Advertisement
ಈ ಪಂದ್ಯ ಕೂಡ “ಶೇರ್ ಎ ಬಾಂಗ್ಲಾ ಸ್ಟೇಡಿಯಂ’ನಲ್ಲೇ ನಡೆಯಲಿದೆ. ಇಲ್ಲಿನ ಟ್ರ್ಯಾಕ್ ಹೇಗೆ ವರ್ತಿಸುತ್ತದೆ ಎಂಬುದು ಈಗಾಗಲೇ ಸಾಬೀತಾಗಿದೆ. ಇದು ಅಪ್ಪಟ ಬೌಲಿಂಗ್ ಟ್ರ್ಯಾಕ್. ಸ್ಪಿನ್ ಮತ್ತು ಫಾಸ್ಟ್ ಬೌಲರ್‌ಗಳಿಬ್ಬರೂ ಇದರ ಪ್ರಯೋಜನ ಎತ್ತಬಲ್ಲರು. ಬಾಂಗ್ಲಾ ಪರ ಶಕಿಬ್ ಅಲ್ ಹಸನ್, ಇಬಾದತ್ ಹುಸೇನ್; ಭಾರತದ ಸರದಿಯಲ್ಲಿ ಮೊಹಮ್ಮದ್ ಸಿರಾಜ್, ಕುಲದೀಪ್ ಸೇನ್, ವಾಷಿಂಗ್ಟನ್ ಸುಂದರ್ ಅವರೆಲ್ಲ ಈ ಪಿಚ್‌ನ ಭರಪೂರ ಲಾಭವೆತ್ತಿದ್ದಾರೆ. ಬ್ಯಾಟಿಂಗ್ ಮಾತ್ರ ಬಹಳ ಕಷ್ಟವಾಗಿತ್ತು.
Related Articles
Advertisement
ಭಾರತ ಕೊನೆಯ ಸಲ 2015ರಲ್ಲಿ ಧೋನಿ ಸಾರಥ್ಯದಲ್ಲಿ ಬಾಂಗ್ಲಾದೇಶ ಪ್ರವಾಸ ಕೈಗೊಂಡಾಗ ಏಕದಿನ ಸರಣಿಯನ್ನು 1-2ರಿಂದ ಕಳೆದುಕೊಂಡಿತ್ತು. ಮೊದಲೆರಡು ಪಂದ್ಯಗಳನ್ನು ಬಾಂಗ್ಲಾ ಗೆದ್ದು ಸರಣಿ ವಶಪಡಿಸಿಕೊಂಡ ಬಳಿಕ ಭಾರತ ಸಮಾಧಾನಕರ ಗೆಲುವು ಸಾಧಿಸಿತ್ತು.
ಬದಲಾವಣೆ ಸಾಧ್ಯತೆದ್ವಿತೀಯ ಪಂದ್ಯಕ್ಕಾಗಿ ಭಾರತದ ಬ್ಯಾಟಿಂಗ್ ಹಾಗೂ ಕೀಪಿಂಗ್ ವಿಭಾಗ ದಲ್ಲಿ ಒಂದಿಷ್ಟು ಬದಲಾವಣೆ ಸಂಭವಿಸ ಬಹುದು. ರಾಹುಲ್ ಅವರನ್ನು ಕೀಪಿಂಗ್ ಆಗಿ ಮುಂದುವರಿಸಬೇಕೇ ಎಂಬುದು ಮುಖ್ಯ ಪ್ರಶ್ನೆ. ಇವರನ್ನು ಮತ್ತೆ ಆರಂಭಿಕನನ್ನಾಗಿ ಇಳಿಸಿ ಇಶಾನ್ ಕಿಶನ್ ಕೈಗೆ ಗ್ಲೌಸ್ ತೊಡಿಸುವ ಸಾಧ್ಯತೆಯೊಂದಿದೆ. ಮೊದಲ ಪಂದ್ಯಕ್ಕೆ 6 ಮಂದಿ ಬೌಲರ್ ಪ್ಲಸ್ ಆಲ್‌ರೌಂಡರ್‌ಗಳನ್ನು ಸೇರಿಸಿಕೊಂಡು ತಂಡವನ್ನು ಕಟ್ಟಲಾಗಿತ್ತು. ಇವರಲ್ಲಿ ಒಬ್ಬರನ್ನು ಕೈಬಿಟ್ಟು ರಜತ್ ಪಾಟೀದಾರ್ ಅಥವಾ ರಾಹುಲ್ ತ್ರಿಪಾಠಿ ಅವರನ್ನು ಆಡಿಸಿದರೆ ಬ್ಯಾಟಿಂಗ್ ವಿಭಾಗ ಇನ್ನಷ್ಟು ಬಲಗೊಳ್ಳುವುದರಲ್ಲಿ ಅನುಮಾನವಿಲ್ಲ. ಮೊದಲ ಪಂದ್ಯವನ್ನು ರೋಮಾಂಚ ಕಾರಿಯಾಗಿ ಗೆದ್ದ ಬಾಂಗ್ಲಾದೇಶ ಸಹಜ ವಾಗಿಯೇ ಸಂಭ್ರಮದಲ್ಲಿದೆ. ತವರಿನಲ್ಲಿ ತಾನು ಯಾವತ್ತೂ ಅಪಾಯಕಾರಿ ಎಂಬುದನ್ನು ಅದು ಮತ್ತೂಮ್ಮೆ ಸಾಬೀತುಪಡಿಸಿದೆ. ಭಾರತ ಇನ್ನಷ್ಟು ಎಚ್ಚರಿಕೆಯಿಂದ ಆಡಬೇಕಿದೆ.