Advertisement

ಜಿಎಸ್‌ಟಿ ಜಾರಿಯಿಂದ ಸೀಮೋಲ್ಲಂಘನ: ಬ್ರಿಕ್ಸ್‌ನಲ್ಲಿ ಮೋದಿ

06:56 PM Sep 04, 2017 | udayavani editorial |

ಕ್ಸಿಯಾಮೆನ್‌ (ಚೀನ): ಭಾರತವು ಅತ್ಯಂತ ಕ್ಷಿಪ್ರಗತಿಯಲ್ಲಿ ಬದಲಾವಣೆಯನ್ನು ಕಾಣುತ್ತಾ  ವಿಶ್ವದ ಅತ್ಯಂತ ಮುಕ್ತ ಆರ್ಥಿಕ ರಾಷ್ಟ್ರಗಳಲ್ಲಿ ಒಂದಾಗಿ ಮೂಡಿಬರುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಂದು ಬ್ರಿಕ್ಸ್‌ ಶೃಂಗದಲ್ಲಿ ನುಡಿದರು. 

Advertisement

ಭಾರತ ಸರಕಾರ ಐತಿಹಾಸಿಕ ಮಹತ್ವದ ಹಾಗೂ ಕ್ರಾಂತಿಕಾರಕ ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್‌ಟಿ) ಜಾರಿಗೆ ತರುವ ಮೂಲಕ ಆರ್ಥಿಕ ರಂಗದಲ್ಲಿ ಭಾರೀ ದೊಡ್ಡ ಸೀಮೋಲ್ಲಂಘನ ಸಾಧಿಸಿದೆ; ಆ ಮೂಲಕ ದೇಶದ ಹಣಕಾಸು ಮಾರುಕಟ್ಟೆಗಳು ಬೆಸೆದುಕೊಂಡಿವೆ. ಡಿಜಿಟಲ್‌ ಮಾಧ್ಯಮದ ಮೂಲಕ ಹಣ ಪಾವತಿ, ವಹಿವಾಟು ನಡೆಸುವಿಕೆ ಮುಂತಾದ ಕ್ರಮಗಳಿಗೆ ಚುರುಕು ಮುಟ್ಟಿದೆ; ಸ್ಥಳೀಯ ಉತ್ಪಾದಕರಿಗೆ ವಿಶೇಷ ಉತ್ತೇಜನ ಪ್ರಾಪ್ತವಾಗಿದೆ ಎಂದು ಮೋದಿ ಹೇಳಿದರು. 

ಭಾರತಕ್ಕೆ ಹರಿದುಬರುತ್ತಿರುವ ನೇರ ವಿದೇಶೀ ಬಂಡವಾಳ ಇಂದು ಸಾರ್ವಕಾಲಿಕ ಎತ್ತರವನ್ನು ತಲುಪಿದ್ದು ಶೇ.40ರ ಹೆಚ್ಚಳವನ್ನು ಸಾಧಿಸಲಾಗಿದೆ ಎಂದು ಮೋದಿ ಹೇಳಿದರು. 

ಬ್ರಿಕ್ಸ್‌ ಕೌನ್ಸಿಲ್‌ ಮತ್ತು ಹೊಸ ಅಭಿವೃದ್ಧಿ ಬ್ಯಾಂಕ್‌ ನಡುವೆ ಏರ್ಪಟ್ಟಿರುವ ತಿಳಿವಳಿಕೆ ಒಪ್ಪಂದವನ್ನು ಮೋದಿ ಸ್ವಾಗತಿಸಿ ಪ್ರಶಂಸಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next