Advertisement

12 ವರ್ಷದ ಬಳಿಕ ತಂಡಕ್ಕೆ ಆಯ್ಕೆಯಾದರೂ ಮೊದಲ ಟೆಸ್ಟ್ ಪಂದ್ಯಕ್ಕೆ ಉನಾದ್ಕಟ್ ಅಲಭ್ಯ

08:27 AM Dec 14, 2022 | Team Udayavani |

ನವದೆಹಲಿ: ಸೌರಾಷ್ಟ್ರ ತಂಡದ ನಾಯಕ ಎಡಗೈ ವೇಗಿ ಜಯ್‌ದೇವ್ ಉನಾದ್ಕಟ್ ಬಾಂಗ್ಲಾ ವಿರುದ್ಧ ಮೊದಲ ಟೆಸ್ಟ್‌ ಪಂದ್ಯಕ್ಕೆ ಆಯ್ಕೆಯಾಗಿದ್ದರೂ, ಅವರು ಮೊದಲ ಟೆಸ್ಟ್‌ ಆಡಲು ಅಲಭ್ಯವಾಗಿರಲಿದ್ದಾರೆ ಎಂದು ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

Advertisement

ಬಾಂಗ್ಲಾ ಪ್ರವಾಸದಿಂದ ಹೊರಗುಳಿದಿರುವ ಮೊಹಮ್ಮದ್‌ ಶಮಿ ಅವರ ಜಾಗದಲ್ಲಿ ಆಡಲು ಅವಕಾಶ ಪಡೆದುಕೊಂಡಿದ್ದಾರೆ.  ಮೊದಲ ಪಂದ್ಯ ಆರಂಭಕ್ಕೂ ಮುನ್ನ ಉನಾದ್ಕಟ್ ಅವರು ಇಲ್ಲಿಗೆ ತಲುಪುದಿಲ್ಲ. ಒಂದು ವೇಳೆ ಅವರ ವೀಸಾ ಪೇಪರ್‌ ನ ಸಮಸ್ಯೆಗಳು ಸರಿಯಾಗಿ ಅವರು ಇಲ್ಲಿಗೆ ತಲುಪಿದರೂ ಆದಾಗಲೇ ಟೆಸ್ಟ್‌ ಆರಂಭವಾಗಿರುತ್ತದೆ ಎಂದು ಬಿಸಿಸಿಐ ಮೂಲಗಳನ್ನು ಆಧಾರಿಸಿ ವರದಿ ಹೇಳಿದೆ.

ವೀಸಾ ಸಮಸ್ಯೆಯ ಕಾರಣದಿಂದ ಉನಾದ್ಕತ್ ಸೂಕ್ತ ಸಮಯಕ್ಕೆ ತಲುಪಲು ಆಗಿಲ್ಲ. ಅವರಿನ್ನೂ ಭಾರತದಲ್ಲೇ ಉಳಿದಿದ್ದಾರೆ  ಎಂದು ವರದಿ ತಿಳಿಸಿದೆ.

31 ವರ್ಷ ವಯಸ್ಸಿನ ಎಡಗೈ ವೇಗಿ ಉನಾದ್ಕತ್ 2010 ರಲ್ಲಿ ಸೆಂಚುರಿಯನ್‌ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ಏಕೈಕ ಟೆಸ್ಟ್ ಆಡಿದ್ದರು. ಅಲ್ಲಿಂದೀಚೆಗೆ, ಅವರು ಏಳು ಏಕದಿನ ಮತ್ತು 10 ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ದೇಶಿಯ ಕ್ರಿಕೆಟ್‌ ನಲ್ಲಿ ಉನಾದ್ಕಟ್ ಸೌರಾಷ್ಟ್ರ ತಂಡವನ್ನು ಮುನ್ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next