Advertisement

ಭಾರತ – ದ.ಆಫ್ರಿಕಾ ಪ್ರಥಮ ಏಕದಿನ ಮಳೆಗೆ ಬಲಿ ; ಟಾಸ್ ಗೂ ಅವಕಾಶ ನೀಡದ ವರುಣ

10:23 AM Mar 13, 2020 | Hari Prasad |

ಧರ್ಮಶಾಲಾ: ಇಲ್ಲಿ ಇಂದು ನಡೆಯಬೇಕಿದ್ದ ಭಾರತ ಮತ್ತು ಪ್ರವಾಸಿ ದಕ್ಷಿಣ ಅಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯಕ್ಕೆ ಮಳೆ ಕಾಟ ನೀಡಿದೆ. ಟಾಸ್ ನಡೆಯುವುದಕ್ಕೂ ಅರ್ಧ ಗಂಟೆ ಮೊದಲು ವಾತಾವರಣ ಶುಭ್ರವಾಗಿತ್ತು. ಆದರೆ ಆ ಬಳಿಕ ಸುರಿಯಲಾರಂಭಿಸಿದ ಮಳೆ ನಿಲ್ಲಲೇ ಇಲ್ಲ.

Advertisement

ಮಳೆ ನಿಂತ ಬಳಿಕ ಮೈದಾನ ಒಣಗಿಸುವ ಪ್ರಯತ್ನವೂ ಫಲ ನೀಡಲಿಲ್ಲ. ಇದು ಈ ಮೈದಾನದಲ್ಲಿ ಒಂದೂ ಎಸೆತ ಕಾಣದೆ ರದ್ದಾಗುತ್ತಿರುವ ಎರಡನೇ ಪಂದ್ಯವಾಗಿದೆ. ಕಳೆದ ವರ್ಷದ ಸೆಪ್ಟಂಬರ್ ತಿಂಗಳಿನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಏಕದನ ಪಂದ್ಯವೇ ಆಗಿದ್ದಿದು ವಿಶೇಷವಾಗಿದೆ.

ಇದೀಗ ಈ ಪಂದ್ಯ ರದ್ದಾಗಿರುವುದರಿಂದ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಸರಣಿ ಎರಡು ಪಂದ್ಯಗಳಿಗೆ ಸೀಮಿತಗೊಂಡಂತಾಗಿದೆ. ಮುಂದಿನ ಪಂದ್ಯ ಮಾರ್ಚ್ 15ರಂದು ಲಕ್ನೋದಲ್ಲಿ ನಡೆಯಲಿದೆ ಹಾಗೂ ಅಂತಿಮ ಪಂದ್ಯ ಮಾರ್ಚ್ 18ರಂದು ಕೊಲ್ಕೊತ್ತಾದಲ್ಲಿ ನಡೆಯಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next