ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕಿಳಿದ ಭಾರತ 15ನೇ ನಿಮಿಷದಲ್ಲೇ ಗೋಲಿನ ಖಾತೆ ತೆರೆಯಿತು. ಸ್ಟ್ರೈಕರ್ ಲಾಲಿÅಂದಿಕಿ ಭಾರತಕ್ಕೆ ಮುನ್ನಡೆ ಒದಗಿಸಿದರು. ಇದಕ್ಕೂ ಮೊದಲು 3ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಭಾರತ ಕೈಚೆಲ್ಲಿತ್ತು.
Advertisement
ದ್ವಿತೀಯ ಕ್ವಾರ್ಟರ್‌ನಲ್ಲಿ ನ್ಯೂಜಿ ಲ್ಯಾಂಡಿಗೆ ಸಮಬಲದ ಅವಕಾಶ ಲಭಿಸಿತಾದರೂ ಭಾರತದ ಗೋಲ್‌ಕೀಪರ್ ಬಿಚೂ ದೇವಿ ಇದಕ್ಕೆ ತಡೆ ಯೊಡ್ಡಿದರು.
4ನೇ ಕ್ವಾರ್ಟರ್‌ನ ಕೊನೆಯ ತನಕವೂ ಭಾರತ 1-0 ಮುನ್ನಡೆಯನ್ನು ಕಾಯ್ದುಕೊಂಡೇ ಬಂತು. ಪಂದ್ಯ ಮುಗಿಯಲು ಇನ್ನೇನು 30 ಸೆಕೆಂಡ್‌ಗಳು ಇರುವಾಗ ಲಭಿಸಿದ ಪೆನಾಲ್ಟಿ ಯೊಂದನ್ನು ಮಿಡ್ ಫೀಲ್ಡರ್ ಪ್ರಭಲೀನ್ ಕೌರ್ ಗೋಲಾಗಿಸುವಲ್ಲಿ ಯಶಸ್ವಿಯಾದರು.ಗುರುವಾರ ಭಾರತ ಆತಿಥೇಯ ಆಸ್ಟ್ರೇಲಿಯವನ್ನು ಎದುರಿಸಲಿದೆ.