Advertisement
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ ಪಟ್ಟ ಭಾರತ 5 ವಿಕೆಟಿಗೆ 196 ರನ್ ಪೇರಿಸಿತು. ಹಾರ್ದಿಕ್ ಪಾಂಡ್ಯ ಅಜೇಯ ಅರ್ಧ ಶತಕದ ಮೂಲಕ ತಂಡದ ಸವಾಲಿನ ಮೊತ್ತಕ್ಕೆ ಕಾರಣರಾದರು. ದೊಡ್ಡ ಗುರಿ ಬೆನ್ನಟ್ಟಿದ ಬಾಂಗ್ಲಾ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಲಷ್ಟೇ ಶಕ್ತವಾಯಿತು.
Related Articles
37 ರನ್ ಮಾಡಿದ ವಿರಾಟ್ ಕೊಹ್ಲಿ ವಿಶ್ವಕಪ್‌ಗ್ಳಲ್ಲಿ (ಟಿ20 ಪ್ಲಸ್ ಏಕದಿನ) 3 ಸಾವಿರ ರನ್ ಪೂರೈ ಸಿದ ಪ್ರಥಮ ಕ್ರಿಕೆಟಿಗನೆನಿಸಿದರು. ಇವರನ್ನು ತಾಂಜಿಮ್ ಹಸನ್ ಬೌಲ್ಡ್ ಮಾಡಿದರು.
Advertisement
ಸೂರ್ಯಕುಮಾರ್ ಬಂದವರೇ ಒಂದು ಸಿಕ್ಸ್ ಎತ್ತಿದರು. ಮುಂದಿನ ಎಸೆತದಲ್ಲೇ ಔಟಾದರು. 10 ಓವರ್ ಅಂತ್ಯಕ್ಕೆ ಭಾರತ 3 ವಿಕೆಟಿಗೆ 83 ರನ್ ಮಾಡಿತ್ತು.ರಿಷಭ್ ಪಂತ್ ಆಕ್ರಮಣ ಕಾರಿ ಬೀಸುಗೆಯಲ್ಲಿ 36 ರನ್ ಬಾರಿಸಿದರು (4 ಫೋರ್, 2 ಸಿಕ್ಸರ್). ಸಾಕಷ್ಟು ಟೀಕೆಗೊಳಗಾಗಿದ್ದ ಶಿವಂ ದುಬೆ 24 ಎಸೆತಗಳಿಂದ 36 ರನ್ ಕೊಡುಗೆ ಸಲ್ಲಿಸಿದರು. ಇದರಲ್ಲಿ 3 ಸಿಕ್ಸರ್ ಸೇರಿತ್ತು.
ಹಾರ್ದಿಕ್ ಪಾಂಡ್ಯ ಫಿಫ್ಟಿಹಾರ್ದಿಕ್ ಪಾಂಡ್ಯ ಡೆತ್ ಓವರ್‌ಗಳಲ್ಲಿ ಸಿಡಿದು ನಿಂತು ತಂಡದ ಮೊತ್ತವನ್ನು ಹೆಚ್ಚಿಸುವಲ್ಲಿ ನೆರವಾದರು. ಕೊನೆಯ ಎಸೆತವನ್ನು ಬೌಂಡರಿಗೆ ಬಡಿದಟ್ಟಿ ಅರ್ಧ ಶತಕ ಪೂರ್ತಿಗೊಳಿಸಿದರು. 27 ಎಸೆತ ಗಳಲ್ಲಿ ದಾಖಲಾಯಿತು. ಸಿಡಿಸಿದ್ದು 4 ಬೌಂಡರಿ ಹಾಗೂ 3 ಸಿಕ್ಸರ್. ಬದಲಾಗದ ತಂಡ
ಭಾರತ ತನ್ನ ಆಡುವ ಬಳಗದಲ್ಲಿ ಯಾವುದೇ ಬದಲಾವಣೆ ಮಾಡಿ ಕೊಳ್ಳಲಿಲ್ಲ. ಹೀಗಾಗಿ ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ ಕಾಯು ವವರ ಯಾದಿಯಲ್ಲಿಯೇ ಉಳಿ ದರು. ಬಾಂಗ್ಲಾದೇಶ ತಂಡದಿಂದ ತಸ್ಕಿನ್ ಅಹ್ಮದ್ ಹೊರಗುಳಿದರು. ಸಂಕ್ಷಿಪ್ತ ಸ್ಕೋರ್
ಭಾರತ-5 ವಿಕೆಟಿಗೆ 196 (ರೋಹಿತ್ 23, ಕೊಹ್ಲಿ 37, ಪಂತ್ 36, ಸೂರ್ಯ 6, ದುಬೆ 34, ಪಾಂಡ್ಯ ಔಟಾಗದೆ 50, ತಾಂಜಿಮ್ 32ಕ್ಕೆ 2, ರಿಶಾದ್ 43ಕ್ಕೆ 2). ಬಾಂಗ್ಲಾದೇಶ 8 ವಿಕೆಟಿಗೆ 146 (ತಂಜಿದ್ ಹಸನ್ 29, ನಜ್ಮುಲ್ ಹೊಸೈನ್ ಶಾಂಟೊ 40,ರಿಶಾದ್ ಹೊಸೈನ್ 24, ಕುಲದೀಪ್ ಯಾದವ್ 19ಕ್ಕೆ 3,ಬುಮ್ರಾ 13ಕ್ಕೆ 2, ಅರ್ಶದೀಪ್ ಸಿಂಗ್ 30ಕ್ಕೆ 2) ವಿಂಡೀಸ್‌ಗೆ ಸೆಮಿಫೈನಲ್ ಹೋಪ್
ಅಮೆರಿಕ ವಿರುದ್ಧ 9 ವಿಕೆಟ್ ಜಯ… ಪೈಪೋಟಿ ತೀವ್ರ ಬ್ರಿಜ್‌ಟೌನ್ (ಬಾರ್ಬಡಾಸ್): ಸಹ ಆತಿಥೇಯ ರಾಷ್ಟ್ರವಾದ ಅಮೆರಿಕವನ್ನು 9 ವಿಕೆಟ್‌ಗಳಿಂದ ಬಗ್ಗುಬಡಿದ ವೆಸ್ಟ್ ಇಂಡೀಸ್ ಸೂಪರ್-8 ವಿಭಾಗದಲ್ಲಿ ಗೆಲುವಿನ ಖಾತೆ ತೆರೆದಿದೆ. ಇದರೊಂದಿಗೆ ಎರಡನೇ ಗ್ರೂಪ್‌ನಲ್ಲಿ ಪೈಪೋಟಿ ತೀವ್ರಗೊಂಡಿದೆ. ಬ್ರಿಜ್‌ಟೌನ್‌ನಲ್ಲಿ ನಡೆದ ಮುಖಾಮುಖೀಯಲ್ಲಿ ಅಮೆರಿಕವನ್ನು 19.5 ಓವರ್‌ಗಳಲ್ಲಿ ಹಿಡಿದು ನಿಲ್ಲಿಸಿದ ವೆಸ್ಟ್ ಇಂಡೀಸ್, 10.5 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 130 ರನ್ ಬಾರಿಸಿ ವಿಜಯೋತ್ಸವ ಆಚರಿಸಿತು. ಇದರೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತು. ಎರಡೂ ಪಂದ್ಯ ಗೆದ್ದ ದಕ್ಷಿಣ ಆಫ್ರಿಕಾ ಅಗ್ರಸ್ಥಾನದಲ್ಲಿದೆ. ವೆಸ್ಟ್ ಇಂಡೀಸನ್ನು ಮಣಿಸಿರುವ ಇಂಗ್ಲೆಂಡ್ ಕೂಡ 2 ಅಂಕ ಹೊಂದಿದ್ದು, ರನ್‌ರೇಟ್‌ನಲ್ಲಿ ಹಿಂದಿರುವ ಕಾರಣ 3ನೇ ಸ್ಥಾನದಲ್ಲಿದೆ. ಇಂಗ್ಲೆಂಡ್‌ನ ಮುಂದಿನ ಎದುರಾಳಿ ಅಮೆರಿಕವಾದ ಕಾರಣ ಹಾಲಿ ಚಾಂಪಿಯನ್ನರ ಮೇಲೆ ಗೆಲುವಿನ ನಿರೀಕ್ಷೆ ಇರಿಸಿಕೊಳ್ಳಬಹುದು. ಆದರೆ ಕೊನೆಯ ಮುಖಾಮುಖೀ ದಕ್ಷಿಣ ಆಫ್ರಿಕಾ-ವೆಸ್ಟ್ ಇಂಡೀಸ್ ನಡುವೆ ಸಾಗಲಿದ್ದು, ಇಲ್ಲಿನ ಫಲಿತಾಂಶ ನಿರ್ಣಾಯಕವಾಗಲಿದೆ. ಹರಿಣಗಳ ಪಡೆ ಅಜೇಯ ಓಟ ಬೆಳೆಸಿದರೆ ವಿಂಡೀಸ್ ಹೊರಬೀಳಲಿದೆ! ಹೀಗಾಗಿ ಎರಡನೇ ಗ್ರೂಪ್‌ನಲ್ಲಿ ಪೈಪೋಟಿ ತೀವ್ರಗೊಂಡಿದೆ. ರಸೆಲ್, ಚೇಸ್ ದಾಳಿ
ಅಮೆರಿಕಕ್ಕೆ ಆ್ಯಂಡ್ರೆ ರಸೆಲ್ ಮತ್ತು ರೋಸ್ಟನ್ ಚೇಸ್ ಸೇರಿಕೊಂಡು ಕಡಿವಾಣ ಹಾಕಿದರು. ಇಬ್ಬರೂ 3 ವಿಕೆಟ್ ಉರುಳಿಸಿದರು. ದ್ವಿತೀಯ ವಿಕೆಟಿಗೆ ಆ್ಯಂಡ್ರೀಸ್ ಗೌಸ್ (29) ಮತ್ತು ನಿತೀಶ್ ಕುಮಾರ್ (20) 5.1 ಓವರ್‌ಗಳಲ್ಲಿ 48 ರನ್ ಒಟ್ಟುಗೂಡಿಸಿದಾಗ ಅಮೆರಿಕ ದೊಡ್ಡ ಮೊತ್ತದ ಸೂಚನೆ ನೀಡಿತ್ತು. ಈ ಜೋಡಿಯನ್ನು ಗುಡಕೇಶ್ ಮೋಟಿ ಬೇರ್ಪಡಿಸಿದ ಬಳಿಕ ಯುಎಸ್‌ಎ ಕುಸಿತ ಮೊದಲ್ಗೊಂಡಿತು. ಚೇಸಿಂಗ್ ವೇಳೆ ರನ್‌ರೇಟ್ ಹೆಚ್ಚಿಸುವ ಗುರಿ ಇರಿಸಿಕೊಂಡಿದ್ದ ವಿಂಡೀಸಿಗೆ ಶೈ ಹೋಪ್ ಆಪತಾºಂಧವರಾಗಿ ಪರಿಣಮಿಸಿದರು. ಇವರದು ಅಜೇಯ 82 ರನ್ ಕೊಡುಗೆ. ಎದುರಿಸಿದ್ದು 39 ಎಸೆತ, ಸಿಡಿಸಿದ್ದು 4 ಫೋರ್ ಹಾಗೂ 8 ಸಿಕ್ಸರ್. ಜಾನ್ಸನ್ ಚಾರ್ಲ್ಸ್ 15 ಮತ್ತು ನಿಕೋಲಸ್ ಪೂರಣ್ ಅಜೇಯ 27 ರನ್ ಹೊಡೆದರು. ಸಿಕ್ಸರ್ ದಾಖಲೆ ಪತನ
ಪೂರಣ್ ಈ ವಿಶ್ವಕಪ್‌ನಲ್ಲಿ ಅತ್ಯಧಿಕ 17 ಸಿಕ್ಸರ್ ಸಿಡಿಸಿ ಕ್ರಿಸ್ ಗೇಲ್ ದಾಖಲೆಯನ್ನು ಮುರಿದರು. ಗೇಲ್ 2012ರ ಆವೃತ್ತಿಯಲ್ಲಿ 16 ಸಿಕ್ಸರ್ ಬಾರಿಸಿದ್ದರು. ಈ ವಿಶ್ವಕಪ್‌ನಲ್ಲಿ ಸರ್ವಾಧಿಕ 412 ಸಿಕ್ಸರ್ ಸಿಡಿಯಲ್ಪಟ್ಟಿತು. 2021ರಲ್ಲಿ 405 ಸಿಕ್ಸರ್ ಬಾರಿಸಲ್ಪಟ್ಟದ್ದು ಈವರೆಗಿನ ದಾಖಲೆ ಆಗಿತ್ತು. ಸಂಕ್ಷಿಪ್ತ ಸ್ಕೋರ್: ಅಮೆರಿಕ-19.5 ಓವರ್‌ಗಳಲ್ಲಿ 128 (ಗೌಸ್ 29, ನಿತೀಶ್ 20, ಮಿಲಿಂದ್ 19, ಚೇಸ್ 19ಕ್ಕೆ 3, ರಸೆಲ್ 31ಕ್ಕೆ 3). ವೆಸ್ಟ್ ಇಂಡೀಸ್-10.5 ಓವರ್‌ಗಳಲ್ಲಿ ಒಂದು ವಿಕೆಟಿಗೆ 130 (ಹೋಪ್ ಔಟಾಗದೆ 82, ಪೂರಣ್ ಔಟಾಗದೆ 27, ಚಾರ್ಲ್ಸ್ 15, ಹರ್ಮೀತ್ 18ಕ್ಕೆ 1).
ಪಂದ್ಯಶ್ರೇಷ್ಠ: ರೋಸ್ಟನ್ ಚೇಸ್.