Advertisement
ರವಿವಾರ ಹ್ಯಾಮಿಲ್ಟನ್‌ನಲ್ಲಿ ದ್ವಿತೀಯ ಮುಖಾಮುಖಿ ಏರ್ಪಡಲಿದ್ದು, ಶಿಖರ್ ಧವನ್ ಪಡೆಗೆ ಇದು ಮಾಡು-ಮಡಿ ಪಂದ್ಯವಾಗಿದೆ.
Related Articles
Advertisement
ನಾಯಕ ಶಿಖರ್ ಧವನ್ ಬ್ಯಾಟಿಂಗ್ ತುಸು ನಿಧಾನ ಗತಿಯಿಂದ ಕೂಡಿತ್ತು. ಅವರು 77 ಎಸೆತಗಳಿಂದ 72 ರನ್ ಮಾಡಿದರೇನೋ ನಿಜ. ಇದರಲ್ಲಿ 13 ಬೌಂಡರಿಗಳಿದ್ದದ್ದೂ ನಿಜ. ಈ 13 ಬೌಂಡರಿಗಳಿಂದ (ಎಸೆತಗಳಿಂದ) 52 ರನ್ ಒಟ್ಟುಗೂಡಿತು. ಉಳಿದ 20 ರನ್ ಗಳಿಸಲು ಅವರು ತೆಗೆದುಕೊಂಡದ್ದು ಬರೋಬ್ಬರಿ 64 ಎಸೆತ. ಅರ್ಥಾತ್, ಇದರಲ್ಲಿ 44 ಡಾಟ್ ಬಾಲ್ ಆದಂತಾಯಿತು. ಶುಭಮನ್ ಗಿಲ್ ಮತ್ತೊಂದು ಅರ್ಧ ಶತಕ ಹೊಡೆದರೂ ಅವರ ಆಟವೂ ಬಿರುಸಿನಿಂದ ಕೂಡಿರಲಿಲ್ಲ. ಆದರೆ ಭದ್ರ ಬುನಾದಿ ನಿರ್ಮಿಸಲು ಇಂಥದೊಂದು ಬ್ಯಾಟಿಂಗ್ ಅನಿವಾರ್ಯ ವಾಗಿತ್ತು ಎಂಬುದನ್ನು ಒಪ್ಪದಿರಲು ಸಾಧ್ಯವಿಲ್ಲ. ಹಾಗೆಯೇ ಆರಂಭಿಕರು ಇನ್ನಷ್ಟು ಬಿರುಸಿನಿಂದ ಸಾಗಿದರೆ ಕನಿಷ್ಠ 20 ರನ್ನಾದರೂ ಹೆಚ್ಚು ಬರುತ್ತಿತ್ತು ಎಂಬುದೂ ಸುಳ್ಳಲ್ಲ. ನ್ಯೂಜಿಲ್ಯಾಂಡ್ ಕೇವಲ 47.1 ಓವರ್‌ಗಳಲ್ಲೇ ಈ ಮೊತ್ತವನ್ನು ಹಿಂದಿಕ್ಕಿದ್ದೇ ಇದಕ್ಕೆ ಸಾಕ್ಷಿ.
ನಡೆಯಬೇಕು ಬೌಲಿಂಗ್ ಮ್ಯಾಜಿಕ್ತಂಡದ ಮೊತ್ತ ಮುನ್ನೂರರ ಗಡಿ ದಾಟಿದ್ದರಿಂದ ಭಾರತದ ಬ್ಯಾಟಿಂಗ್ ಮೇಲೆ ಗೂಬೆ ಕೂರಿಸುವುದು ತಪ್ಪಾಗುತ್ತದೆ. ಇಲ್ಲಿ ನಿಜವಾಗಿಯೂ ಮ್ಯಾಜಿಕ್ ಮಾಡಬೇಕಾದದ್ದು ಬೌಲರ್. ಕೇವಲ ಬೌಲಿಂಗ್ ಟ್ರ್ಯಾಕ್ ಮೇಲಷ್ಟೇ ಅಲ್ಲ, ಬ್ಯಾಟಿಂಗ್ ಟ್ರ್ಯಾಕ್ ಮೇಲೂ ಚಮತ್ಕಾರ ಮಾಡಬೇಕಾದ ಜಾಣ್ಮೆ ತೋರಬೇಕಾದುದು ಅಗತ್ಯ. ಹೆಚ್ಚು ಬೇಡ, ಮೊನ್ನೆ ಕೇನ್ ವಿಲಿ ಯಮ್ಸನ್-ಟಾಮ್ ಲ್ಯಾಥಂ ಜೋಡಿ ಯನ್ನು ಬೇರ್ಪಡಿಸಿದರೆ ಸಾಕಿತ್ತು, ಪಂದ್ಯದ ಗತಿ ಬದಲಾಗುವ ಎಲ್ಲ ಸಾಧ್ಯತೆ ಇತ್ತು. ಸದ್ಯದ ಮಟ್ಟಿಗೆ ಟೀಮ್ ಇಂಡಿಯಾ ಇಂಥದೊಂದು ಪ್ರಬಲ ಬೌಲಿಂಗ್ ಪಡೆಯನ್ನು ಹೊಂದಿಲ್ಲ ಎಂದೇ ಹೇಳಬೇಕು. ಎಲ್ಲರೂ ಭಾರೀ ದುಬಾರಿಯಾದರೇ ಹೊರತು ಯಾವುದೇ ಪರಿಣಾಮ ಬೀರು ವಲ್ಲಿ ಯಶಸ್ವಿಯಾಗಲಿಲ್ಲ. ಹೀಗಾಗಿ ದ್ವಿತೀಯ ಪಂದ್ಯದಲ್ಲಿ ಕುಲದೀಪ್ ಯಾದವ್, ದೀಪಕ್ ಚಹರ್ ಅವ ರನ್ನು ದಾಳಿಗಿಳಿಸಿ ನೋಡಬೇಕಿದೆ.