Advertisement
ಈ ಗೆಲುವಿನಿಂದ ಭಾರತ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಸರಣಿಯ ಎರಡನೇ ಪಂದ್ಯ ಕೊಲಂಬೋದಲ್ಲಿ ಆ. 3ರಿಂದ 7ರ ವರೆಗೆ ನಡೆಯಲಿದೆ.
Related Articles
Advertisement
ಗುಣರತ್ನೆ ಹೋರಾಟಗೆಲ್ಲಲು ಕಠಿನ ಗುರಿ ಪಡೆದ ಶ್ರೀಲಂಕಾ ತಂಡಕ್ಕೆ ಆರಂಭಿಕ ಆಟಗಾರ ದಿಮುತ್ ಗುಣರತ್ನೆ ಆಧಾರವಾಗಿದ್ದರು. ಅವರ ಹೋರಾಟದ 97 ರನ್ನಿನಿಂದಾಗಿ ಶ್ರೀಲಂಕಾ ಬೇಗನೇ ಕುಸಿಯುವುದು ತಪ್ಪಿತು. ಕುಸಲ್ ಮೆಂಡಿಸ್ ಮತ್ತು ನಿರೋಶಾನ್ ಡಿಕ್ವೆಲ್ಲ ಅವರ ಜತೆ ಎರಡು ಉತ್ತಮ ಜತೆಯಾಟದಲ್ಲಿ ಪಾಲ್ಗೊಂಡ ಗುಣರತ್ನೆ ಎರಡು ಅವಧಿಯ ಆಟದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಇದರಿಂದಾಗಿ ಶ್ರೀಲಂಕಾ ಟೀ ವಿರಾಮದ ವೇಳೆಗೆ 4 ವಿಕೆಟಗೆ 192 ರನ್ ತಲುಪಿತ್ತು. ಟೀ ಬಳಿಕ ಗುಣರತ್ನೆ ಅವರನ್ನು ಅಶ್ವಿನ್ ಉರುಳಿಸಿದ ಬಳಿಕ ಶ್ರೀಲಂಕಾ ಹಠಾತ್ ಕುಸಿಯಿತಲ್ಲದೇ 245 ರನ್ನಿಗೆ ಆಲೌಟಾಯಿತು. ಮೆಂಡಿಸ್ ಜತೆ 3ನೇ ವಿಕೆಟಿಗೆ 79 ಮತ್ತು ಡಿಕ್ವೆಲ್ಲ ಜತೆ 5ನೇ ವಿಕೆಟಿಗೆ 101 ರನ್ನುಗಳ ಜತೆಯಾಟ ನಡೆಸಿದ್ದ ಗುಣರತ್ನೆ ಒಟ್ಟಾರೆ 208 ಎಸೆತ ಎದುರಿಸಿ 9 ಬೌಂಡರಿ ನೆರವಿನಿಂದ 97 ರನ್ ಗಳಿಸಿ ಔಟಾದರು. ಕೇವಲ 3 ರನ್ನಿನಿಂದ ಶತಕ ದಾಖಲಿಸಲು ಅವರು ವಿಫಲರಾದರು. ಕುಸಲ್ ಮೆಂಡಿಸ್ 36 ಮತ್ತು ಡಿಕ್ವೆಲ್ಲ 67 ರನ್ ಹೊಡೆದರು.
ಬಿಗು ದಾಳಿ ಸಂಘಟಿಸಿದ ಆರ್. ಅಶ್ವಿನ್ 65 ರನ್ನಿಗೆ 3 ಮತ್ತು ರವೀಂದ್ರ ಜಡೇಜ 71 ರನ್ನಿಗೆ 3 ವಿಕೆಟ್ ಉರುಳಿಸಿದರು. ಕೊಹ್ಲಿ 17ನೇ ಶತಕ
ಈ ಮೊದಲು ನಾಯಕ ಕೊಹ್ಲಿ ಟೆಸ್ಟ್‌ನಲ್ಲಿ 17ನೇ ಶತಕ ಬಾರಿಸಿದ ಬಳಿಕ ಭಾರತ ತನ್ನ ದ್ವಿತೀಯ ಇನ್ನಿಂಗÕನ್ನು ಡಿಕ್ಲೇರ್ ಮಾಡಿಕೊಂಡಿತು. ಮೂರು ವಿಕೆಟಗೆ 183 ರನ್ನಿನಿಂದ ಮೂರನೇ ದಿನದಾಟ ಆರಂಭಿಸಿದ ಭಾರತ ಶೀಘ್ರ 51 ರನ್ ಪೇರಿಸಿ 3 ವಿಕೆಟಿಗೆ 240 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತಲ್ಲದೇ ಶ್ರೀಲಂಕಾ ಗೆಲುವಿಗೆ 550 ರನ್ನುಗಳ ಕಠಿನ ಗುರಿಯನ್ನು ನಿಗದಿಪಡಿಸಿತು. ದಿನದಾಟ ಆರಂಭಿಸಿದ ಕೊಹ್ಲಿ ಮತ್ತು ರಹಾನೆ ಶೀಘ್ರ ರನ್ ಪೇರಿಸಲು ತೊಡಗಿದರು. ಲಂಕೆಗೆ ಗೆಲುವಿನ ಗುರಿ ನೀಡುವ ಮೊದಲು ಕೊಹ್ಲಿ ಶತಕ ದಾಖಲಿಸಲು ಭಾರತ ಕಾಯುತ್ತಿತ್ತು. ಹಾಗಾಗಿ ಹೆಚ್ಚಿನ ಸಮಯ ವ್ಯರ್ಥ ಮಾಡದ ಕೊಹ್ಲಿ ದಿನದ ಆರನೇ ಓವರಿನಲ್ಲಿ ಶತಕ ಪೂರ್ತಿಗೊಳಿಸಿ ಸಂಭ್ರಮಿಸಿದರು. 136 ಎಸೆತ ಎದುರಿಸಿದ ಅವರು 5 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 103 ರನ್ ಗಳಿಸಿ ಅಜೇಯರಾಗಿ ಉಳಿದರು. ಕೊಹ್ಲಿ ತನ್ನ 58ನೇ ಟೆಸ್ಟ್‌ನಲ್ಲಿ 17 ಶತಕ ಸಿಡಿಸಿದ ಸಾಧನೆಗೈದರಲ್ಲದೇ ಮಾಜಿ ನಾಯಕ ದಿಲೀಪ್ ವೆಂಗ್‌ಸರ್ಕಾರ್ (115 ಟೆಸ್ಟ್) ಮತ್ತು ವಿವಿಎಸ್ ಲಕ್ಷ್ಮಣ್ (134 ಟೆಸ್ಟ್) ಅವರ ಸಾಧನೆ ಸಮಬಲಗೊಳಿಸಿದರು. ವೆಂಗ್‌ಸರ್ಕಾರ್ ಮತ್ತು ಲಕ್ಷ್ಮಣ್ ಕೂಡ 17 ಶತಕ ಸಿಡಿಸಿದ್ದಾರೆ. ಆದರೆ ಅವರಿಬ್ಬರು ನೂರಕ್ಕಿಂತ ಹೆಚಿjನ ಟೆಸ್ಟ್ ಆಡಿ ಈ ಸಾಧನೆ ಮಾಡಿದ್ದರು.
ಕೊಹ್ಲಿ ಮತ್ತು ರಹಾನೆ ನಾಲ್ಕನೇ ವಿಕೆಟಿಗೆ 51 ರನ್ ಪೇರಿಸುವ ಮೂಲಕ ಭಾರತ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ 2 ಸಾವಿರ ಪ್ಲಸ್ ಪೇರಿಸಿದ 14ನೇ ಜೋಡಿ ಎನಿಸಿಕೊಂಡಿದ್ದಾರೆ. ಕೊಹ್ಲಿ ವಿದೇಶದಲ್ಲಿ ಒಂದು ಸಾವಿರ ಟೆಸ್ಟ್ ರನ್ ಗಳಿಸಿದ ಅತೀ ವೇಗದ ನಾಯಕರಾಗಿದ್ದಾರೆ. ಅವರು 17 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರೆ ಸಚಿನ್ ತೆಂಡುಲ್ಕರ್ ಈ ಹಿಂದೆ 19 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಆಡಿದ್ದರು. ಸ್ಕೋರುಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್: 600
ಶ್ರೀಲಂಕಾ ಪ್ರಥಮ ಇನ್ನಿಂಗ್ಸ್ 291
ಭಾರತ ದ್ವಿತೀಯ ಇನ್ನಿಂಗ್ಸ್
(ಮೂರನೇ ದಿನ 3 ವಿಕೆಟಿಗೆ 189)
ವಿರಾಟ್ ಕೊಹ್ಲಿ ಔಟಾಗದೆ 103
ಅಜಿಂಕ್ಯ ರಹಾನೆ ಔಟಾಗದೆ 23
ಇತರ: 4
ಒಟ್ಟು (ಮೂರು ವಿಕೆಟಿಗೆ ಡಿಕ್ಲೇರ್) 240
ವಿಕೆಟ್ ಪತನ: 1-19, 2-56, 3-189
ಬೌಲಿಂಗ್:
ನುವಾನ್ ಪ್ರದೀಪ್ 12-2-63-0
ದಿಲುÅವಾನ್ ಪೆರೆರ 15-0-67-1
ಲಹಿರು ಕುಮಾರ 12-1-59-1
ರಂಗನ ಹೆರಾತ್ 9-0-34-0
ದನುಷ್ಕ ಗುಣತಿಲಕ 5-0-16-1 ಶ್ರೀಲಂಕಾ ದ್ವಿತೀಯ ಇನ್ನಿಂಗ್ಸ್
ದಿಮುತ್ ಕರುಣರತ್ನೆ ಬಿ ಅಶ್ವಿನ್ 97
ಉಪುಲ್ ತರಂಗ ಬಿ ಮೊಹಮ್ಮದ್ ಶಮಿ 10
ದನುಷ್ಕ ಗುಣತಿಲಕ ಸಿ ಪೂಜಾರ ಬಿ ಯಾದವ್ 2
ಕುಶಲ್ ಮೆಂಡಿಸ್ ಸಿ ಸಾಹ ಬಿ ಜಡೇಜ 36
ಏ. ಮ್ಯಾಥ್ಯೂಸ್ ಸಿ ಪಾಂಡ್ಯ ಬಿ ಜಡೇಜ 2
ನಿರೋಶಾನ್ ಡಿಕ್ವೆಲ್ಲ ಸಿ ಸಾಹ ಬಿ ಅಶ್ವಿನ್ 67
ದಿಲುÅವಾನ್ ಪೆರೆರ ಔಟಾಗದೆ 21
ನುವಾನ್ ಪ್ರದೀಪ್ ಸಿ ಕೊಹ್ಲಿ ಬಿ ಅಶ್ವಿನ್ 0
ಲಹಿರು ಕುಮಾರ ಸಿ ಶಮಿ ಬಿ ಜಡೇಜ 0
ಇತರ; 10
ಒಟ್ಟು (ಆಲೌಟ್) 245
ವಿಕೆಟ್ ಪತನ: 1-22, 2-29, 3-108, 4-116, 5-217, 6-240, 7-240, 8-245
ಬೌಲಿಂಗ್:
ಮೊಹಮ್ಮದ್ ಶಮಿ 9-0-43-1
ಉಮೇಶ್ ಯಾದವ್ 9-0-42-1
ರವೀಂದ್ರ ಜಡೇಜ 24.5-4-71-3
ಆರ್. ಅಶ್ವಿನ್ 27-4-66-3
ಹಾರ್ದಿಕ್ ಪಾಂಡ್ಯ 7-0-21-0 ಪಂದ್ಯಶ್ರೇಷ್ಠ: ಶಿಖರ್ ಧವನ್