ಆಕ್ಲೆಂಡ್: ಭಾರತ – ನ್ಯೂಜಿಲ್ಯಾಂಡ್ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬೌಲಿಂಗ್ ಮಾಡಲು ನಿರ್ಧರಿಸಿದೆ. ಆ ಮೂಲಕ ಮೊದಲ ಪಂದ್ಯದ ಸೋಲಿಗೆ ತಿರುಗೇಟು ನೀಡಲು ಸಜ್ಜಾಗಿದೆ, ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಈಗಾಗಲೇ ನ್ಯೂಜಿಲ್ಯಾಂಡ್ 1-0 ಮುನ್ನಡೆಯಲ್ಲಿದ್ದು, ಸರಣಿ ಜಯಿಸಬೇಕಾದರೆ ಭಾರತ ಇಂದಿನ ಪಂದ್ಯವನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆಯಿದೆ.
ಭಾರತ ತಂಡದಲ್ಲಿ ಎರಡು ಪ್ರಮುಖ ಬದಲಾವಣೆ ಮಾಡಲಾಗಿದ್ದು ನವದೀಪ್ ಸೈನಿ ಮತ್ತು ಯಜುವೇಂದ್ರ ಚಹಾಲ್ ತಂಡ ಸೇರಿದ್ದು ಮಹಮ್ಮದ್ ಶಮಿ ಹಾಗೂ ಕುಲ್ ದೀಪ್ ಯಾದವ್ ಇಂದಿನ ಪಂದ್ಯದಲ್ಲಿ ಅವಕಾಶ ಪಡೆದಿಲ್ಲ.
ನ್ಯೂಜಿಲ್ಯಾಂಡ್ ತಂಡದಲ್ಲಿನ ಆಡುವ ಹನ್ನೊಂದರ ಬಳಗದಲ್ಲಿ ಕೂಡ ಕೆಲವು ಬದಲಾವಣೆ ಮಾಡಲಾಗಿದ್ದು, ಕೈಲ್ ಜೆಮೀಸನ್ ಪದಾರ್ಪಣಾ ಪಂದ್ಯವಾಡಲಿದ್ದಾರೆ. ಮಿಚೆಲ್ ಸ್ಯಾಂಟ್ನರ್ ಬದಲಿಗೆ ಮಾರ್ಕ್ ಚಾಪ್ ಮನ್ ಅವರನ್ನು ಆಡಿಸಲು ನಿರ್ಧರಿಸಲಾಗಿದ್ದು ಭಾರತಕ್ಕೆ ಸ್ಪಿನ್ನರ್ ಮೂಲಕ ಆಘಾತ ನೀಡಲು ಸಜ್ಜಾಗಿದೆ.
ಹನ್ನೊಂದರ ಬಳಗ:
ಭಾರತ: ಪೃಥ್ವಿ ಶಾ, ಮಯಾಂಕ್ ಅಗರ್ವಾಲ್, ವಿರಾಟ್ ಕೊಹ್ಲಿ(c), ಶ್ರೆಯಸ್ ಆಯ್ಯರ್ , ಲೋಕೇಶ್ ರಾಹುಲ್, ಕೇದಾರ್ ಜಾದವ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ನವದೀಪ್ ಸೈನಿ, ಯಜುವೇಂದ್ರ ಚಹಾಲ್, ಜಸ್ಪ್ರೀತ್ ಬುಮ್ರಾ
ನ್ಯೂಜಿಲ್ಯಾಂಡ್: ಮಾರ್ಟಿನ್ ಗಪ್ಟಿಲ್,ಹೆನ್ರಿ ನಿಕೋಲ್ಸ್ , ಟಾಪ್ ಬ್ಲುಂಡೆಲ್, ರಾಸ್ ಟೇಲರ್, ಟಾಮ್ ಲಾಥಮ್(c&w) ಮಾರ್ಕ್ ಚಾಪ್ ಮನ್ , ಜೇಮ್ಸ್ ನೀಶಮ್, ಕಾಲಿನ್ ಡಿ ಗ್ರ್ಯಾಂಡ್ ಹೋಮ್, ಕೈಲ್ ಜಾಮೀಸನ್, ಟಿಮ್ ಸೌಥಿ, ಹ್ಯಾಮಿಶ್ ಬೆನೆಟ್