Advertisement
ಐತಿಹಾಸಿಕ ಲಾರ್ಡ್ಸ್ ಅಂಗಳದಲ್ಲಿ ಗುರುವಾರ ದ್ವಿತೀಯ ಏಕದಿನ ಪಂದ್ಯ ಏರ್ಪಡಲಿದೆ. ಇದನ್ನೂ ಅಧಿಕಾರಯುತವಾಗಿ ಗೆದ್ದು ಲಾರ್ಡ್ಸ್ನಲ್ಲಿ ಲಾರ್ಡ್ ಎನಿಸಿಕೊಳ್ಳುವುದೇ ಭಾರತದ ಗುರಿ. ಆಗ ಸರಣಿಯೂ ರೋಹಿತ್ ಪಡೆಯ ಬುಟ್ಟಿಗೆ ಬೀಳಲಿದೆ.
ಓವಲ್ ಪಂದ್ಯದ ಸ್ಕೋರ್ಬೋರ್ಡ್ನಲ್ಲಿ ಆಂಗ್ಲರ 4 ಸೊನ್ನೆ, ಎರಡಂಕೆಯ ಕೇವಲ 4 ಮೊತ್ತವೇ ಎದ್ದು ಕಾಣುತ್ತದೆ. ಈ ಸೊನ್ನೆ ಸುತ್ತಿ ದವ ರ್ಯಾರೂ ಮಾಮೂಲು ಬ್ಯಾಟರ್ಗಳಲ್ಲ… ರಾಯ್, ರೂಟ್, ಸ್ಟೋಕ್ಸ್ ಮತ್ತು ಲಿವಿಂಗ್ಸ್ಟೋನ್. ಕ್ರೀಸ್ ಆಕ್ರಮಿಸಿಕೊಂಡರೆ ಪಂದ್ಯದ ಗತಿ ಯನ್ನೇ ಬದಲಿಸಲು ಇವರೊಬ್ಬಬ್ಬರೇ ಸಾಕು. ಬರ್ಮಿಂಗ್ಹ್ಯಾಮ್ ಟೆಸ್ಟ್ನಲ್ಲಿ 378 ರನ್ ಚೇಸ್ ಮಾಡಿ ಹೋದ ಸಾಹಸಿಗರಿವರು. ಆದರೆ ಏಕದಿನದಲ್ಲಿ ಯಾವ ಗುಂಗಿನಲ್ಲಿದ್ದರೋ ತಿಳಿಯದು!
Related Articles
Advertisement
ಮೊದಲೆರಡು ಪಂದ್ಯಗಳನ್ನು ಗೆದ್ದು ಟಿ20 ಸರಣಿ ವಶಪಡಿಸಿಕೊಂಡ ಭಾರತವೀಗ ಅದೇ ಹಾದಿ ಯಲ್ಲಿದೆ. ಓವಲ್ ಜಯಭೇರಿ ಮೂಡಿ ಸಿದ ಸ್ಫೂರ್ತಿ, ಉತ್ಸಾಹ ಇನ್ನೂ ಕೆಲವು ಕಾಲ ಕ್ಕಾಗುವಷ್ಟಿದೆ. 3ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವಿಗೆ ಮುಖ್ಯ ಕಾರಣ, ಭಾರತ ಮಾಡಿದ ಪ್ರಯೋಗ. ಅಲ್ಲಿ ನಮ್ಮವರ ಬೌಲಿಂಗ್ ತೀರಾ ದುರ್ಬಲವಾಗಿತ್ತು. ಇಂಗ್ಲೆಂಡ್ ಇದರ ಲಾಭ ವೆತ್ತಿತು, ಅಷ್ಟೇ. ಸದ್ಯ ಏಕದಿನದಲ್ಲಿ ಪ್ರಯೋಗ ನಡೆಯದು.
ವಿರಾಟ್ ಕೊಹ್ಲಿ ಅನುಮಾನಭಾರತ ತನ್ನ ಆಡುವ ಬಳಗದಲ್ಲಿ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಕಡಿಮೆ. ಅಂದಹಾಗೆ ಓವಲ್ನಲ್ಲಿ ರೋಹಿತ್-ಧವನ್ ಹೊರತುಪಡಿಸಿ ನಮ್ಮ ಬ್ಯಾಟಿಂಗ್ ಸರದಿಯಲ್ಲಿ ಯಾರಿದ್ದರು ಎಂಬುದನ್ನು ಅರಿತವರು ಕಡಿಮೆ. “ಗಾಯಾಳು’ ಕೊಹ್ಲಿ ಹೊರಗುಳಿದಿದ್ದರು. ಲಾರ್ಡ್ಸ್ನಲ್ಲೂ ಆಡುವ ಸಾಧ್ಯತೆ ಇಲ್ಲ. ಉಳಿದಂತೆ ಅಯ್ಯರ್, ಸೂರ್ಯಕುಮಾರ್, ಪಂತ್ ಮತ್ತು ಪಾಂಡ್ಯ ಬ್ಯಾಟಿಂಗ್ ಲೈನ್ಅಪ್ನಲ್ಲಿ ಕಾಯುತ್ತಿದ್ದರು. ಬೌಲಿಂಗ್ ತಾಕತ್ತು ಈಗಾಗಲೇ ಜಗಜ್ಜಾಹೀರಾಗಿದೆ. ಇಲ್ಲಿ ಪರಿವರ್ತನೆ ಖಂಡಿತ ಇಲ್ಲ ಎನ್ನಬಹುದು. ಆದರೆ ಭಾರತ ಒಂದು ಎಚ್ಚರಿಕೆ ಯಲ್ಲಿರ ಬೇಕು. ಅಕಸ್ಮಾತ್ ಓವಲ್ನಲ್ಲಿ ಭಾರತಕ್ಕೆ ಮೊದಲು ಬ್ಯಾಟಿಂಗ್ ಲಭಿಸಿದರೆ ಏನಾಗುತ್ತಿತ್ತು?ಇಂಗ್ಲೆಂಡ್ಗೆ ಆದ ಗತಿಯೇ ನಮಗೂ ಎದು ರಾಗುತ್ತಿತ್ತೇ? ಯೋಚಿಸಬೇಕಾದುದು ಅಗತ್ಯ. ಏಕೆಂದರೆ ಲಾರ್ಡ್ಸ್ನಲ್ಲಿ ಯಾರೇ ಟಾಸ್ ಗೆದ್ದರೂ ಮೊದಲು ಬೌಲಿಂಗ್ ಆಯ್ದುಕೊಳ್ಳುವ ಸಾಧ್ಯತೆಯೇ ಹೆಚ್ಚು. ಭಾರತಕ್ಕೆ ಮೊದಲ ಬ್ಯಾಟಿಂಗ್ ಅವಕಾಶ ಲಭಿಸಿದರೆ? ಓವಲ್ನಲ್ಲಿ ಕಂಡುಬಂದ ಇಂಗ್ಲೆಂಡಿನ ಮಹಾಪತನ ಎನ್ನು ವುದು ರೋಹಿತ್ ಬಳಗಕ್ಕೆ ಪಾಠವೂ ಆಗಬೇಕಿದೆ. ನಾಟ್ವೆಸ್ಟ್ ಜಯಭೇರಿಯೂ ಸ್ಫೂರ್ತಿ!
ಲಾರ್ಡ್ಸ್ನಲ್ಲಿ ದ್ವಿತೀಯ ಏಕದಿನ ಆಡಲಿಳಿಯುವಾಗ ಪ್ರವಾಸಿ ಭಾರತಕ್ಕೆ ಓವಲ್ ಸಾಹಸದೊಂದಿಗೆ ಇನ್ನೂ ಒಂದು ಗೆಲುವು ಸ್ಫೂರ್ತಿ ತುಂಬಲಿದೆ. ಅದೆಂದರೆ ಐತಿಹಾಸಿಕ “ನಾಟ್ವೆಸ್ಟ್’ ವಿಜಯೋತ್ಸವ! ಸೌರವ್ ಗಂಗೂಲಿ ಸಾರಥ್ಯದ ಭಾರತ ತಂಡ ಯುವರಾಜ್ ಸಿಂಗ್ ಮತ್ತು ಮೊಹಮ್ಮದ್ ಕೈಫ್ ಅವರ ಬ್ಯಾಟಿಂಗ್ ಪರಾಕ್ರಮದಿಂದ “ನಾಟ್ವೆಸ್ಟ್’ ಟ್ರೋಫಿ ಗೆದ್ದು ಬುಧವಾರಕ್ಕೆ ಭರ್ತಿ 20 ವರ್ಷ ತುಂಬಿತು. 2002ರ ಜುಲೈ 13ರಂದು ಭಾರತ 326 ರನ್ನುಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿ 2 ವಿಕೆಟ್ಗಳ ಅಸಾಮಾನ್ಯ ಗೆಲುವು ಸಾಧಿಸಿ ಇಂಗ್ಲೆಂಡಿಗೆ ಮರ್ಮಾಘಾತವಿಕ್ಕಿತ್ತು. 146ಕ್ಕೆ 5 ವಿಕೆಟ್ ಉರುಳಿಸಿಕೊಂಡು ಸೋಲು ಖಚಿತ ಎಂಬ ಸ್ಥಿತಿಯಲ್ಲಿದ್ದ ಭಾರತದ ಪಾಲಿಗೆ ಯುವರಾಜ್ (69)-ಕೈಫ್ (ಅಜೇಯ 87) ಆಪದ್ಬಾಂಧವರಾಗಿ ಮೂಡಿಬಂದಿದ್ದರು. ಗೆಲುವಿನ ಬಳಿಕ ಗಂಗೂಲಿ ಲಾರ್ಡ್ಸ್ ಬಾಲ್ಕನಿಯಲ್ಲಿ ಶರ್ಟ್ ಕಳಚಿ ಸಂಭ್ರಮಿಸಿದ್ದನ್ನು ಮರೆಯಲಾದೀತೇ! ಈ ಲಾರ್ಡ್ಸ್ ಅಂಗಳದಲ್ಲೇ ಭಾರತ ದ್ವಿತೀಯ ಏಕದಿನ ಪಂದ್ಯ ಆಡಲಿದೆ. ಎರಡು ದಶಕಗಳ ಬಳಿಕ ಟೀಮ್ ಇಂಡಿಯಾಕ್ಕೆ ಏನು ಕಾದಿದೆಯೋ ನೋಡೋಣ. ಸಿಕ್ಸರ್ ಏಟು ತಿಂದ ಬಾಲಕಿಗೆ
ಟೆಡ್ಡಿಬೇರ್ ಕೊಟ್ಟ ರೋಹಿತ್
ಓವಲ್ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮ ಸಿಕ್ಸರ್ ಬಾರಿಸಿದಾಗ ಸ್ಟೇಡಿಯಂನಲ್ಲಿದ್ದ ಮೀರಾ ಎಂಬ 6 ವರ್ಷದ ಪುಟ್ಟ ಬಾಲಕಿಗೆ ಚೆಂಡು ಬಡಿದ ಘಟನೆ ಸಂಭವಿಸಿತು. ಕೂಡಲೇ ಇಂಗ್ಲೆಂಡ್ ತಂಡದ ವೈದ್ಯರು ಸ್ಟೇಡಿಯಂಗೆ ಧಾವಿಸಿ ಆ ಬಾಲಕಿಯ ಆರೋಗ್ಯ ಗಮನಿಸಿದರು. ಇದೇನೂ ಗಂಭೀರ ಏಟಲ್ಲ ಎಂಬುದು ಖಾತ್ರಿಯಾಯಿತು. ಪಂದ್ಯದ ಬಳಿಕ ಆ ಬಾಲಕಿಯನ್ನು ಭೇಟಿ ಮಾಡಿದ ರೋಹಿತ್ ಶರ್ಮ, ಆಕೆಗೆ ಟೆಡ್ಡಿಬೇರ್ ಹಾಗೂ ಚಾಕ್ಲೇಟ್ ನೀಡಿ ಕ್ರೀಡಾಸ್ಫೂರ್ತಿ ತೋರಿದರು. ಇಂದು ದ್ವಿತೀಯ ಏಕದಿನ
ಸ್ಥಳ: ಲಾರ್ಡ್ಸ್, ಲಂಡನ್
ಆರಂಭ: ಸಂಜೆ 5.30
ಪ್ರಸಾರ: ಸೋನಿ ಸ್ಪೋರ್ಟ್ಸ್