Advertisement

Semi-Final; ಭಾರತದ ಉತ್ತಮ ಆರಂಭ: 79 ರನ್ ಗಳಿಸಿದ್ದ ಗಿಲ್ ಗಾಯಾಳಾಗಿ ನಿವೃತ್ತಿ

04:12 PM Nov 15, 2023 | Team Udayavani |

ಮುಂಬಯಿ : ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಬುಧವಾರ ನಡೆಯುತ್ತಿರುವ ನ್ಯೂಜಿಲ್ಯಾಂಡ್ ವಿರುದ್ದದ  ವಿಶ್ವಕಪ್ ಸೆಮಿಫೈನಲ್ ಮೊದಲ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಉತ್ತಮ ಆರಂಭ ಪಡೆಯಿತು. ಆರಂಭದಲ್ಲಿ ಅಬ್ಬರಿಸಿದ ನಾಯಕ ರೋಹಿತ್ ಶರ್ಮ29 ಎಸೆತಗಳಲ್ಲಿ 47 ರನ್ ಗಳಿಸಿ ನಿರ್ಗಮಿಸಿದರು. ಅವರು ತಲಾ 4 ಭರ್ಜರಿ ಬೌಂಡರಿ ಮತ್ತು ಸಿಕ್ಸರ್ ಬಾರಿಸಿದ್ದರು.

Advertisement

ಇನ್ನೊಂದು ಅತ್ಯಮೋಘ ಇನ್ನಿಂಗ್ಸ್ ಆಡಿದ ಶುಭ್ ಮನ್ ಗಿಲ್ 79 ರನ್ ಗಳಿಸಿದ್ದ ವೇಳೆ ಗಾಯಾಳಾಗಿ ನಿವೃತ್ತಿಯಾಗಿದ್ದು ಅಭಿಮಾನಿಗಳು ತೀವ್ರವಾಗಿ ನೊಂದುಕೊಳ್ಳಲು ಕಾರಣವಾಯಿತು. ಶುಭ್‌ಮನ್ ಗಿಲ್ ಕುಸಿದಿದ್ದು,ಅವರಿಗೆ ಆಟ ಮುಂದುವರಿಸಲು ಸಾಧ್ಯವಾಗಲಿಲ್ಲ. ಮುಂಬೈ ಶಾಖ ಅವರ ಬಳಲಿಕೆಗೆ ಕಾರಣ ಎನ್ನಲಾಗಿದೆ. ಗಾಳಿ ಬೀಸುತ್ತಿಲ್ಲ ಮತ್ತು ಮುಂಬೈನಲ್ಲಿ ಬಿರು ಬಿಸಿಲಿದ್ದು 34°C ಗರಿಷ್ಠ ತಾಪಮಾನ ದಾಖಲಾಗಿದೆ.

ಗಿಲ್ ಅತ್ಯಮೋಘ ಆಟವಾಡುತ್ತಿದ್ದರು. 65 ಎಸೆತಗಳಲ್ಲಿ 79 ರನ್ ಗಳಿಸಿದ್ದರು. 8 ಬೌಂಡರಿ ಮತ್ತು 3 ಭರ್ಜರಿ ಸಿಕ್ಸರ್ ಸಿಡಿಸಿದ್ದರು.

ತಾಳ್ಮೆಯ ಆಟವಾಡುತ್ತಿರುವ ವಿರಾಟ್ ಕೊಹ್ಲಿ59 ಎಸೆತಗಳಲ್ಲಿ 50 ರನ್ ಮತ್ತು ಶ್ರೇಯಸ್ ಅಯ್ಯರ್ 15 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. 27 ಓವರ್ ಗಳಲ್ಲಿ1 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next