ ರಹಾನೆ ಬಿ ಅಶ್ವಿನ್ 0
ಶೈ ಹೋಪ್ ಸಿ ರಹಾನೆ ಬಿ ಜಡೇಜ 28
ಸಿಮ್ರನ್ ಹೈಟ್‌ಮೈರ್ ಸಿ ಪೂಜಾರ ಬಿ ಕುಲದೀಪ್ 17
ಸುನೀಲ್ ಆ್ಯಂಬ್ರಿಸ್ ಎಲ್‌ಬಿಡಬ್ಲ್ಯು ಜಡೇಜ 38
ರೋಸ್ಟನ್ ಚೇಸ್ ಬಿ ಯಾದವ್ 6
ಶೇನ್ ಡೌರಿಚ್ ಬಿ ಯಾದವ್ 0
ಜಾಸನ್ ಹೋಲ್ಡರ್ ಸಿ ಪಂತ್ ಬಿ ಜಡೇಜ 19
ದೇವೇಂದ್ರ ಬಿಶೂ ಔಟಾಗದೆ 10
ಜರ್ಮೈನ್ ವ್ಯಾರಿಕ್ಯಾನ್ ಬಿ ಅಶ್ವಿನ್ 7
ಶಾನನ್ ಗ್ಯಾಬ್ರಿಯಲ್ ಬಿ ಯಾದವ್ 1 ಇತರ 1
ಒಟ್ಟು (ಆಲೌಟ್) 127
ವಿಕೆಟ್ ಪತನ: 1-0, 2-6, 3-45, 4-45, 5-68, 6-70, 7-108, 8-109, 9-126. ಬೌಲಿಂಗ್:
ಉಮೇಶ್ ಯಾದವ್ 12.1-3-45-4
ಆರ್. ಅಶ್ವಿನ್ 10-4-24-2
ಕುಲದೀಪ್ ಯಾದವ್ 13-1-45-1
ರವೀಂದ್ರ ಜಡೇಜ 11-5-12-3 ಭಾರತ ದ್ವಿತೀಯ ಇನ್ನಿಂಗ್ಸ್
(ಗೆಲುವಿನ ಗುರಿ 72 ರನ್)
ಪೃಥ್ವಿ ಶಾ ಔಟಾಗದೆ 33
ಕೆ.ಎಲ್. ರಾಹುಲ್ ಔಟಾಗದೆ 33
ಇತರ 9
ಒಟ್ಟು (ವಿಕೆಟ್ ನಷ್ಟವಿಲ್ಲದೆ) 75 ಬೌಲಿಂಗ್:
ಜಾಸನ್ ಹೋಲ್ಡರ್ 4-0-17-0
ಜರ್ಮೈನ್ ವ್ಯಾರಿಕ್ಯಾನ್ 4-0-17-0
ದೇವೇಂದ್ರ ಬಿಶೂ 4.1-0-19-0
ರೋಸ್ಟನ್ ಚೇಸ್ 4-0-14-0
ಪಂದ್ಯಶ್ರೇಷ್ಠ: ಉಮೇಶ್ ಯಾದವ್
ಸರಣಿಶ್ರೇಷ್ಠ: ಪೃಥ್ವಿ ಶಾ ಎಕ್ಸ್‌ಟ್ರಾ ಇನ್ನಿಂಗ್ಸ್
ಭಾರತ ತವರಿನಲ್ಲಿ ಸತತ 10 ಟೆಸ್ಟ್ ಸರಣಿಗಳನ್ನು ಗೆದ್ದು ಆಸ್ಟ್ರೇಲಿಯದ ವಿಶ್ವದಾಖಲೆಯನ್ನು ಸರಿದೂಗಿಸಿತು. ಆಸ್ಟ್ರೇಲಿಯ 2 ಸಲ ಈ ಸಾಧನೆ ಮಾಡಿದೆ (ಮೊದಲ ಸಲ 1994-2001, ಎರಡನೇ ಸಲ 2004ರಿಂದ 2009). ಭಾರತ ಮೊದಲ ಸಲ ವೆಸ್ಟ್ ಇಂಡೀಸನ್ನು 10 ವಿಕೆಟ್‌ಗಳಿಂದ ಮಣಿಸಿತು. ಒಟ್ಟಾರೆಯಾಗಿ ಇದು ಭಾರತ ದಾಖಲಿಸಿದ 8ನೇ 10 ವಿಕೆಟ್ ಅಂತರದ ಗೆಲುವು. ಭಾರತ ತವರಿನ ಸತತ 3 ಟೆಸ್ಟ್‌ಗಳನ್ನು ಮೂರೇ ದಿನದಲ್ಲಿ ಜಯಿಸಿತು. ಇದಕ್ಕೂ ಮುನ್ನ ಅಫ್ಘಾನಿಸ್ಥಾನಕ್ಕೂ 3 ದಿನದಲ್ಲಿ ಸೋಲುಣಿಸಿತ್ತು. 2003ರ ಬಳಿಕ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಸತತ 7 ಟೆಸ್ಟ್ ಸರಣಿಗಳನ್ನು ಗೆದ್ದಿತು. ಈ ಅವಧಿಯಲ್ಲಿ ಭಾರತ ಒಂದರಲ್ಲೂ ಸೋತಿಲ್ಲ. ವಿಂಡೀಸ್ ಎದುರಿನ ಇದಕ್ಕೂ ಹಿಂದಿನ 7 ಸರಣಿಗಳಲ್ಲಿ ಭಾರತ ಒಂದರಲ್ಲೂ ಜಯಿಸಿರಲಿಲ್ಲ! ರಿಷಬ್ ಪಂತ್ ಸತತ 2 ಇನ್ನಿಂಗ್ಸ್‌ಗಳಲ್ಲಿ “90 ಪ್ಲಸ್’ ಮೊತ್ತಕ್ಕೆ ಔಟಾದ ಭಾರತದ 2ನೇ ಕ್ರಿಕೆಟಿಗ. ರಾಹುಲ್ ದ್ರಾವಿಡ್ ಮೊದಲಿಗ (1997ರ ಶ್ರೀಲಂಕಾ ಸರಣಿ). ಪೃಥ್ವಿ ಶಾ ಟೆಸ್ಟ್ ಕ್ರಿಕೆಟ್‌ನಲ್ಲಿ ಗೆಲುವಿನ ರನ್ ಬಾರಿಸಿದ 2ನೇ ಕಿರಿಯ ಆಟಗಾರ (18 ವರ್ಷ, 339 ದಿನ). ವಿಶ್ವದಾಖಲೆ ಆಸ್ಟ್ರೇಲಿಯದ ಪ್ಯಾಟ್ ಕಮಿನ್ಸ್ ಹೆಸರಲ್ಲಿದೆ (18 ವರ್ಷ, 198 ದಿನ). ಅವರು ದಕ್ಷಿಣ ಆಫ್ರಿಕಾನ ವಿರುದ್ಧದ 2011ರ ಜೊಹಾನ್ಸ್‌ಬರ್ಗ್ ಟೆಸ್ಟ್‌ನಲ್ಲಿ ಈ ಸಾಧನೆ ಮಾಡಿದ್ದರು. ಪೃಥ್ವಿ ಶಾ ಟೆಸ್ಟ್ ಕ್ರಿಕೆಟ್‌ನಲ್ಲಿ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾದ ಭಾರತದ ಅತೀ ಕಿರಿಯ ಕ್ರಿಕೆಟಿಗ. ಭಾರತ-ವೆಸ್ಟ್ ಇಂಡೀಸ್ ಅ. 21ರಿಂದ ಏಕದಿನ ಸರಣಿ ಆರಂಭ