Advertisement

ತ್ರಿಪಕ್ಷೀಯ ತೈಲ ಒಪ್ಪಂದ?

06:00 AM Jun 24, 2018 | |

ಹೊಸದಿಲ್ಲಿ: ತೈಲ ದರದಲ್ಲಿನ ಗಣನೀಯ ಹೆಚ್ಚಳವು ಗ್ರಾಹಕರಿಗೆ ಬಿಸಿ ಮುಟ್ಟಿಸಿರುವ ನಡುವೆಯೇ, ಭಾರತ, ಯುಎಇ ಮತ್ತು ಸೌದಿ ಅರೇಬಿಯಾವು ಹೊಸ ತ್ರಿಪಕ್ಷೀಯ ಒಪ್ಪಂದವೊಂದಕ್ಕೆ ಬರುವ ಸುಳಿವು ಸಿಕ್ಕಿದೆ. ಮುಂದಿನ ವಾರ ಯುಎಇ ವಿದೇಶಾಂಗ ಸಚಿವ ಶೇಖ್‌ ಅಬ್ದುಲ್ಲಾ ಬಿನ್‌ ಝಯೇದ್‌ ಅಲ್‌ ನಹ್ಯಾನ್‌ ಅವರು ಭಾರತಕ್ಕೆ ಭೇಟಿ ನೀಡಲಿದ್ದು, ಈ ವೇಳೆ ಮಹತ್ವದ ಒಪ್ಪಂದ ನಡೆಯುವ ಸಾಧ್ಯತೆಯಿದೆ.

Advertisement

ಭಾರತದ 6 ನಗರಗಳಿಗೆ ನಹ್ಯಾನ್‌ ಅವರು ಭೇಟಿ ನೀಡಲಿದ್ದು, ಭಾರತ ಮತ್ತು ಯುಎಇ ಜತೆಯಾಗಿ ಸೌದಿ ಅರೇಬಿಯಾದೊಂದಿಗೆ ತ್ರಿಪಕ್ಷೀಯ ಸಹಕಾರ ಹೊಂದಲಿವೆ. ರತ್ನಗಿರಿ ರಿಫೈನರಿ ಆ್ಯಂಡ್‌ ಪೆಟ್ರೋಕೆಮಿಕಲ್ಸ್‌ ಲಿಮಿಟೆಡ್‌ಗೆ ಸಂಬಂಧಿಸಿ ಇದೇ 25ರಂದು ಸೌದಿ ಅರಾಮೊ ಮತ್ತು ಅಬುಧಾಬಿ ನ್ಯಾಷನಲ್‌ ಆಯಿಲ್‌ ಕಂಪನಿ(ಅಡ್ನಾಕ್‌) ಒಪ್ಪಂದಕ್ಕೆ ಸಹಿ ಹಾಕಲಿವೆ. ತೈಲ ದರದ ಏರಿಕೆಯಿಂದ ಸಮಸ್ಯೆ ಎದುರಿಸುತ್ತಿರುವ ಭಾರತಕ್ಕೆ ಈ ಒಪ್ಪಂದ ಬಹಳಷ್ಟು ನೆರವಾಗಲಿದೆ ಎಂದು ದಿ ಎಕನಾಮಿಕ್‌ ಟೈಮ್ಸ್‌ ವರದಿ ಮಾಡಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಎರಡು ತೈಲ ಸಮೃದ್ಧ ಗಲ್ಫ್ ರಾಷ್ಟ್ರಗಳೊಂದಿಗೆ ಭಾರತ ನಡೆಸುತ್ತಿರುವ ಮೊದಲ ತ್ರಿಪಕ್ಷೀಯ ಒಪ್ಪಂದ ಇದಾಗಿರಲಿದೆ. 

ಫೆಬ್ರವರಿಯಲ್ಲಷ್ಟೇ ಪ್ರಧಾನಿ ಮೋದಿ ಅವರು ಗಲ್ಫ್ ರಾಷ್ಟ್ರಕ್ಕೆ ಭೇಟಿ ನೀಡಿದ್ದರು. ಆಗ ಮಂಗಳೂರಿನಲ್ಲಿರುವ ವ್ಯೂಹಾತ್ಮಕ ತೈಲ ಸಂಗ್ರಹಾಗಾರಕ್ಕೆ ತೈಲ ಪೂರೈಕೆ ಮಾಡುವ ಕುರಿತು ಅಡ್ನಾಕ್‌ ಮತ್ತು ಐಎಸ್‌ಪಿಆರ್‌ಎಲ್‌(ಇಂಡಿಯನ್‌ ಸ್ಟ್ರಾಟಜಿಕ್‌ ಪೆಟ್ರೋಲಿಯಂ ರಿಸರ್ವ್‌ ಲಿ.) ಒಪ್ಪಂದ ಮಾಡಿಕೊಂಡಿದ್ದವು. 

Advertisement

Udayavani is now on Telegram. Click here to join our channel and stay updated with the latest news.

Next