Advertisement

30 ಎಂಕ್ಯೂ-9ಬಿ ಡ್ರೋನ್‌ಗಳ ಖರೀದಿಗೆ ಒಪ್ಪಂದ

09:07 PM Feb 02, 2023 | Team Udayavani |

ವಾಷಿಂಗ್ಟನ್‌: 300 ಕೋಟಿ ಅಮೆರಿಕನ್‌ ಡಾಲರ್‌ ವೆಚ್ಚದಲ್ಲಿ 30 ಎಂಕ್ಯೂ-9ಬಿ ಪ್ರಿಡೇಟರ್‌ ಶಸ್ತ್ರಸಜ್ಜಿತ ಡ್ರೋನ್‌ಗಳ ಖರೀದಿಗೆ ಭಾರತ ಮತ್ತು ಅಮೆರಿಕ ನಡುವೆ ಗುರುವಾರ ಒಪ್ಪಂದ ಏರ್ಪಟ್ಟಿತು. ಇದು ಹಿಂದೂ ಮಹಾಸಮುದ್ರ ಮತ್ತು ದೇಶದ ಗಡಿಯ ವಾಸ್ತವಿಕ ಗಡಿ ನಿಯಂತ್ರಣ ರೇಖೆ(ಎಲ್‌ಎಸಿ) ಉದ್ದಕ್ಕೂ ಒಟ್ಟಾರೆ ಕಣ್ಗಾವಲು ಬಲಪಡಿಸಲು ಭಾರತಕ್ಕೆ ಸಹಕಾರಿಯಾಗಿದೆ.

Advertisement

ಐದು ವರ್ಷಗಳ ಪ್ರಯತ್ನದ ನಂತರ ಉಭಯ ದೇಶಗಳ ನಡುವೆ ಎಂಕ್ಯೂ-9ಬಿ ಪ್ರಿಡೇಟರ್‌ ಶಸ್ತ್ರಸಜ್ಜಿತ ಡ್ರೋನ್‌ಗಳ ಒಪ್ಪಂದ ಏರ್ಪಟ್ಟಿದೆ. ಇದು ಭಾರತದ ರಾಷ್ಟ್ರೀಯ ಭದ್ರತೆಯನ್ನು ಹೆಚ್ಚಿಸುವ ಜತೆಗೆ ರಕ್ಷಣಾ ಅವಶ್ಯಕತೆಗಳನ್ನು ಪೂರೈಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೊಂದೆಡೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರು ಅಮೆರಿಕ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ಪ್ರಸ್ತುತ ಜಾಗತಿಕ ಮತ್ತು ಪ್ರಾದೇಶಿಕ ವಿಷಯಗಳ ಬಗ್ಗೆ ಚರ್ಚಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next