Advertisement
50 ಓವರ್‌ಗಳ ಈ ಮುಖಾಮುಖೀಯಲ್ಲಿ ಪ್ರವಾಸಿಗರನ್ನು ಎದುರಿಸಲಿರುವ ತಂಡ ಶ್ರೇಯಸ್ ಅಯ್ಯರ್ ನಾಯಕತ್ವದ ಅಧ್ಯಕ್ಷರ ಮಂಡಳಿ ಇಲೆವೆನ್.
ಕೇನ್ ವಿಲಿಯಮ್ಸನ್ ನಾಯಕತ್ವದ ಕಿವೀಸ್ ಪಡೆ ಈಗಾಗಲೇ ಭಾರತಕ್ಕೆ ಆಗಮಿಸಿ ಕಠಿನ ಅಭ್ಯಾಸ ಆರಂಭಿಸಿದೆ. ಕಳೆದೊಂದು ತಿಂಗಳಿಂದ ಭಾರತದಲ್ಲಿದ್ದ ನ್ಯೂಜಿಲ್ಯಾಂಡ್ “ಎ’ ತಂಡ ರವಿವಾರವಷ್ಟೇ ಸರಣಿ ಮುಗಿಸಿದೆ. ಈ ತಂಡದ 6 ಆಟಗಾರರು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಇವರ್ಯಾರಿಗೂ ಈ ಪ್ರವಾಸದಲ್ಲಿ ಗೆಲುವಿನ ರುಚಿ ಕಾಣಲಾಗಲಿಲ್ಲ ಎಂಬುದೊಂದು ಹಿನ್ನಡೆ. ಅನಧಿಕೃತ ಟೆಸ್ಟ್ ಸರಣಿಯಲ್ಲಿ 2-0 ಸೋಲನುಭವಿಸಿದ ನ್ಯೂಜಿಲ್ಯಾಂಡ್ “ಎ’, ಬಳಿಕ 5 ಪಂದ್ಯಗಳ ಏಕದಿನಸ ರಣಿಯನ್ನು 3-0 ಅಂತರದಿಂದ ಕಳೆದುಕೊಂಡಿತ್ತು. ಹೀಗಾಗಿ ಇವರಿಗೆ ರಾಷ್ಟ್ರೀಯ ತಂಡದ ಪರ ಆಡುವ ಸವಾಲು ಸುಲಭದ್ದೇನಲ್ಲ.
ನ್ಯೂಜಿಲ್ಯಾಂಡ್ ತಂಡದ ಸೀನಿಯರ್ ಆಟಗಾರರು ಕೇವಲ 3-4 ಮಾತ್ರ. ನಾಯಕ ಕೇನ್ ವಿಲಿಯಮ್ಸನ್, ಆರಂಭಕಾರ ಮಾರ್ಟಿನ್ ಗಪ್ಟಿಲ್, ಬ್ಯಾಟ್ಸ್‌ಮನ್ ರಾಸ್ ಟಯ್ಲರ್, ವೇಗಿ ಟಿಮ್ ಸೌಥಿ ಮೊದಲಾದವರು. ಇವರೆಲ್ಲ ಭಾರತದ ಸ್ಪಿನ್ ಸವಾಲನ್ನು ಮಟ್ಟಿನಿಂತರಷ್ಟೇ ಯಶಸ್ಸು ಕಾಣಬಲ್ಲರು, ತಂಡದ ಕಿರಿಯರುಗೂ ಸ್ಫೂರ್ತಿಯಾಗಬಲ್ಲರು. ವಿಶ್ವ ಚಾಂಪಿಯನ್ ಆಸ್ಟ್ರೇಲಿಯವೇ ಮೊನ್ನೆ ಭಾರತ ನೆಲದಲ್ಲಿ ಪರದಾಡಿದ್ದನ್ನು ಕಂಡಾಗ ಕಿವೀಸ್ ಮುಂದಿರುವ ಸವಾಲು ಕಠಿನ ಎಂದೇ ಭಾವಿಸಬೇಕಾಗುತ್ತದೆ.
Related Articles
ಬೋರ್ಡ್ ಪ್ರಸಿಡೆಂಟ್ಸ್ ಇಲೆವೆನ್ ತಂಡದಲ್ಲಿ ಪ್ರತಿಭಾನ್ವಿತ ಆಟಗಾರರೇ ತುಂಬಿದ್ದಾರೆ. ಮುಂಬಯಿಯ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ನಾಯಕ. “ಎ’ ಸರಣಿಯಲ್ಲಿ ಅತ್ಯುತ್ತಮ ಫಾರ್ಮ್ ಪ್ರದರ್ಶಿಸಿದ್ದಾರೆ. ಮುಂಬಯಿಯವರೇ ಆದ ಪ್ರತಿಭಾನ್ವಿತ ಆರಂಭಕಾರ ಪೃಥ್ವಿ ಶಾ, ಕರ್ನಾಟಕದ ಕರುಣ್ ನಾಯರ್, ಕೀಪರ್ ರಿಷಬ್ ಪಂತ್ ಅವರೆಲ್ಲ ಆಯ್ಕೆಗಾರರನ್ನು ಸೆಳೆಯುವ ನಿಟ್ಟಿನಲ್ಲಿ ಪ್ರದರ್ಶನ ನೀಡಬೇಕಿದೆ. ಬೌಲರ್‌ಗಳಾದ ಧವಳ್ ಕುಲಕರ್ಣಿ, ಜೈದೇವ್ ಉನಾದ್ಕತ್ ಅವರೆಲ್ಲ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ.ಸ್ಪಿನ್ನರ್‌ಗಳಾದ ಶಾಬಾಜ್ ನದೀಂ, ರಾಹುಲ್ ಚಹರ್ ಕಿವೀಸ್ ಬ್ಯಾಟ್ಸ್‌ಮನ್‌ಗಳನ್ನು ಹೇಗೆ ಕುಣಿಸಬಹುದೆಂಬುದೊಂದು ಕುತೂಹಲ!
Advertisement
ತಂಡಗಳುಮಂಡಳಿ ಅಧ್ಯಕ್ಷರ ಇಲೆವೆನ್: ಶ್ರೇಯಸ್ ಅಯ್ಯರ್ (ನಾಯಕ), ಪೃಥ್ವಿ ಶಾ, ಶಿವಂ ಚೌಧರಿ, ಕರುಣ್ ನಾಯರ್, ಗುರುಕೀರತ್ ಸಿಂಗ್ ಮಾನ್, ಮಿಲಿಂದ್ ಕುಮಾರ್, ರಿಷಬ್ ಪಂತ್, ಶಾಬಾಜ್ ನದೀಂ, ದೀಪಕ್ ಚಹರ್, ಧವಳ್ ಕುಲಕರ್ಣಿ, ಜೈದೇವ್ ಉನಾದ್ಕತ್, ಆವೇಶ್ ಖಾನ್. ನ್ಯೂಜಿಲ್ಯಾಂಡ್: ಕೇನ್ ವಿಲಿಯಮ್ಸನ್ (ನಾಯಕ), ಟಾಡ್ ಆ್ಯಸ್ಲೆ, ಟ್ರೆಂಟ್ ಬೌಲ್ಟ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಮಾರ್ಟಿನ್ ಗಪ್ಟಿಲ್, ಮ್ಯಾಟ್ ಹೆನ್ರಿ, ಟಾಮ್ ಲ್ಯಾಥಂ, ಹೆನ್ರಿ ನಿಕೋಲ್ಸ್, ಆ್ಯಡಂ ಮಿಲೆ°, ಕಾಲಿನ್ ಮುನ್ರೊ, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ರಾಸ್ ಟಯ್ಲರ್, ಜಾರ್ಜ್ ವರ್ಕರ್.
ಆರಂಭ: 9.30