Advertisement

ಬೃಹತ್‌ ಗೆಲುವಿನ ಹೊಸ್ತಿಲಲ್ಲಿ ಭಾರತ

06:00 AM Aug 22, 2018 | |

ನಾಟಿಂಗಂ: ಸತತ ಎರಡು ಟೆಸ್ಟ್‌ಗಳಲ್ಲಿ ಸೋತಿದ್ದ ಭಾರತ ಸದ್ಯ ಸಾಗುತ್ತಿರುವ ಮೂರನೇ ಟೆಸ್ಟ್‌ನಲ್ಲಿ ಪರಿಪೂರ್ಣ ನಿರ್ವಹಣೆ ನೀಡಿ ಬೃಹತ್‌ ಅಂತರದ ಗೆಲುವು ದಾಖೀಲಿಸುವ ಹೊಸ್ತಿಲಿಲ್ಲ ನಿಂತಿದೆ. ಗೆಲ್ಲಲು 521 ರನ್‌ ಗಳಿಸುವ ಕಠಿನ ಗುರಿ ಪಡೆದ ಇಂಗ್ಲೆಂಡ್‌ ತಂಡವು ನಾಲ್ಕನೇ ದಿನ ಟೀ ವಿರಾಮದ ಬಳಿಕ ಕುಸಿತ ಕಂಡಿದೆ. 8 ವಿಕೆಟ್‌ ಕಳೆದುಕೊಂಡಿರುವ ಇಂಗ್ಲೆಂಡ್‌254 ರನ್‌ ಗಳಿಸಿ ಆಡುತ್ತಿದೆ. ನಾಲ್ಕನೇ ದಿನವೇ ಸೋಲು ಕಾಣುವ ಸಾಧ್ಯತೆಯಿದೆ. 

Advertisement

ಬೆನ್‌ ಸ್ಟೋಕ್ಸ್‌ ಮತ್ತು ಜೋಸ್‌ ಬಟ್ಲರ್‌ ಅವರು ಐದನೇ ವಿಕೆಟಿಗೆ 169 ರನ್‌ ಪೇರಿಸಿದ ಬಳಿಕ ಬೇರ್ಪಟ್ಟರು. ಈ  ಜೋಡಿಯನ್ನು ಬುಮ್ರಾ ಮುರಿದ ಬಳಿಕ ಇಂಗ್ಲೆಂಡ್‌ ಮತ್ತೆ ಕುಸಿಯಿತು. ಬಟ್ಲರ್‌ 176 ಎಸೆತ ಎದುರಿಸಿದ್ದು 106 ರನ್‌ ಗಳಿಸಿದ್ದರು. 21 ಬೌಂಡರಿ ಬಾರಿಸಿದ್ದರು. ಅವರಿಗೆ ಉತ್ತಮ ಬೆಂಬಲ ನೀಡಿದ ಸ್ಟೋಕ್ಸ್‌ 187 ಎಸೆತ ಎದುರಿಸಿ 62 ರನ್‌ ಹೊಡೆದಿದ್ದರು. ಬೃಹತ್‌ ಜಯಕ್ಕಾಗಿ ಭಾರತಕ್ಕೆ ಇನ್ನೆರಡು ವಿಕೆಟ್‌ ಬೇಕಾಗಿದೆ. ಅದಿಲ್‌ ರಶೀದ್‌ ಮತ್ತು ಸ್ಟುವರ್ಟ್‌ ಬ್ರಾಡ್‌ ಆಡುತ್ತಿದ್ದಾರೆ.  ಬುಮ್ರಾ 72 ರನ್ನಿಗೆ 4 ಬಿಗು ದಾಳಿ ಸಂಘಟಿಸಿದ ಜಸ್‌ಪ್ರೀತ್‌ ಬುಮ್ರಾ 72 ರನ್ನಿಗೆ 4 ವಿಕೆಟ್‌ ಉರುಳಿಸಿದ್ದರೆ ಆರಂಭಿಕ ಆಘಾತವಿಕ್ಕಿದ ಇಶಾಂತ್‌ ಶರ್ಮ 2 ವಿಕೆಟ್‌ ಪಡೆದಿದ್ದಾರೆ. ಮೊದಲ ಇನ್ನಿಂಗ್ಸ್‌ನ ಹೀರೊ ಹಾರ್ದಿಕ್‌ ಪಾಂಡ್ಯ ಒಂದು ವಿಕೆಟ್‌ ಉರುಳಿಸಿದ್ದಾರೆ.

ಇಂಗ್ಲೆಂಡ್‌ ತಂಡ ಆರಂಭದಲ್ಲೇ ಸತತವಾಗಿ ವಿಕೆಟ್‌ ಕಳೆದುಕೊಂಡು ತತ್ತರಿಸಿತು. 27 ರನ್ನಿಗೆ ಕೆ.ಕೆ.ಜೆನ್ನಿಂಗ್ಸ್‌ ಇಶಾಂತ್‌ ಶರ್ಮ ಎಸೆತದಲ್ಲಿ ವಿಕೆಟ್‌ ಕೀಪರ್‌ಗೆ ಕ್ಯಾಚ್‌ ನೀಡಿದರು. ಇದರ ಬೆನ್ನಲ್ಲೇ ತಂಡದ ಮೊತ್ತ 32 ರನ್‌ಗಳಾಗಿದ್ದಾಗ ಮಾಜಿ ನಾಯಕ ಅಲಿಸ್ಟರ್‌ ಕುಕ್‌ ಕೂಡ ಇಶಾಂತ್‌ ಶರ್ಮ ಎಸೆತದಲ್ಲಿ ಔಟಾದರು. ಈ ಆಘಾತದಿಂದ ಇಂಗ್ಲೆಂಡ್‌ ಚೇತರಿಸಿಕೊಳ್ಳುವ ಸುಳಿವು ನೀಡಿದ್ದಾಗಲೇ ಸತತವಾಗಿ ಮತ್ತೆರಡು ಆಘಾತ ಎದುರಾಯಿತು.

ಜೋ ರೂಟ್‌ ಮತ್ತು ಒಲಿ ಪೋಪ್‌ ಅವರು ತಂಡದ ಮೊತ್ತ 62 ರನ್‌ ತಲುಪಿದಾಗ ಔಟಾಗಿ ಹೊರ ನಡೆದರು. ಆ ಬಳಿಕ ಬೆನ್‌ ಸ್ಟೋಕ್ಸ್‌ ಮತ್ತು ಜೋಸ್‌ ಬಟ್ಲರ್‌ ಒಂದಾದರು. ಅವರಿಬ್ಬರು ಅತ್ಯುತ್ತಮವಾಗಿ ಆಡಿ ಮುಂದೆ ಆಘಾತವಾಗದಂತೆ ನೋಡಿಕೊಂಡರು. 

ಸ್ಕೋರ್‌ಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್‌    329
ಇಂಗ್ಲೆಂಡ್‌ ಪ್ರಥಮ ಇನ್ನಿಂಗ್ಸ್‌    161
ಭಾರತ ದ್ವಿತೀಯ ಇನ್ನಿಂಗ್ಸ್‌
ಶಿಖರ್‌ ಧವನ್‌    ಸ್ಟಂಪ್ಡ್ ಬೇರ್‌ಸ್ಟೊ ಬಿ ರಶೀದ್‌    44
ಕೆಎಲ್‌ ರಾಹುಲ್‌    ಬಿ ಸ್ಟೋಕ್ಸ್‌    36
ಚೇತೇಶ್ವರ ಪೂಜಾರ    ಸಿ ಕುಕ್‌ ಬಿ ಸ್ಟೋಕ್ಸ್‌    72
ವಿರಾಟ್‌ ಕೊಹ್ಲಿ    ಎಲ್‌ಬಿಡಬ್ಲ್ಯು ಬಿ ವೋಕ್ಸ್‌    103
ಅಜಿಂಕ್ಯ ರಹಾನೆ    ಬಿ ರಶೀದ್‌    29
ರಿಷಬ್‌ ಪಂತ್‌    ಸಿ ಕುಕ್‌ ಬಿ ಆ್ಯಂಡರ್ಸನ್‌    1
ಹಾರ್ದಿಕ್‌ ಪಾಂಡ್ಯ    ಔಟಾಗದೆ    52
ಮೊಹಮ್ಮದ್‌ ಶಮಿ    ಸಿ ಕುಕ್‌ ಬಿ ರಶೀದ್‌    3
ಆರ್‌. ಅಶ್ವಿ‌ನ್‌    ಔಟಾಗದೆ    1

Advertisement

ಒಟ್ಟು (7 ವಿಕೆಟಿಗೆ ಡಿಕ್ಲೇರ್‌)        352
ವಿಕೆಟ್‌ ಪತನ: 1-60, 2-111, 3-224, 4-281, 5-282, 6-329, 7-349

ಬೌಲಿಂಗ್‌:
ಜೇಮ್ಸ್‌ ಆ್ಯಂಡರ್ಸನ್‌    22-7-55-1
ಸ್ಟುವರ್ಟ್‌ ಬ್ರಾಡ್‌        16-3-60-0
ಕ್ರಿಸ್‌ ವೋಕ್ಸ್‌        22-4-49-1
ಬೆನ್‌ ಸ್ಟೋಕ್ಸ್‌        20-3-68-2
ಅದಿಲ್‌ ರಶೀದ್‌        27-2-101-3
ಜೋ ರೂಟ್‌        3-0-9-0

ಇಂಗ್ಲೆಂಡ್‌ ದ್ವಿತೀಯ ಇನ್ನಿಂಗ್ಸ್‌ (ಗೆಲುವಿಗೆ 521 ರನ್‌)
ಅಲಸ್ಟೇರ್‌ ಕುಕ್‌    ಸಿ ರಾಹುಲ್‌ ಬಿ ಶರ್ಮ    17
ಕೆ. ಜೆನ್ನಿಂಗ್ಸ್‌    ಸಿ ಪಂತ್‌ ಬಿ ಶರ್ಮ    13
ಜೋ ರೂಟ್‌    ಸಿ ರಾಹುಲ್‌ ಬಿ ಬುಮ್ರಾ    13
ಜೆ. ಪೋಪ್‌    ಸಿ ಕೊಹ್ಲಿ ಬಿ ಶಮಿ    16
ಬೆನ್‌ ಸ್ಟೋಕ್ಸ್‌    ಸಿ ರಾಹುಲ್‌ ಬಿ ಪಾಂಡ್ಯ    62
ಜೋಸ್‌ ಬಟ್ಲರ್‌    ಎಲ್‌ಬಿಡಬ್ಲ್ಯು ಬಿ ಬುಮ್ರಾ    106
ಬೇರ್‌ಸ್ಟೊ     ಬಿ ಬುಮ್ರಾ     0
ಕ್ರಿಸ್‌ ವೋಕ್ಸ್‌    ಸಿ ಪಂತ್‌ ಬಿ ಬುಮ್ರಾ    4
ಅದಿಲ್‌ ರಶೀದ್‌    ಔಟಾಗದೆ    6
ಸ್ಟುವರ್ಟ್‌ ಬ್ರಾಡ್‌    ಔಟಾಗದೆ    2

ಒಟ್ಟು (8 ವಿಕೆಟಿಗೆ )        254
ವಿಕೆಟ್‌ ಪತನ: 1-27, 2-32, 3-62, 4-62, 5-231, 6-231, 7-241, 8-241

ಬೌಲಿಂಗ್‌: 
ಜಸ್‌ಪ್ರೀತ್‌ ಬುಮ್ರಾ    25-7-72-4
ಇಶಾಂತ್‌ ಶರ್ಮ        19-4-60-2
ಆರ್‌. ಅಶ್ವಿ‌ನ್‌        19-7-38-0
ಮೊಹಮ್ಮದ್‌ ಶಮಿ        13-3-55-1
ಹಾರ್ದಿಕ್‌ ಪಾಂಡ್ಯ        12-3-18-1

Advertisement

Udayavani is now on Telegram. Click here to join our channel and stay updated with the latest news.

Next