Advertisement

India vs England 3rd Test ; ಬೆನ್ ಡಕೆಟ್ ಭರ್ಜರಿ ಶತಕ

05:41 PM Feb 16, 2024 | Team Udayavani |

ರಾಜ್ ಕೋಟ್ : ಇಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯ ಮೂರನೇ ಪಂದ್ಯದ 2ನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್ ನಲ್ಲಿ 2 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿದೆ. ಆರಂಭಿಕ ಆಟಗಾರ ಬೆನ್ ಡಕೆಟ್ ಅಮೋಘ ಆಟವಾಡಿ ಶತಕ ಸಿಡಿಸಿದರು. 133 ರನ್ ಗಳಿಸಿರುವ ಅವರು ಆಟ ಮುಂದುವರಿಸಲಿದ್ದಾರೆ.

Advertisement

ಝಾಕ್ ಕ್ರಾಲಿ 15, ಒಲಿ 39 ರನ್ ಗಳಿಸಿ ಔಟಾದರು.  9 ರನ್ ಗಳಿಸಿರುವ ರೂಟ್ ಆಟ ಮುಂದುವರಿಸಲಿದ್ದಾರೆ. ಸಿರಾಜ್ ಮತ್ತು ಅಶ್ವಿನ್ ತಲಾ ಒಂದು ವಿಕೆಟ್ ಪಡೆದರು.

ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 445 ರನ್ ಗಳಿಗೆ ಆಲೌಟಾಗಿತ್ತು. ಜಡೇಜ 112 ಕ್ಕೆ ಔಟಾದರೆ, ಕುಲದೀಪ್ ಯಾದವ್ 4 ರನ್ ಗೆ ಮರಳಿದರು. ಆಬಳಿಕ ಧ್ರುವ್ ಜುರೆಲ್ 46, ಅಶ್ವಿನ್ 37, ಬುಮ್ರಾ 26 ರನ್ ಗಳಿಸಿ ಔಟಾದರು. ಸಿರಾಜ್ 3 ರನ್ ಗಳಿಸಿ ಔಟಾಗದೆ ಉಳಿದರು.

ಮಾರ್ಕ್ ವುಡ್ 4 ವಿಕೆಟ್ ಪಡೆದರು. ರೆಹಾನ್ ಅಹ್ಮದ್ 2 ವಿಕೆಟ್, ಜೇಮ್ಸ್ ಆಂಡರ್ಸನ್, ಟಾಮ್ ಹಾರ್ಟ್ಲಿ , ರೂಟ್ ತಲಾ ಒಂದು ವಿಕೆಟ್ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next