Advertisement

ಸ್ಟಿಂಗ್‌ನಲ್ಲಿ ಸಿಕ್ಕಿಬಿದ್ದ ಪಿಚ್‌ ಕ್ಯುರೇಟರ್‌ ಸಸ್ಪೆಂಡ್‌!

01:25 PM Oct 25, 2017 | Team Udayavani |

ಪುಣೆ: ಬುಕ್ಕಿಗಳಿಗೆ ಪಿಚ್‌ ರಹಸ್ಯ ಬಿಚ್ಚಿಟ್ಟು ಇಂಡಿಯಾ ಟುಡೇ ನಡೆಸಿದ ಸ್ಟಿಂಗ್‌ ಆಪರೇಷನ್‌ನಲ್ಲಿ ಸಿಕ್ಕಿಬಿದ್ದ ಮಹಾರಷ್ಟ್ರ ಕ್ರಿಕೆಟ್‌ ಅಸೋಸಿಯೇಷನ್‌ನ ಪಿಚ್‌ ಕ್ಯುರೇಟರ್‌ ಪಾಂಡುರಂಗ ಸಲ್‌ಗಾಂವ್ಕರ್‌ ಅವರನ್ನು ಬಿಸಿಸಿಐ ಬುಧವಾರ ವಜಾ ಮಾಡಿದೆ. ಪ್ರವಾಸಿ ನ್ಯೂಜಿಲ್ಯಾಂಡ್‌ ವಿರುದ್ಧದ 2 ನೇ ಏಕದಿನ ಪಂದ್ಯದ ಮುನ್ನಾ ದಿನ ಈ ವಿದ್ಯಮಾನ ನಡೆದಿದೆ. 

Advertisement

ಸಲ್‌ಗಾಂವ್ಕರ್‌ ಬುಕ್ಕಿಗಳಿಗೆ ಪಿಚ್‌ನ ಸ್ವಭಾವ ಮತ್ತು ವಿಕೆಟ್‌ ಪಡೆಯುವ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಿರುವುದು ಸ್ಟಿಂಗ್‌ ಆಪರೇಷನ್‌ನಲ್ಲಿ ಬಯಲಾಗಿತ್ತು. ಸಲ್‌ಗಾಂವ್ಕರ್‌ ಅವರನ್ನು ಅಮಾನತು ಮಾಡಲಾಗಿದೆ ಎಂದು ಬಿಸಿಸಿಐ  ಕಾರ್ಯದರ್ಶಿ ಅಮಿತಾಭ್‌ ಚೌಧರಿ ಅವರು ತಿಳಿಸಿದ್ದಾರೆ. 

3 ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ಗೆ ಭಾರತ ಶರಣಾಗಿತ್ತು. ಇದೇ ವಿಚಾರ ಮುಂದಿಟ್ಟು ಕೆಲ ಮಾಧ್ಯಮಗಳು ಪಂದ್ಯ ಫಿಕ್ಸ್‌ ಆಗಿತ್ತು ಎಂದೂ ವರದಿ ಮಾಡಿದ್ದವು. 

Advertisement

Udayavani is now on Telegram. Click here to join our channel and stay updated with the latest news.

Next