Advertisement

ಪಾಕ್‌ ಉಗ್ರ ಸುರಕ್ಷಾ ಸ್ವರ್ಗ : ಭಾರತ, ಅಮೆರಿಕ ಜಂಟಿ ಹೇಳಿಕೆ

03:34 PM Sep 26, 2017 | Team Udayavani |

ಹೊಸದಿಲ್ಲಿ : ಭಾರತಕ್ಕೆ ದೊರಕಿರುವ ಅತ್ಯಂತ ಮಹತ್ವದ ಬೆಂಬಲವಾಗಿ ಅಮೆರಿಕ ರಕ್ಷಣಾ ಸಚಿವ ಜಿಮ್‌ ಮಾರ್ಟಿಸ್‌ ಅವರು ಇಂದ ಮಂಗಳವಾರ “ಜಗತ್ತಿನ ಯಾವುದೇ ಭಾಗದಲ್ಲಿ ಉಗ್ರರ ಸುರಕ್ಷಿತ ತಾಣಗಳಿರುವುದನ್ನು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಆಡಳಿತೆ ಎಷ್ಟು ಮಾತ್ರಕ್ಕೂ ಸಹಿಸುವುದಿಲ್ಲ’ ಎಂದು ಹೇಳಿದ್ದಾರೆ.

Advertisement

“ವಿಶ್ವದಲ್ಲಿ ಎಲ್ಲಿಯೂ ಭಯೋತ್ಪಾದಕರ ಸುರಕ್ಷಿತ ತಾಣಗಳು ಇರುವುದನ್ನು ಜಾಗತಿಕ ನೇತಾರ ದೇಶಗಳಾಗಿರುವ ಅಮೆರಿಕ ಮತ್ತು ಭಾರತ ಎಷ್ಟು ಮಾತ್ರಕ್ಕೂ ಸಹಿಸದಿರುವ ಮತ್ತು ಅವುಗಳನ್ನು ನಾಶಪಡಿಸುವ ಸಂಕಲ್ಪವನ್ನೇ ತಳೆದಿವೆ’ ಎಂದು ಮ್ಯಾಟಿಸ್‌ ಅವರು ಪಾಕಿಸ್ಥಾನವನ್ನು ಹೆಸರಿಸದೆ, ಭಾರತದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರೊಂದಿಗಿನ ಮಾತುಕತೆಯಲ್ಲಿ ಹೇಳಿದರು. 

ಭಯೋತ್ಪಾದನೆಯು ಉಭಯ ದೇಶಗಳನ್ನು ಪೀಡಿಸುವ ಸಮಾನ ಶತ್ರುಗಳಾಗಿವೆ ಎಂದು ಹೇಳಿದ ಮ್ಯಾಟಿಸ್‌ “ನಮ್ಮ ಎರಡೂ ದೇಶಗಳು ವಿಶ್ವ ಭಯೋತ್ಪಾದನೆಯು ಜಗತ್ತಿನಾದ್ಯಂತದ ಜನರಿಗೆ ಬೆದರಿಕೆ ಒಡ್ಡುತ್ತಿರುವುದನ್ನು ಗುರುತಿಸಿವೆ’ ಎಂದು ಹೇಳಿದರು. 

ಸಭೆಯ ಬಳಿಕ ಜಂಟಿ ಹೇಳಿಕೆಯೊಂದನ್ನು ಹೊರಡಿಸಲಾಗಿ, “ಭಯೋತ್ಪಾದನೆಯ ಪಿಡುಗಿನ ವಿರುದ್ಧ ಭಾರತ ಮತ್ತು ಅಮೆರಿಕ ಜತೆಗೂಡಿ ಹೋರಾಡುವ ಅಗತ್ಯ ಇದೆ’  ಎಂದು ಕರೆ ನೀಡಲಾಯಿತು. 

“ನಾವು ಹಿಂದೂ ಮಹಾಸಾಗರ ವಲಯದಲ್ಲಿ ಭಾರತದ ನಾಯಕತ್ವವನ್ನು ಪ್ರಶಂಸಿಸುತ್ತೇವೆ; ಭಯೋತ್ಪಾದನೆ ವಿರುದ್ದ ಹೋರಾಡಲು ಸಮರ್ಥ ಹಾಗೂ ಸಶಕ್ತ ಪ್ರಾದೇಶಿಕ ವ್ಯವಸ್ಥೆಯನ್ನು ರೂಪಿಸುವ ದಿಶೆಯಲ್ಲಿ ಭಾರತದ ಜತೆಗೂಡಿ ಕೆಲಸ ಮಾಡಲು ನಾವು ಬಯಸುತ್ತೇವೆ’ ಎಂದು ಮ್ಯಾಟಿಸ್‌ ಹೇಳಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next