ರಾಜ್ ಕೋಟ್ : ಭಾರತ ವಿರುದ್ಧ ಇಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನವಾದ ಶನಿವಾರ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ 71.1 ಓವರ್‌ಗಳಲ್ಲಿ 319 ರನ್‌ಗಳಿಗೆ ಆಲೌಟ್ ಆಯಿತು.
ಮೊಹಮ್ಮದ್ ಸಿರಾಜ್ ನಾಲ್ಕು ವಿಕೆಟ್ ಕಬಳಿಸಿದರೆ, ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ತಲಾ ಎರಡು ವಿಕೆಟ್ ಕಬಳಿಸಿದರು.ಬೌಲರ್‌ಗಳ ಅತ್ಯುತ್ತಮ ಪ್ರಯತ್ನದಿಂದಾಗಿ ಭಾರತ 126 ರನ್‌ಗಳ ಮೊದಲ ಇನ್ನಿಂಗ್ಸ್ ಮೇಲುಗೈ ಸಾಧಿಸಿ
322 ರನ್‌ಗಳ ಮುನ್ನಡೆ ಸಾಧಿಸಿದೆ
133 ರನ್ ಗಳಿಸಿದ ಆರಂಭಿಕ ಆಟಗಾರ ಬೆನ್ ಡಕೆಟ್ ಆಟ ಮುಂದುವರಿಸಿ 151 ಎಸೆತಗಳಲ್ಲಿ 153 ರನ್ ಗಳಿಸಿ ಸ್ಪಿನ್ನರ್ ಕುಲದೀಪ್ ಯಾದವ್ ಅವರಿಗೆ ವಿಕೆಟ್ ಒಪ್ಪಿಸಿದರು.
ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ 2 ವಿಕೆಟ್ ನಷ್ಟಕ್ಕೆ 196 ( 51 ಓವರ್) ರನ್ ಗಳಿಸಿದೆ. ಅಮೋಘ ಆಟವಾಡಿದ ಯಶಸ್ವಿ ಜೈಸ್ವಾಲ್ ಭರ್ಜರಿ ಶತಕ ಸಿಡಿಸಿದರು. 133 ಎಸೆತಗಳಿಂದ 104 ಗಳಿಸಿದ್ದ ಅವರು ಗಾಯಗೊಂಡು ನಿವೃತ್ತರಾದರು. ರೋಹಿತ್ ಶರ್ಮ 19 ರನ್ ಗಳಿಸಿ ಔಟಾದರು.
ಶುಭಮನ್ ಗಿಲ್ 65 ರನ್ ಗಳಿಸಿ ಬ್ಯಾಟಿಂಗ್ ಮುಂದುವರಿಸಲಿದ್ದಾರೆ. ರಜತ್ ಪಾಟಿದಾರ್ ಶೂನ್ಯಕ್ಕೆ ಔಟಾದರು. ಕುಲದೀಪ್ 3 ರನ್ ಗಳಿಸಿದ್ದು ನಾಳೆ ಮುಂದುವರಿಸಲಿದ್ದಾರೆ. ರೂಟ್ ಮತ್ತು ಹಾರ್ಟ್ಲಿ ತಲಾ ಒಂದು ವಿಕೆಟ್ ಪಡೆದರು.