Advertisement

ನೆದರ್ ಲ್ಯಾಂಡ್ ಎದುರಿನ ಪಂದ್ಯ : ಭಾರತ ತಂಡಕ್ಕೆ ಹವಾಮಾನವೇ ದೊಡ್ಡ ಚಿಂತೆ

07:48 AM Oct 27, 2022 | Team Udayavani |

ಸಿಡ್ನಿ : ಟಿ 20 ವಿಶ್ವಕಪ್ 2022 ರ ಎರಡನೇ ಗ್ರೂಪ್ 2 ಪಂದ್ಯದಲ್ಲಿ ನೆದರ್ ಲ್ಯಾಂಡ್ ಅನ್ನು ಎದುರಿಸಲು ಸಿದ್ಧವಾಗುತ್ತಿರುವ ಭಾರತ ತಂಡಕ್ಕೆ ಸಿಡ್ನಿಯಲ್ಲಿನ ಹವಾಮಾನವೇ ದೊಡ್ಡ ಚಿಂತೆಯಾಗಿದೆ.

Advertisement

ಗುಂಪು 1 ಪಂದ್ಯಗಳಲ್ಲಿ ಲೆಕ್ಕಾಚಾರ ತಲೆ ಕೆಳಗೆ ಮಾಡಿದ್ದು, ಐರ್ಲೆಂಡ್ ಡಿಎಲ್ ಎಸ್ ವಿಧಾನದ ಮೂಲಕ ಇಂಗ್ಲೆಂಡ್ ಅನ್ನು ಸೋಲಿಸಿತ್ತು. ಮತ್ತು ಬುಧವಾರ ಮೆಲ್ಬೋರ್ನ್‌ನಲ್ಲಿ ನ್ಯೂಜಿಲ್ಯಾಂಡ್ ಮತ್ತು ಮತ್ತು ಅಫ್ಘಾನಿಸ್ಥಾನ ನಡುವಿನ ಪಂದ್ಯ ಮಳೆಯಿಂದಾಗಿ ಒಂದು ಎಸೆತ ಕಾಣದೆ ರದ್ದಾಗಿತ್ತು.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಗುರುವಾರ ಎರಡು ಪಂದ್ಯಗಳಿಗೆ ಆತಿಥ್ಯ ವಹಿಸಲಿದ್ದು, ಬಾಂಗ್ಲಾದೇಶವು ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ, ರೋಹಿತ್ ಶರ್ಮಾ ಪಡೆ ಡಚ್ ತಂಡದ ವಿರುದ್ಧ ಎರಡನೇ ಪಂದ್ಯವನ್ನು ಆಡಲಿದೆ. ಸಿಡ್ನಿಯಲ್ಲಿ ಹವಾಮಾನವು ಸಂಜೆ ತಂಪಾಗಿರುತ್ತದೆ ಮತ್ತು ತಾಪಮಾನವು ಸುಮಾರು 17 ಡಿಗ್ರಿ ಸೆಲ್ಸಿಯಸ್ ಇರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next